More

    ನಕಲಿ ಶಿಕ್ಷಕ ನೇಮಕಾತಿ ಪ್ರಕ್ರಿಯೆಗೆ ಕೊನೆಯೇ ಇಲ್ಲವೆ?

    ಲಖನೌ:ಅನಾಮಿಕಾ ಶುಕ್ಲಾ ಪ್ರಕರಣದ ನಂತರ ಅಂಥದೇ ಮತ್ತೊಂದು ಪ್ರಕರಣವನ್ನು ಉತ್ತರ ಪ್ರದೇಶದ ಎಸ್​ಟಿಎಫ್ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಶಿಕ್ಷಕ ಹುದ್ದೆ ಪಡೆಯಲು ಬೇರೊಬ್ಬ ಅಭ್ಯರ್ಥಿಯ ದಾಖಲೆಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾದ ಮತ್ತೊಂದು ಪ್ರಕರಣವನ್ನು ಉತ್ತರ ಪ್ರದೇಶದ ಎಸ್‌ಟಿಎಫ್ ಪತ್ತೆ ಮಾಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

    ಅನಾಮಿಕಾ ಶುಕ್ಲಾ ನಂತರ, ಈಗ ಕೌಶಂಬಿಯ ಶಿಕ್ಷಕಿ ದೀಪ್ತಿ ಸಿಂಗ್ ಸರದಿ. ಮೂವರು ಮಹಿಳೆಯರಿಗೆ ಉದ್ಯೋಗ ನೀಡಲು ಅವರ ದಾಖಲೆಗಳನ್ನು ಬಳಸಲಾಗಿದೆ ಎಂದು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬುಧವಾರ ತಿಳಿಸಿದೆ. ಜೌನ್‌ಪುರದಲ್ಲಿ ಮೂವರು ನಕಲಿ ದೀಪ್ತಿ ಸಿಂಗ್‌ ಪೈಕಿ ಒಬ್ಬರು ಪತ್ತೆಯಾಗಿದ್ದು, ಆಕೆ ಅನಾಮಿಕಾ ಶುಕ್ಲಾ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಪುಷ್ಪೇಂದ್ರ ಸಿಂಗ್ ಅವರ ಪ್ರೇಯಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಮೈನ್‌ಪುರಿಯಲ್ಲಿ ಇಬ್ಬರು ಮಹಿಳೆಯರು ಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ಸಿಬಿಎಸ್​ಇ ಪರೀಕ್ಷೆ ರದ್ದತಿ: ಸುಪ್ರೀಂಕೋರ್ಟ್​ ಹೇಳಿದ್ದೇನು?

    ಮೈನ್‌ಪುರಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಒಬ್ಬರು ಶಿಕ್ಷಕಿಯಾಗಿದ್ದರೆ, ಇನ್ನೊಬ್ಬರು ಸಂಯೋಜಕರಾಗಿದ್ದಾರೆ ಎಂದು ಎಸ್‌ಟಿಎಫ್ ಅಧಿಕಾರಿ ಹೇಳಿದರು, ನಿಜವಾದ ದೀಪ್ತಿ ಸಿಂಗ್ ಕೌಶಂಬಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅನಾಮಿಕಾ ಶುಕ್ಲಾ ಪ್ರಕರಣದಲ್ಲಿ ಸೋಮವಾರ ರಾಜ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅನಾಮಿಕಾ ಶುಕ್ಲಾ ಎಂಬುವವರ ಶೈಕ್ಷಣಿಕ ಪ್ರಮಾಣಪತ್ರಗಳ ಆಧಾರದ ಮೇಲೆ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆಕೆ ಅರ್ಹತಾ ಪರೀಕ್ಷೆ ಪಾಸಾಗಿದ್ದರು. ತಂಡದ ಕಿಂಗ್‌ಪಿನ್ ಸೇರಿ ಮೂವರನ್ನು ಗೊಂಡಾದ ಎಸ್‌ಟಿಎಫ್ ಬಂಧಿಸಿದೆ. ಅವರನ್ನು ಮೈನ್‌ಪುರಿಯ ಪುಷ್ಪೇಂದ್ರ ಸಿಂಗ್ ಅಲಿಯಾಸ್ ಸುಶಿಲ್, ಜೌನ್‌ಪುರದ ಆನಂದ್ ಮತ್ತು ಕೆಹ್ರಿಯ ರಾಮನಾಥ್ ಎಂದು ಗುರುತಿಸಲಾಗಿದೆ ಎಂದು ಎಸ್‌ಟಿಎಫ್ ಹೇಳಿದೆ.

    ಈ ಮೂರು ಜಿಲ್ಲೆಗಳ ಜನರಿಗೆ ಕರೊನಾ ಹತ್ತಿರವೂ ಸುಳಿಯುತ್ತಿಲ್ಲ… ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts