More

    ಮಾರುಕಟ್ಟೆ ಪ್ರವೇಶಿಸಲಿದೆ, ಮತ್ತೊಂದು ಎಲೆಕ್ಟ್ರಿಕ್​ ಸ್ಕೂಟರ್​; 499 ರೂ.ಗೆ ಪ್ರೀ-ಬುಕ್ಕಿಂಗ್​

    ಜೈಪುರ: ಭಾರತದ ಎಲೆಕ್ಟ್ರಿಕ್​ ಸ್ಕೂಟರ್​ಗಳ ಮಾರುಕಟ್ಟೆಗೆ ಮತ್ತೊಂದು ಮೇಡ್​ ಇನ್ ಇಂಡಿಯ ಸ್ಕೂಟರ್​​ ಪ್ರವೇಶಿಸುತ್ತಿದೆ. ‘ಬೌನ್ಸ್​ ಇನ್​ಫಿನಿಟಿ’ ಹೆಸರಿನ ಈ ವಿದ್ಯುತ್​ ಚಾಲಿತ ಸ್ಕೂಟರ್​ನ ಪ್ರೀ-ಬುಕಿಂಗ್​ ಡಿಸೆಂಬರ್​ 2 ರಿಂದ ಆರಂಭವಾಗುತ್ತಿದೆ. ಮುಂದಿನ ವರ್ಷ ಗ್ರಾಹಕರಿಗೆ ತಲುಪಲಿರುವ ಈ ಸ್ಕೂಟರನ್ನು ಕೇವಲ 499 ರೂಪಾಯಿ ಪಾವತಿಸಿ, ಕಾದಿರಿಸಬಹುದಾಗಿದೆ.

    ರಾಜಸ್ಥಾನದ ಭಿವಾಡಿಯಲ್ಲಿ 22ಮೋಟರ್ಸ್​ನ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿರುವ ಈ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಬೌನ್ಸ್​​ ಕಂಪೆನಿ, ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ – ಬ್ಯಾಟರಿ ಪ್ಯಾಕ್​ನೊಂದಿಗೆ ಮತ್ತು ಬ್ಯಾಟರಿ ಪ್ಯಾಕ್​ ಇಲ್ಲದೆ. ಬ್ಯಾಟರಿ ಸ್ವಾಪಿಂಗ್​ ನೆಟ್​ವರ್ಕನ್ನೂ ಹೊಂದಿರುವ ಬೌನ್ಸ್​, ಲೀ-ಐಯಾನ್​ ಬ್ಯಾಟರಿಗಳನ್ನು ಮಾರಾಟ ಮಾಡುವ ಮತ್ತು ಬಾಡಿಗೆಗೆ ಒದಗಿಸುವ ಸೇವೆ ಕೂಡ ನೀಡಲಿದೆ. ಈ ಮೂಲಕ ವಾಹನದ ಬ್ಯಾಟರಿಯನ್ನು ಚಾರ್ಜ್​ ಮಾಡುವ ಬದಲು, ಖಾಲಿ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್​ ಆಗಿರುವ ಬ್ಯಾಟರಿಯೊಂದಿಗೆ ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಗ್ರಾಹಕರು ಹೊಂದಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಕಾರು ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ ಕಾಡು ಹಂದಿ

    ಹಾಲಿ ವರ್ಷಕ್ಕೆ 1.8 ಲಕ್ಷ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ತನ್ನ ರಾಜಸ್ಥಾನದ ಘಟಕ ಹೊಂದಿದ್ದು, ದಕ್ಷಿಣ ಭಾರತದಲ್ಲಿ ಮತ್ತೊಂದು ಉತ್ಪಾದನಾ ಘಟಕವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಮುಂದಿನ ವರ್ಷದಲ್ಲಿ ತನ್ನ ಇವಿ ವ್ಯವಹಾರ ಮತ್ತು ಬ್ಯಾಟರಿ ಸ್ವಾಪಿಂಗ್​ ನೆಟ್​ವರ್ಕನ್ನು ಬೂಸ್ಟ್​​ ಮಾಡಲಿದ್ದು, ಡೀಲರ್​ಶಿಪ್​ ಜಾಲವನ್ನು ವಿಸ್ತರಿಸಲು 100 ಮಿಲಿಯನ್​ ಡಾಲರ್​ ಹಣವನ್ನು ತೆಗೆದಿರಿಸಲಾಗಿದೆ ಎಂದು ಬೌನ್ಸ್​ ಕಂಪೆನಿಯ ಹೇಳಿಕೆ ತಿಳಿಸಿದೆ. (ಏಜೆನ್ಸೀಸ್)

    ಬರೋಬ್ಬರಿ ನಾಲ್ಕೂವರೆ ಕೋಟಿ ಮೌಲ್ಯದ ವಸ್ತುಗಳನ್ನು ಮರಳಿಸಿದ ಪೊಲೀಸರು

    ಕೋವಿಡ್​ಯೇತರ ಕಾಯಿಲೆಗಳಿಗೆ 2-3 ದಿನದಲ್ಲಿ ಔಷಧ ಪೂರೈಕೆ: ಆರೋಗ್ಯ ಸಚಿವ ಕೆ. ಸುಧಾಕರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts