More

    ಲಕ್ಷ್ಮೀ ಅರ್ಬನ್ ಬ್ಯಾಂಕ್ ವಾರ್ಷಿಕ ಸಭೆ 23ರಂದು

    ಗಜೇಂದ್ರಗಡ: ಪಟ್ಟಣದ ದಿ ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ 110ನೇ ವಾರ್ಷಿಕ ಸಭೆ ಜು.23ರಂದು ಬೆಳಿಗ್ಗೆ 10ಗಂಟೆಗೆ ಪುರ್ತಗೇರಿ ಕ್ರಾಸ್ ಹತ್ತಿರವಿರುವ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ನಿರ್ದೇಶಕ ಡಾ.ಬಿ.ವಿ. ಕಂಬಳ್ಯಾಳ ಹೇಳಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ಯಾಂಕಿನಿಂದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸದಸ್ಯರ ಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು 10 ವರ್ಷಗಳಿಂದ ನೀಡಲಾಗುತ್ತಿದೆ. ವಿದ್ಯಾ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಅನೂಕೂಲವಾಗಲು ಹಲವಾರು ಕೊಡುಗೆಗಳನ್ನು ಕೊಟ್ಟಿದ್ದೇವೆ. ಶಾಲಾ ಕಟ್ಟಡಕ್ಕೆ ದೇಣಿಗೆ, ಡೆಸ್ಕ್, ಮೈಕ್ ಸೆಟ್, ನೀರು ಶುದ್ಧೀಕರಣ ಯಂತ್ರ, ಪ್ರೊಜೆಕ್ಟರ್, ಸಂಗೀತ ಶಾಲೆಗಳಿಗೆ ಹಾರ್ಮೋನಿಯಂ, ತಬಲಾ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
    ಶೈಕ್ಷಣಿಕವಾಗಿ, ಸಾಮಾಜಿಕವಾಗಿ ನಮ್ಮ ಬ್ಯಾಂಕ್ ನಿರಂತರವಾಗಿ ಸೇವೆ ಸಲ್ಲಿಸುತ್ತ ಗ್ರಾಹಕರಸ್ನೇಹಿಯಾಗಿ 110ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ಎಂದರು.

    ಬ್ಯಾಂಕಿನ ಅಧ್ಯಕ್ಷ ಸುಹಾಸಕುಮಾರ ಪಟ್ಟೇದ ಮಾತನಾಡಿ, ಬ್ಯಾಂಕಿನ ಸದಸ್ಯರ ಮಕ್ಕಳು ಹಾಗೂ ಗಜೇಂದ್ರಗಡ ವ್ಯಾಪ್ತಿಯಲ್ಲಿನ ಕನ್ನಡ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು. ನಗದು ಪುರಸ್ಕಾರ ಜತೆಗೆ ಪುಸ್ತಕವನ್ನು ನೀಡಲಾಗುವುದು. ಬ್ಯಾಂಕಿನ ಗ್ರಾಹಕರಿಗೆ ಎಟಿಎಂ ಕಾರ್ಡ್ ವಿತರಿಸಲಾಗುವುದು ಎಂದರು.

    ಸಮಾರಂಭದಲ್ಲಿ ಪ್ರೊ. ಎಫ್.ಬಿ. ಸೊರಟೂರು ಉಪನ್ಯಾಸ ನೀಡಲಿದ್ದಾರೆ. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎಫ್.ಎಚ್. ಡಾಲಾಯತ್ ಉಪಸ್ಥಿತಿ ಇರಲಿದ್ದಾರೆ ಎಂದರು. ಬ್ಯಾಂಕಿನ ಸಿಎ ಎಸ್.ಕೆ. ಚನ್ನಿ, ನಿರ್ದೇಶಕರಾದ ಪಿ.ಎಸ್. ಕಡ್ಡಿ, ವೀರೇಶ ನಂದಿಹಾಳ, ರಾಮಣ್ಣ ನಿಡಗುಂದಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ರಾಜಶೇಖರ ಹೊಸಂಗಡಿ ಮತ್ತು ಪ್ರದೀಪ ಮ್ಯಾಗೇರಿ, ನಾಗರಾಜ ಹೊಸಂಗಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts