More

  ಬಾಳೆಹೊನ್ನೂರಲ್ಲಿ ವರ್ಷಧಾರೆಯ ಸಂಭ್ರಮ

  ಬಾಳೆಹೊನ್ನೂರು: ಬಾಳೆಹೊನ್ನೂರು ಪಟ್ಟಣ ಸೇರಿದಂತೆ ವಿವಿಧ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಉತ್ತಮವಾಗಿ ಸುರಿದಿದೆ. ಈ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಳಲಿ ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಶನಿವಾರ ಸುರಿದ ಮಳೆ ಸ್ವಲ್ಪ ಪ್ರಮಾಣದಲ್ಲಿ ತಂಪು ನೀಡಿದೆ.
  ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದ ಹಲವು ಕಡೆಗಳಲ್ಲಿ ಮೋಡದ ವಾತಾವರಣ ನಿರ್ಮಾಣವಾಗಿತ್ತು. ಈ ಬಾರಿ ಬಿಸಿಲಿನ ಪ್ರಭಾವದಿಂದ ಕೆರೆ,ನದಿ,ಹಳ್ಳಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರೈತರು, ಬೆಳೆಗಾರರು ತೋಟಗಳಿಗೆ ನೀರು ಹಾಯಿಸಲಾಗದೆ ತೊಂದರೆಯಲ್ಲಿದ್ದರು. ಶನಿವಾರ ಸುರಿದ ಮಳೆಯಿಂದ ತೋಟಗಳಿಗೆ ಅನುಕೂಲವಾಗಿದ್ದು, ಭಾನುವಾರವೂ ಮಳೆ ಬಂದರೆ ಮತ್ತಷ್ಟು ಅನುಕೂಲವಾಗಲಿದೆ.
  ಬಾಳೆಹೊನ್ನೂರು ಪಟ್ಟಣ ಸೇರಿದಂತೆ ರಂಭಾಪುರಿ ಪೀಠ, ಮೆಣಸುಕೊಡಿಗೆ, ಮಸೀದಿ ಕೆರೆ, ಅರಳೀಕೊಪ್ಪ, ಸೀಕೆ, ವಾಟುಕೊಡಿಗೆ, ಇಟ್ಟಿಗೆ, ಕಡಬಗೆರೆ, ಖಾಂಡ್ಯ, ಕಡ್ಲೇಮಕ್ಕಿ, ಅಕ್ಷರನಗರ ಮುಂತಾದ ಕಡೆಗಳಲ್ಲಿ ಮಳೆಯಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts