More

    ವಾರ್ಷಿಕೋತ್ಸವ, ಶರಣೋತ್ಸವ

    ಧಾರವಾಡ: ಇಲ್ಲಿನ ಅಕ್ಕಮಹಾದೇವಿ ಮಠದ ೫೬ನೇ ವಾರ್ಷಿಕೋತ್ಸವ, ೧೫ನೇ ಶರಣೋತ್ಸವ ಹಾಗೂ ಬಸವಾತ್ಮಜೆ ಮ್ಯೂಸಿಯಂ ಉದ್ಘಾಟನೆ ಕಾರ್ಯಕ್ರಮ ಏ ೨೭ ಹಾಗೂ ೨೮ರಂದು ಜಗನ್ಮಾತೆ ಅಕ್ಕಮಹಾದೇವಿ ಆಶ್ರಮದಲ್ಲಿ ಏರ್ಪಡಿಸಲಾಗಿದೆ. ೨೭ರಂದು ಬೆಳಗ್ಗೆ ಬಸವ ಧರ್ಮ ಪೀಠದ ಡಾ. ಮಾತೆ ಗಂಗಾದೇವಿ ನೇತೃತ್ವದಲ್ಲಿ ಶರಣೋತ್ಸವ ಸಮಾರಂಭದ ಉದ್ಘಾಟನೆ, ಡಾ. ಮಾತೆ ಮಹಾದೇವಿ ಹೆಸರಲ್ಲಿ ನಿರ್ಮಿಸಿದ ಬಸವಾತ್ಮಜೆ ಮ್ಯೂಸಿಯಂ ಮತ್ತು ಡಾಕ್ಯುಮೆಂಟರಿ ಉದ್ಘಾಟನೆ ಆಗಲಿದೆ. ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಧ್ವಜಾರೋಹಣ ನೆರವೇರಿಸುವರು. ಡಾ. ಶಾಂತಾದೇವಿ ಬಿರಾದಾರ ಶರಣೋತ್ಸವಕ್ಕೆ ಚಾಲನೆ ನೀಡುವರು.
    ಸಂಜೆ ೪.೩೦ಕ್ಕೆ ಅಕ್ಕಮಹಾದೇವಿ ಯೋಗ ಸಾಧನೆ ಕುರಿತ ಅನುಭಾವ ಗೋಷ್ಠಿ ನಡೆಯಲಿದೆ. ಡಾ. ಮಾತೆ ಗಂಗಾದೇವಿ ಸಾನಿಧ್ಯ, ಮಾತೆ ಜ್ಞಾನೇಶ್ವರಿ ಸಮ್ಮುಖ ವಹಿಸುವರು. ರಾಷ್ಟಿçÃಯ ಬಸವದಳ ಅಧ್ಯಕ್ಷೆ ಸವಿತಾ ಭಂಡಾರಕೌಟಿ ಉದ್ಘಾಟಿಸುವರು. ಇದೇವೇಳೆ ಶ್ರೀಧರ ಭಜಂತ್ರಿ ಅವರಿಗೆ ಶಹನಾಯಿ ರತ್ನ ಪ್ರಶಸ್ತಿ, ಅಕ್ಷತಾ ಕುರುಬರಗೆ ಸಾಹಿತ್ಯ ಸೌರಭ ಪ್ರಶಸ್ತಿ ನೀಡಲಾಗುವುದು.
    ೨೮ರಂದು ಬೆಳಗ್ಗೆ ೧೦.೩೦ಕ್ಕೆ ಡಾ. ಮಾತೆ ಗಂಗಾದೇವಿ ಸಾನ್ನಿಧ್ಯದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದ ವಾರ್ಷಿಕೋತ್ಸವ ಹಾಗೂ ಪೀಠಾರೋಹಣ ಜರುಗಲಿದೆ. ಮಾತೆ ಜ್ಞಾನೇಶ್ವರಿ ಅವರಿಂದ ಪೀಠಾರೋಹಣ ನಡೆಯಲಿದ್ದು, ಶಿವಶರಣರ ಕಾಲಜ್ಞಾನ ವಚನಗಳ ಕುರಿತು ಶಿವಪುರ ಮಠದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡುವರು ಎಂದು ಅಕ್ಕಮಹಾದೇವಿ ಅನುಭಾವ ಪೀಠದ ಅಧ್ಯಕ್ಷೆ ಮಾತೆ ಜ್ಞಾನೇಶ್ವರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts