More

    ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ: ಸರ್ಕಾರಕ್ಕೆ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಿವು…

    ಉತ್ತರಕನ್ನಡ: ಅಂಕೊಲಾ, ಯಲ್ಲಾಪುರ, ಶಿರಸಿ ತಾಲೂಕಿನ ಗಡಿ ಪ್ರದೇಶದಲ್ಲಿರುವ ಕುಗ್ರಾಮ ಕೈಗಡಿಯಲ್ಲಿ ಶನಿವಾರ ನಡೆದ “ಅನ್ನದಂಗಳದ ಮಾತುಕತೆ” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಊರುಗಳಿಂದ ಬಂದ ರೈತರು ಸರಕಾರಕ್ಕೆ ತಮ್ಮದೆಯಾದ ಬೇಡಿಕೆಗಳನ್ನು ಸಲ್ಲಿಸಿದರು.

    ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇವಕಾರ ಗ್ರಾಮದ ಕೈಗಡಿ ಎಂಬ ನಿಸರ್ಗದ ಮಡಿಲಿನ ಚಿಕ್ಕ ಊರಿನಲ್ಲಿ ಸುಬ್ರಾಯ ಹೆಗಡೆ ಹಾಗೂ ರಾಮಚಂದ್ರ ಹೆಗಡೆ ಎಂಬ ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ ಕಾರ್ಯಕ್ರಮ ನಡೆಯಿತು. ವಿವಿಧ ಊರುಗಳಿಂದ ಬಂದ ಪ್ರತೀ ರೈತರಿಗೂ ಭೋಜನ ಹಾಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

    ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ: ಸರ್ಕಾರಕ್ಕೆ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಿವು...

    ಈ ಕಾರ್ಯಕ್ರಮದಲ್ಲಿ ರೈತರಿಂದ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳು ಈ ಕೆಳಗಿನಂತಿವೆ…

    1. ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಗೋವು ಆಧಾರಿತ ಉತ್ಪನ್ನಗಳಿಗೆ, ಪಶು ಆಹಾರಗಳಿಗೆ, ಎಲ್ಲಾ ಮೂಲದ ಸಾವಯವ ಗೊಬ್ಬರಗಳಿಗೆ, ರೈತರಿಂದಲೇ ಉತ್ಪಾದಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಜಿ.ಎಸ್.ಟಿ ಇಂದ ವಿನಾಯಿತಿ ನೀಡಬೇಕು.

    2. ಶ್ರೀಲಂಕಾ ದೇಶವು ರಾಸಾಯನಿಕ ಗೊಬ್ಬರ ಹಾಗೂ ವಿಷಗಳಿಗೆ ಪೂರ್ಣ ನಿಷೇಧ ಹೇರಿ ಸಾವಯವ ದೇಶ ಎಂದು ಘೋಷಿಸಿಕೊಂಡಿದೆ. ಈ ಕುರಿತು ಅಧ್ಯಯನಕ್ಕಾಗಿ ತಾವು ಶ್ರೀಲಂಕಾ ದೇಶಕ್ಕೆ ರೈತರನ್ನೊಳಗೊಂಡ ವಿಶೇಷ ತಂಡದ ಅಧ್ಯಯನ ಪ್ರವಾಸವನ್ನು ಏರ್ಪಡಿಸಬೇಕು.

    3. ಕೃಷಿಕರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ಎನ್.ಆರ್.ಇ.ಜಿ (ನರೇಗಾ) ಯೋಜನೆಯಲ್ಲಿ ದೊಡ್ಡ ಹಿಡುವಳಿದಾರರಿಗೆ ಕನಿಷ್ಟ ಎರಡು ಹೆಕ್ಟೇರ್ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಿ.

    4. ವಿಮೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಯಮಗಳನ್ನು ಲಿಖಿತಗೊಳಿಸುವಾಗ ಕಂಪ್ಯೂಟರಿನ ಅಕ್ಷರದ ಗಾತ್ರ ಹದಿನಾರಕ್ಕಿಂತ ಹೆಚ್ಚಿರುವಂತೆ ಮತ್ತು ಕೃಷಿಕರಿಗೆ/ಗ್ರಾಹಕರಿಗೆ ಮಾತೃಭಾಷೆಯಲ್ಲಿಯೇ (ಕನ್ನಡ) ನಿಯಮಾವಳಿಗಳನ್ನು ಓದುವಂತೆ (ರೂಲ್ಸ್‌ ಆ್ಯಂಡ್‌ ರೆಗುಲೇಶನ್ಸ್)‌ ನಮೂದಿಸುವಂತಾಗಲಿ.

    5. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು ಹವಾಮಾನ ಆಧಾರಿತವಾಗಿದ್ದು, ಈಗಿರುವ ಹೋಬಳಿ ಮಟ್ಟದ ರಿಪೋರ್ಟ್ ಆಧಾರದ ಬದಲು ಗ್ರಾಮವಾರು ಮಳೆ/ಬಿಸಿಲು ಮಾಪನ ಮಾಡಿ, ಈ ಯೋಜನೆಗೆ ಮಾಹಿತಿ ಒದಗಿಸುವಂತಾಗಲಿ ಹಾಗೂ ಕೇವಲ ಮಳೆ ಹಾಗೂ ಬಿಸಿಲಲ್ಲದೇ ಬೇರೆಲ್ಲೋ ಸುರಿದ ಮಳೆಯಿಂದಾಗಿ ಬರುವ ಪ್ರವಾಹದಿಂದ ಆಗುವ ಹಾನಿಗೂ ಸಹಾ ವಿಮೆ ಜಾರಿಯಾಗುವಂತೆ ತಿದ್ದುಪಡಿ ಮಾಡಿ.

    6. ಮಲ್ಟಿ ಸ್ಟೇಟ್​ ಕೋ ಆಪರೇಟಿವ್ ಸೊಸೈಟಿಗಳನ್ನು ಎಫ್.ಪಿ.ಓ (ರೈತ ಉತ್ಪಾದಕ ಸಂಸ್ಥೆ) ಎಂದು ಪರಿಗಣಿಸಿ. ಎಫ್ ಪಿ. ಓ ಮಾರ್ಗಸೂಚಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವುದು.

    7. ಸರಕಾರದ ಅನುದಾನವು ಶೇಕಡಾ 60:40ರ ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲಾಗಿರುತ್ತದೆ. ಅದೇ ರೀತಿ ಎಫ್.ಪಿ.ಓ ಇಂದ 40% ಭಾಗ ಹೂಡಿಕೆಯ ಜೊತೆಗೆ ಕೇಂದ್ರದ 60% ಭಾಗದ ಹೂಡಿಕೆಯ ವಿಧಾನವನ್ನು ಅನುಸರಿಸುವುದು.

    8. ವಿಧಾನ ಸಭೆ ಹಾಗೂ ಲೋಕಸಭೆಗಳಲ್ಲಿ ವರ್ಷದಲ್ಲಿ ಕನಿಷ್ಠ ಎರಡು ದಿನವಾದರೂ ವಿಶೇಷ ಅಧಿವೇಶನವನ್ನು ಕುಸಿಯುತ್ತಿರುವ ರೈತ ಕ್ಷೇತ್ರಕ್ಕಾಗಿಯೇ ಏರ್ಪಡಿಸಬೇಕು. ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕವಾಗಿ ಮಧ್ಯ ಸ್ಥಳವಾದ ಯಲ್ಲಾಪುರದಲ್ಲಿ ಗಡ್ಡೆ-ಗೆಣಸು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ.

    9. ಕೃಷಿ ಭೂಮಿಯಲ್ಲಿ ಮನೆ ಅಥವಾ ಕೃಷಿ ಕಟ್ಟಡ ಕಟ್ಟಲು ಎನ್.ಎ ಭೂಮಿಯ ( ಭೂ ಪರಿವರ್ತನೆ) ಅವಶ್ಯಕತೆ ಮತ್ತು ಇತರೇ ಹಲವಾರು ಕಟ್ಟುಪಾಡುಗಳನ್ನು ಸಡಿಲಿಸಿ, ಗರಿಷ್ಟ ಹತ್ತು ಗುಂಟೆ ಜಮೀನಿನಲ್ಲಿ ರೈತರು ಯಾವುದೇ ಇಲಾಖೆಯ ಅನುಮತಿ ಇಲ್ಲದೆಯೇ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿ.

    10. ರೈತರಿಗೆ ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಇಲೆಕ್ಟ್ರಿಕಲ್‌ ಫೆನ್ಸಿಂಗ್ ಗೆ/ ಬೇಲಿ ನಿರ್ಮಾಣಕ್ಕೆ ಅಥವಾ ಕಾಂಪೌಂಡ್‌ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು. ಕೃಷಿ ಇಲಾಖೆಯ ಮುಖಾಂತರ ದೇಸೀ ಬೀಜಗಳು ಮತ್ತು ಆಯಾ ಭಾಗದ ಪಾರಂಪರಿಕ ತಳಿಗಳ ಬೀಜವನ್ನು ರೈತರಿಗೆ ತಾಲೂಖೂ ಕೇಂದ್ರದಲ್ಲಿ ಒದಗಿಸಿಕೊಡುವ ವ್ಯವಸ್ಥೆ ಕಲ್ಪಿಸುವುದು. ಉತ್ತರಕನ್ನಡ ಜಿಲ್ಲೆಯಲ್ಲಿ 125 ಕ್ಕೂ ಹೆಚ್ಚು ಭತ್ತದ ತಳಿಗಳಿವೆ ಆದರೆ ಅವು ಇಲಾಖೆಯಲ್ಲಿ ಲಭ್ಯವಾಗುತ್ತಿಲ್ಲ.

    11. ಜಮೀನಿನ ಹಕ್ಕುಪತ್ರ ಮಾತ್ರ ಹೊಂದಿದ್ದು, ಪಹಣಿ ಪತ್ರಿಕೆ ಹೊಂದಿಲ್ಲದ ರೈತರಿಗೆ ಸರಕಾರದ ಎಲ್ಲ ಸೌಲತ್ತು ಸಿಗುವ ಹಾಗೆ ಅವಕಾಶ ಮಾಡಿಕೊಡಿ. ರೈತರ ಜಮೀನಿನ ಸುತ್ತ ಇರುವ ಸ್ಟ್ರಿಪ್, (ಸೊಪ್ಪಿನ ಬೆಟ್ಟ) ಹಾಡಿ ಭೂಮಿಗಳಲ್ಲಿ ಅರಣ್ಯ ಪೂರಕ ಸಸಿಗಳು, ಹಣ್ಣು-ಹಂಪಲು ಗಿಡಗಳನ್ನು ನೆಟ್ಟು, ಪೋಷಿಸಿ, ಉತ್ಪನ್ನ ಪಡೆದುಕೊಳ್ಳಲು ಹಕ್ಕು ನೀಡಿ.

    12. ಬೆಳೆ ರಕ್ಷಣೆಗೆ ನೀಡುವ ಬಂದೂಕು ಲೈಸೆನ್ಸ್ ರಿನೀವಲ್ ಅನ್ನು ಶುಲ್ಕ ರಹಿತವಾಗಿ ಆನ್​ಲೈನ್ ಮುಖಾಂತರ ಮಾಡಿಕೊಳ್ಳಲು ಅವಕಾಶ ಮಾಡಿ ಕೊಡಿ ಮತ್ತು ಹೊಸ ಲೈಸೆನ್ಸ್ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ. ವಿವಿಧ ಸಂದರ್ಭಗಳಲ್ಲಿ ಬೆಳೆ ರಕ್ಷಣೆಯ ಬಂದೂಕನ್ನು ಪೋಲೀಸ್ ಸ್ಪೇಷನ್​ಗೆ ಒಪ್ಪಿಸುವ ವ್ಯವಸ್ಥೆಯನ್ನು ರದ್ದುಪಡಿಸಿ, ಲೈಸನ್ಸ್‌ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿ.

    13. ಆರ್ಗ್ಯಾನಿಕ್ ಸರ್ಟಿಫಿಕೇಶನ್ ಪಾಲಿಸಿ ಕುರಿತು ಪುನರ್ ಪರಿಶೀಲನೆ ಆಗಬೇಕಾಗಿದೆ. ಸಾವಯವ ಉತ್ಪನ್ನಗಳನ್ನು ಬೆಳೆಯುವ ಗ್ರಾಮ/ ಪಂಚಾಯತಿಗಳನ್ನು ಸಾಂಪ್ರದಾಯಿಕವಾಗಿಯೇ ಸಾವಯವ ಕೃಷಿ ಮಾಡುತ್ತಿರುವ ಪ್ರದೇಶಗಳೆಂದು ದೃಢೀಕರಣಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.

    15. ಅಂಕೋಲಾ – ಯಲ್ಲಾಪುರ ನಡುವೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು.

    16. ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಸಂಗೋಪನೆ ಮತ್ತು ಜಲಾನಯನ ಇಲಾಖೆಗಳ ನಡುವೆ ಸಮನ್ವಯತೆ ಬರುವ ಹಾಗೆ ವ್ಯವಸ್ಥೆ ಕಲ್ಪಿಸಿ, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಅಡಿಕೆ, ತೆಂಗು , ಕಾಫಿ, ಕಾಳುಮೆಣಸು, ಬೆಳೆಗಳನ್ನು ದೀರ್ಘಾವಧೀ ಬೆಳೆಯಾಗಿ ಪಹಣಿಯಲ್ಲಿ ( ಆರ್‌ ಟಿ ಸಿ) ದಾಖಲು ಮಾಡವುದಕ್ಕೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲೂ ಪಹಣಿಯಲ್ಲಿ ಈ ಬೆಳೆಗಳನ್ನು ದೀರ್ಘಾವಧಿ ಬೆಳೆಯಾಗಿ ದಾಖಲಿಸಲು ಅವಕಾಶ ಮಾಡಿಕೊಡಲು ವಿನಂತಿ.

    17. ಉತ್ತರ ಕನ್ನಡ ಜಿಲ್ಲೆ ಕುಮಟಾದ ಕೃಷಿ ಡಿಪ್ಲೊಮಾ ಕಾಲೇಜನ್ನು ಮುಚ್ಚದಂತೆ ವಿನಂತಿಸುತ್ತೇವೆ.

    18. ಅಂಕೋಲಾ ತಾಲೂಕಿನ ಅಪರೂಪದ , ಅಳಿವಿನಂಚಿನಲ್ಲಿರುವ ಶೇವ್ಕಾರ ಭತ್ತದ ತಳಿ ಮತ್ತು ಗಿಡಗ ಮಾವಿನ ತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಕ್ರಮ ಕೈಗೊಳ್ಳುವುದು.

    19. ಅರಣ್ಯ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಬೇಕಾದಾಗ ಅಷ್ಟೇ ಪ್ರಮಾಣದ ಅರಣ್ಯವನ್ನ ಬೆಳೆಸಬೇಕೆಂಬ ಕಾನೂನಿನಂತೆ ಪ್ರಾಕೃತಿಕ ವಿಕೋಪದಿಂದಾಗಿ, ಪ್ರವಾಹದಿಂದಾಗಿ ನದೀ ಪಾತ್ರದ ಕೃಷಿ ಜಮೀನುಗಳು ಸಂಪೂರ್ಣ ಹಾನಿಗೊಳಗಾದಾಗ ರೈತರಿಗೆ ಪರ್ಯಾಯವಾಗಿ ಅಷ್ಟೇ ಜಮೀನನ್ನು ನೀಡಲು ವಿನಂತಿಸುತ್ತೇವೆ. ನದೀ ಪಾತ್ರದ ರೈತರ ಜಮೀನು ಮತ್ತು ಮನೆ ಪ್ರವಾಹದಿಂದ ಪ್ರತೀ ವರುಷ ಮುಳುಗುತ್ತಿದೆ, ಆದ್ದರಿಂದ ಅವರ ಜಮೀನಿನ ಸಮೀಪದ ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಿ.

    20. ಸೀಬರ್ಡ್‌ ನೌಕಾನೆಲೆ ಹಾಗೂ ಕಾರವಾರ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲು ಕಾರವಾರ ಸಮೀಪದ ಕಾಳೀ ನದಿಯ ಕದ್ರಾ, ಮತ್ತು ಕೊಡಸಳ್ಳಿ ಜಲಾಶಯದಿಂದ ಸಾಕಷ್ಟು ನೀರನ್ನು ನೈಸರ್ಗಿಕವಾಗಿಯೇ, ಪಂಪ್‌ ಸಹಾಯವಿಲ್ಲದೇ, ತರುವ ಸಾಧ್ಯತೆ ಇರುವುದರಿಂದ ಗಂಗಾವಳೀ ನದಿಯ ಯೋಜಿತ ಕಿಂಡಿ ಅಣೇಕಟ್ಟು ಕಟ್ಟುವ ಪ್ರಸ್ತಾವವನ್ನು ಕೈಬಿಡಬೇಕೆಂದು ವಿನಂತಿಸುತ್ತೇವೆ.

    21. ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶದಲ್ಲಿ ಗಿಡ ನೆಡುವಾಗ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕ ಸಸಿಗಳನ್ನು ನೆಡುವುದು, ಮತ್ತು ಕಾಡು ಪ್ರಾಣಿಗಳಿಗೆ ವಿಶೇಷವಾಗಿ ಮಂಗಗಳಿಗೆ ಆಹಾರವಾಗಬಲ್ಲ ಹಣ್ಣು ಹಂಪಲಿನ ಸಸಿಗಳನ್ನೇ ನೆಡುವಂತಾಗಬೇಕು.

    ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ: ಸರ್ಕಾರಕ್ಕೆ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಿವು...

    ಕಾರ್ಯಕ್ರಮದ ವಿಶೇಷತೆಗಳು
    ಈ ಕಾರ್ಯಕ್ರಮವು ಕೃಷಿ ಇಲಾಖೆಯ ಕಾರ್ಯಕ್ರಮವಾದರೂ ಕಾರ್ಯಕ್ರಮದ ಕೇಂದ್ರಸ್ಥಾನದಲ್ಲಿ ಹಿಂದಿನ ಕಾಲದಿಂದಲೂ ಪರಂಪರಾಗತವಾಗಿ ಕೃಷಿ ಮಾಡುತ್ತಿರುವ ಹಿರಿಯ ಜೀವಿಗಳು , ಹಿಂದಿನಿಂದಲೂ ಬಂದವರು, ನಮ್ಮನ್ನು ಮುಂದೆ ತಂದವರು ಎಲ್ಲ ಕೃಷಿಕರ ಪ್ರತಿನಿಧಿಯಾಗಿ ಹಿರಿಯ ಕೃಷಿ ದಂಪತಿಗಳು ಉಪಸ್ಥಿತರಿದ್ದರು.

    ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ: ಸರ್ಕಾರಕ್ಕೆ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಿವು...ಸಂಪ್ರದಾಯದಂತೆ ಸಭೆಯಲ್ಲಿ ಉದ್ಘಾಟಕರು, ಅತಿಥಿಗಳು, ಅಧ್ಯಕ್ಷರು, ಮಾತನಾಡುತ್ತಾರೆ. ಆದರೆ ಇಲ್ಲಿ ಸಭೆಯ ಕೇಂದ್ರ ಸ್ಥಾನದಲ್ಲಿ ಕುಳಿತಿರುವ ಕೃಷಿ ದಂಪತಿಗಳ ಮಾತಾಗಿ ಅವರ ಅಪ್ಪಣೆ ಪಡೆದು ಕೃಷಿಕರು ಮಾತನಾಡಿದರು. ಹಾರ-ತುರಾಯಿ, ಹೂಗುಚ್ಛ ವಿಲ್ಲದ, ರೈತರು ಬೆಳೆದ ಸಾವಯವ ತರಕಾರಿ, ಈ ಭಾಗದ ವಿಶೇಷ ಭತ್ತದ ತಳಿ ಶೇವಕಾರ ಭತ್ತ , ಅಕ್ಕಿ ಮತ್ತು ಇತರೇ ಪದಾರ್ಥಗಳ ಬುಟ್ಟಿಯನ್ನು ಗೌರವ ಸಮರ್ಪಣೆಗೆ ಬಳಸಲಾಯಿತು.

    ಮೂರು ತಾಲೂಕಿನ ಗಡಿಯ ಈ ಕುಗ್ರಾಮದ ಕಷ್ಟದಲ್ಲಿರುವ ರೈತರ ಊರು ಕೈಗಡಿಗೆ, ಕಷ್ಟಪಟ್ಟು ದುರ್ಗಮ ರಸ್ತೆಯಲ್ಲಿ ಸಾಗಿಬಂದು ಎಲ್ಲರು ಭಾಗವಹಿಸುತ್ತಿರುವುದು ವಿಶೇಷ. ಸಭೆಯಲ್ಲಿ ಉಪಸ್ಥಿತರಿದ್ದ ಯಾರಿಗೂ ಬಸ್‌ ಚಾರ್ಜ್‌ ಕೊಟ್ಟು ಕರೆಸಿಲ್ಲ, ಕೃಷಿ ಕ್ಷೇತ್ರದ ಶೃದ್ಧೆಯ ಹೆಜ್ಜೆಗಳು ಸಾಗಿ ಬಂದಿವೆ. ಸಭೆಗೆ ಆಹ್ವಾನ ಪತ್ರಿಕೆಯಿಲ್ಲ. ಗ್ರಾಮಸ್ಥರೇ ಮನೆ ಮನೆಯ ಕದ ತಟ್ಟಿ ಎಲ್ಲಾ ಸಮುದಾಯದ ಕೃಷಿಕರನ್ನ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದ ಸಭೆ ಇದಾಗಿದೆ.

    ರಾಜ್ಯದ-ಜಿಲ್ಲೆಯ ಎಲ್ಲಾ ಕೃಷಿಕರ ಪರವಾಗಿ ಸಾವಯವ ರೈತರ ಮನೆಯಂಗಳದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ವಿವಿಧ ಕ್ಷೇತ್ರದ ಜನರು ಭಾಗವಹಿಸುತ್ತಾರೆ, ಆದರೆ ಇದು ಪ್ರತಿಶತಃ ನೂರರಷ್ಟು ಕೃಷಿಕರಿಂದ ಕೂಡಿದ ಸಭೆಯಾಗಿದೆ. 23 ವಿವಿಧ ಕಾಳುಮೆಣಸಿನ ತಳಿಯ ಸಂರಕ್ಷಣೆ ಮಾಡುತ್ತಿರುವ ಸುಬ್ರಾಯ ಹೆಗಡೆ ಮತ್ತು ರಾಮಚಂದ್ರ ಹೆಗಡೆ ರವರ ಮನೆಯಂಗಳದಲ್ಲಿ ಸಭೆ ಆಯೋಜನೆಗೊಂಡಿರುವುದು ವಿಶೇಷ. ನಮ್ಮೆಲ್ಲರನ್ನೂ ನದಿಯ ಆ ದಡದಿಂದ ಈ ದಡಕ್ಕೆ ರೈತರ ಮನೆಯಂಗಳದಲ್ಲಿ ಅನ್ನದಂಗಳದ ಮಾತುಕತೆ: ಸರ್ಕಾರಕ್ಕೆ ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಿವು...ತಲುಪಿಸಿದ ನಾವಿಕರನ್ನು ಗೌರವದಿಂದ ಸ್ಮರಿಸಲಾಯಿತು. ಸಾಮಾನ್ಯವಾಗಿ ರೈತರು ಬೇಡಿಕೆಗಳನ್ನು ಸಲ್ಲಿಸಲು ಸರಕಾರವಿದ್ದಲ್ಲಿಗೇ ಹೋಗಬೇಕು, ಆದರೆ ಇಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸಚಿವರೇ ತಮ್ಮ ಮುಂದಿರುವುದು ವಿಶೇಷ.

    ಸಭಾ ಕಾರ್ಯಕ್ರಮದ ವರದಿ
    ವೇದಿಕೆಯಲ್ಲಿ ಭೂಮಿ ಸುಪೋಷಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು, ಮಣ್ಣನ್ನು ಪೂಜೆ ಮಾಡುವುದರ ಮುಖಾಂತರ ಕಾರ್ಯಕ್ರಮ ನಡೆಸಲಾಯಿತು. ಕ್ಷೇತ್ರ ಭೇಟಿ: ಕೈಗಡಿಯ ಸಾವಯವ ಕೃಷಿಕರಾದ ಶ್ರೀ ರಾಮಚಂದ್ರ ಹೆಗಡೆ ಹಾಗೂ ಸುಬ್ರಾಯ ಹೆಗಡೆ ರವರ ಕೃಷಿ ಕ್ಷೇತ್ರವನ್ನು , ಸಾವಯವ ಪಧ್ಧತಿಯಲ್ಲಿ ಉಳಿಸಿಕೊಂಡು ಬಂದ 23 ವಿವಿಧ ತಳಿಯ ಕಾಳುಮೆಣಸನ್ನು ವೀಕ್ಷಿಸಲಾಯಿತು.

    ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts