More

    ಸಿದ್ದರಾಮಯ್ಯ ಜನ್ಮ ದಿನಾಚರಣೆ ತಪ್ಪೇನು? ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನೆ

    ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನವನ್ನು ಆ.3ರಂದು ಅವರ ಅಭಿಮಾನಿಗಳು, ಬೆಂಬಲಿಗರು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.
    ದೇವರಾಜ ಅರಸು ಬಳಿಕ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದವರು ಸಿದ್ದರಾಮಯ್ಯ. ಅಂತವರ ಜನ್ಮ ದಿನವನ್ನು ಆಚರಣೆ ಮಾಡಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದ ಆಂಜನೇಯ, ಇದು ಸಿದ್ದರಾಮೋತ್ಸವ ಅಲ್ಲ. ಸಿದ್ದರಾಮಯ್ಯ-75-ಅಮೃತಮಹೋತ್ಸವ ಎಂದು ಸ್ಪಷ್ಟಪಡಿಸಿದರು.
    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜನ್ಮದಿನಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಭಾಗವಹಿಸುತ್ತಿರುವುದು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಜನರು ಮುಂದೆ ಕಾಂಗ್ರೆಸ್‌ಗೆ ಅಧಿಕಾರ ನೀಡಲಿದ್ದಾರೆ ಎಂಬ ಚಿಂತೆ ಅವರಲ್ಲಿ ಕಾಣುತ್ತಿದೆ ಎಂದು ಕುಟುಕಿದರು.
    ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ವೃದ್ಧಿಯಾಗಿದೆ. ಯಾವುದೇ ಒಡಕಿಲ್ಲ. ಮಾಧ್ಯಮಗಳು ಹಾಗೂ ಎದುರಾಳಿ ಪಕ್ಷಗಳು ಆ ರೀತಿಯಲ್ಲಿ ಬಿಂಭಿಸುತ್ತಿವೆ. ಸಿದ್ದರಾಮ್ಯಯ ಅವರ ಜನ್ಮದಿನಾಚರಣೆ ಬಳಿಕ ಪಕ್ಷದಲ್ಲಿ ಮತ್ತಷ್ಟು ಉತ್ಸಾಹ ಕಾಣಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಮುಂದಿನ ಸಿಎಂ ಯಾರಾಗಬೇಕೆಂಬುದನ್ನು ಶಾಸಕರು ಶಾಸಕಾಂಗ ಪಕ್ಷದಲ್ಲಿ ನಿರ್ಧರಿಸುತ್ತಾರೆ. ಇದನ್ನು ಆಧರಿಸಿ ಹೈಕಮಾಂಡ್‌ನವರು ಆದೇಶ ನೀಡುತ್ತಾರೆ. ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗುವವರೆಗೂ ಮುಂದಿನ ಸಿಎಂ ಚರ್ಚೆ ಅನಗತ್ಯ ಎಂದು ಎಚ್.ಆಂಜನೇಯ ಹೇಳಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts