More

    ಪದವಿಪೂರ್ವಕ್ಕೆ ಅಂಜಲಿ ನಾಯಕಿ

    ಬೆಂಗಳೂರು: ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದವರು, ಸಹಜವಾಗಿಯೇ ಮುಂದೆ ಸ್ವತಂತ್ರ ನಿರ್ದೇಶಕರಾಗುತ್ತಾರೆ. ಆದರೆ, ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಅಂಜಲಿ ಅನೀಶ್, ಇದೀಗ ನಾಯಕಿಯಾಗುವುದಕ್ಕೆ ಹೊರಟಿದ್ದಾರೆ. ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ಪದವಿ ಪೂರ್ವ’ ಚಿತ್ರಕ್ಕೆ ಅಂಜಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿಕ್ಕಂದಿನಿಂದಲೂ ಸಿನಿಮಾನೇ ಎಲ್ಲ ಎಂದು ಜೀವಿಸುತ್ತ ಬಂದಿರುವ ಅಂಜಲಿ, 15ನೇ ವರ್ಷಕ್ಕೆ ಸಿನಿಮಾ ಶಾಲೆಗೆ ಅಡ್ಮಿಷನ್ ಪಡೆದುಕೊಂಡಿದ್ದರು. ಮತ್ತೆ ವಿದ್ಯಾಭ್ಯಾಸ? ‘ನಾನು ಏಳನೇ ತರಗತಿ ವರಗೆ ಮಾತ್ರ ಶಾಲೆಗೆ ಹೋಗಿದ್ದು. ಅಲ್ಲಿಂದ ನನ್ನ ಪೂರ್ತಿ ಶಿಕ್ಷಣ ಮನೆಯಲ್ಲಿಯೇ. 15ನೇ ವಯಸ್ಸಿನಲ್ಲಿಯೇ ಸಿನಿಮಾ ಶಾಲೆ ಸೇರಿ ಅಂದಿನಿಂದಲೇ ಅದರೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಕಾಲೇಜು ಜೀವನ ಹೇಗೆ ಇರುತ್ತೆ ಎಂಬುದೂ ನನಗೆ ಗೊತ್ತಿಲ್ಲ. ಹೀಗಿರುವಾಗಲೇ ‘ಪದವಿಪೂರ್ವ’ ಎಂಬ ಸಿನಿಮಾಕ್ಕೆ ಆಯ್ಕೆಯಾಗಿದ್ದೇನೆ. ಬಣ್ಣದ ಕನಸಿಗೆ ರೆಕ್ಕೆ ಮೂಡಿದಷ್ಟೇ ಖುಷಿಯಾಗುತ್ತಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

    ಹಿಂದಿಯಲ್ಲಿ ‘ಭೈಯ್ಯಾಜಿ ಸೂಪರ್​ಹಿಟ್’, ಕನ್ನಡದಲ್ಲಿ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಅಂಜಲಿ, ಚಿಕಾಗೊದ ‘ಸೆಕೆಂಡ್ ಸಿಟಿ’ ಮತ್ತು ಅನುಪ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿಯೇ ನೆಲೆ ಕಂಡುಕೊಳ್ಳುವ ಹಂಬಲ ಅವರಲ್ಲಿದೆ.

    ‘ಮೊದಲ ಸಿನಿಮಾದಲ್ಲಿಯೇ ಒಳ್ಳೇ ಟೀಮ್ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. 90ರ ಕಾಲಘಟ್ಟದಲ್ಲಿ ಪೂರ್ತಿ ಕಥೆ ಸಾಗುವುದರಿಂದ, ಫೋನ್ ಇಲ್ಲದೆ, ಗ್ಲಾಮರ್ ಇಲ್ಲದ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನವೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ’ ಎಂಬುದು ಅಂಜಲಿ ಮಾತು.

    ಅತ್ಯಂತ ಹಿತವಾದ ಜಾಗ ಯಾವುದು ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts