More

    ಕೋವಿಡ್ ಟೈಮ್​ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ

    ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿಯ ನಾಯಕನಟ ಅನಿರುದ್ಧ್ ವಿರುದ್ಧ ಕೆಂಡ ಕಾರಿರುವ ನಿರ್ದೇಶಕ ಆರೂರ್ ಜಗದೀಶ್, ಅನಿರುದ್ಧ್ ಅವರಿಂದಾಗಿ ಧಾರಾವಾಹಿಯ ಸಮಯ ಹಾಗೂ ಹಣ ಹೇಗೆ ವೇಸ್ಟ್ ಆಗುತ್ತ ಸಾಗಿತು ಎಂಬುದನ್ನು ವಿವರಿಸಿದ್ದಾರೆ.

    ‘‘ಪ್ರತಿ ಶಾಟ್ ತೆಗೆದಾಗಲೂ ಅನಿರುದ್ಧ್ ಮಾನಿಟರ್ ಹತ್ತಿರ ಬಂದು ನೋಡೋರು. ಇನ್ನೊಂದ್ಸಲ ಮಾಡ್ತೀನಿ, ಮತ್ತೊಂದ್ಸಲ ಮಾಡ್ತೀನಿ, ಇದಕ್ಕಿಂತ ಚೆನ್ನಾಗಿ ಮಾಡ್ತೀನಿ ಅನ್ನೋರು. ಇಲ್ಲಿ ಟೈಮಿಂಗ್ ಇರುತ್ತೆ. ಬಜೆಟ್ ಲಿಮಿಟ್ ಇರುತ್ತೆ. ಆ ಒಂದು ಯೋಚನೆಯೇ ಅವರಿಗಿಲ್ಲ. ಕೊಡುವ 9 ಗಂಟೆ ಟೈಮ್‌ನಲ್ಲಿ ಈ ಟೈಮ್ ವೇಸ್ಟೇ 3-4 ಗಂಟೆಯಾಗಿಬಿಟ್ಟರೆ ಶೂಟಿಂಗ್ ಮಾಡೋದೆಲ್ಲಿ, ಬ್ಯಾಕಿಂಗ್ ಮಾಡೋದೆಲ್ಲಿ, ಟೆಲಿಕಾಸ್ಟ್‌ಗೆ ಕಳಿಸೋದೆಲ್ಲಿ? ಒಟ್ಟಾರೆ ಉದ್ದಕ್ಕೂ ಹೀಗೆಯೇ ಆಗುತ್ತಾ ಹೋಯಿತು. ಶೂಟಿಂಗ್ ಸೆಟ್‌ನಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜೋರುಜೋರಾಗಿ ಕೂಗಾಡುವುದು, ಗಲಾಟೆ ಮಾಡುವುದು ಇಂಥದ್ದೆಲ್ಲ ಆಗಾಗ ನಡೆಯುತ್ತಲೇ ಇತ್ತು. ಇದರಿಂದ ತಂತ್ರಜ್ಞರಿಗಂತೂ ನೋವು ಅವಮಾನ ಆಗುತ್ತಿತ್ತು. ಕೆಲವರೆಲ್ಲ ಇದೇ ಕಾರಣಕ್ಕೆ ಕೆಲಸ ಬಿಟ್ಟು ಹೋದರು. ಇನ್ನು ಕೆಲವರನ್ನು ಇವರ ಕಾರಣಕ್ಕಾಗಿ ನಾವು ಕೆಲಸದಿಂದ ತೆಗೆಯಬೇಕಾಯಿತು. 9 ಗಂಟೆಗೆ ಫಸ್ಟ್ ಶಾಟ್ ಅಂತ ಇವರನ್ನು ಕರೆದರೆ ತಿಂಡಿ ತಿನ್ನುತ್ತಾ ಇದ್ದೀನಿ, ಊಟ ಮಾಡುತ್ತಾ ಇದ್ದೀನಿ ಅಂತ ಕತೆ ಹೇಳೋರು. ಸಹ ಕಲಾವಿದರನ್ನು ಕರೆದರೆ ‘ಅವರೂ ತಿಂಡಿ ತಿಂತಾ ಇದಾರಪ್ಪಾ, ಯಾಕಪ್ಪಾ’ ಅಂತ ಇವರೇ ಕೂಗಾಡೋರು. ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕರು ಯಾರನ್ನೂ ಬೈಯುವ ಹಾಗಿಲ್ಲ. ಇವರು ಇದ್ದರೆ ಯಾರೂ ಕೂಗಾಡಬಾರದು. ಯಾರೂ ಏನೂ ಹೇಳಬಾರದು. ಕ್ಯಾಮರಾ ಹಿಂದೆ ಮುಂದೆ ಓಡಾಡಬಾರದು. ತಾವು ಮಾತ್ರ ಒನ್‌ಮೋರ್ (ಮತ್ತೊಂದು ಅವಕಾಶ) ಕೇಳ್ತಾರೆ, ಪದೇಪದೆ ಒನ್‌ಮೋರ್ ಕೇಳೋದು. ಇನ್ನೂ ಚೆನ್ನಾಗಿ ಮಾಡ್ತೀನಿ ಅನ್ನೋದು. ಇದು ದಿನನಿತ್ಯ ನಡ್ಕೊಂಡು ಬಂತು.

    ಗಟ್ಟಿಮೇಳ ಜತೆಜತೆಯಲಿ ಮಹಾಸಂಗಮ ನಡೀತು. ಆ ಸಮಯದಲ್ಲಿ ನಾನು ಉಡುಪಿಯ ಆಸ್ಪತ್ರೆಯಲ್ಲಿದ್ದೆ. ಆ ಕರೊನಾ ಸಮಯದಲ್ಲಿ ಎಲ್ಲರ ಪೇಮೆಂಟೂ ಶೇಕಡಾ 15ರಷ್ಟು ಕಟ್ ಆಗಿತ್ತು. ಅದನ್ನು ಇವರಿಗೂ ಅನ್ವಯಿಸಿದ್ದೇವೆ. ಎಲ್ಲಾ ಸೀರಿಯಲ್‌ನವರೂ ಅದನ್ನೇ ಮಾಡಿದ್ದಾರೆ. ಎರಡೂ ಸೆಟ್‌ನ ಇನ್ನೂರೈವತ್ತು ಜನ ಇದ್ದರು. ಇವರು ಹೊರಗಡೆ ಬಂದು ‘‘ನನ್ ದುಡ್ಡು ಯಾಕೆ ಕಟ್ ಮಾಡ್ತಾ ಇದೀರಿ’’ ಅಂತ ಜೋರಾಗಿ ಗಲಾಟೆ ಮಾಡಿ ಕೂಗಾಡಿ ಅವಾಚ್ಯ ಪದಗಳಿಂದ ಪ್ರೊಡಕ್ಷನ್‌ನವರನ್ನು ನಿಂದಿಸಿದರು. ಇಡೀ ಪ್ರಪಂಚವೇ ಆ ರೀತಿಯ ಸ್ಥಿತಿಯಲ್ಲಿ ಮಲಗಿದ್ದಾಗ, ಎಲ್ಲರ ದುಡ್ಡೂ ಕಟ್ ಆಗಿರುವಾಗ, ಇವರು ಒಂದೈದು ರೂಪಾಯಿನೂ ಕಟ್ ಮಾಡಿಸಿಕೊಳ್ಲಿಕ್ಕೆ ಒಪ್ಪಲಿಲ್ಲ. ಅದರಿಂದಲೂ ನಾನು ನಾಳೆಯಿಂದ ಶೂಟಿಂಗ್‌ಗೆ ಬರಲ್ಲ ಅಂತ ಹಠ ಮಾಡಿದರು. ಆಗ ಚಾನೆಲ್‌ನ ಇ.ಪಿ. (ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್) ಇದ್ದರು. ಅವರ ಮೇಲೆಯೂ ಕೂಗಾಡಿದರು. ಆಗಲೂ ಅವರಿಗೆ ಸಮಾಧಾನ ಮಾಡಿ ಸೀರಿಯಲ್ ಮುಂದುವರಿಸಿಕೊಂಡು ಬಂದೆವು. ಇಷ್ಟೆಲ್ಲ ನಡೆದರೂ ಯಾಕೆ ಆಗಲೇ ಒಂದು ತೀರ್ಮಾನ ಕೈಗೊಳ್ಳಲಿಲ್ಲ ಅಂತ ಜನರಿಗೆ ಅನ್ನಿಸಬಹುದು. ಯಾಕೆಂದರೆ ನಾವು ಇದರಲ್ಲಿ ತುಂಬಾ ಬಂಡವಾಳ ಹೂಡಿದ್ದೇವೆ. ಏನಾದರೂ ಹೆಚ್ಚೂ ಕಮ್ಮಿ ಆಗಿ ಸೀರಿಯಲ್ ನಿಂತರೆ, ಟಿಆರ್‌ಪಿ ಕಡಿಮೆಯಾದರೆ ನನ್ನ ಭವಿಷ್ಯ ಏನು? ನಾವು ಕುಟುಂಬ ಸಮೇತ ಸೂಸೈಡ್ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿದ್ದೆವು. ಹಾಗಾಗಿ ಎಲ್ಲೂ ಏನೂ ಮಾತಾಡಲಿಲ್ಲ. ಇವರ ಕಾಲು ಹಿಡಿದುಕೊಂಡು, ಮನೆಗೆ ಹೋಗಿ ರಿಕ್ವೆಸ್ಟ್ ಮಾಡಿಕೊಂಡು ಶೂಟಿಂಗ್ ಮಾಡಿಸುತ್ತಿದ್ದೆವು.

    ‘ಜೊತೆ ಜೊತೆಯಲಿ’ ಸೆಟ್‌ನಲ್ಲಿ ಅನಿರುದ್ಧ್ ಹೇಗಿರುತ್ತಿದ್ದರು? ಸಾಕಷ್ಟು ಸಂಗತಿ ಬಯಲು ಮಾಡಿದ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts