More

    VIDEO| ಯಾರಾಗಲಿದ್ದಾರೆ ಮುಂದಿನ ಅಮೆರಿಕ ಅಧ್ಯಕ್ಷ? ಪ್ರಾಣಿಗಳ ಅಚ್ಚರಿಯ ಭವಿಷ್ಯ..!

    ವಾಷಿಂಗ್ಟನ್​: ಅಮೆರಿಕದಲ್ಲಿ ಈಗ ಚುನಾವಣೆಯ ಅಬ್ಬರ. ಇಂದು ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಎರಡನೇ ಅವಧಿಗೆ ಮರು ಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಮಾಜಿ ಉಪಾಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಹುರಿಯಾಳು ಜೋ ಬಿಡೆನ್ ತೀವ್ರ ಪೈಪೋಟಿ ನೀಡಿದ್ದಾರೆ.

    ಕರೊನಾ ಸಂದರ್ಭದ ಈ ಚುನಾವಣೆ ಅಮೆರಿಕದ ಭವಿಷ್ಯ ಮಾತ್ರವಲ್ಲ, ಜಾಗತಿಕ ಸಮುದಾಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ವಿಶ್ವದ ಕಣ್ಣು ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣೆ ಮೇಲೆ ನೆಟ್ಟಿದ್ದು, ಈಗಾಗಲೇ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದೆ. ಹೀಗಿರುವಾಗ ಪ್ರಾಣಿಗಳು ಭವಿಷ್ಯ ನುಡಿದಿರುವುದು ಬಹಳ ಕುತೂಹಲಕಾರಿಯಾಗಿದೆ.

    ಯಾರು ಗೆಲ್ಲಬಹುದು ಎಂದು ರಷ್ಯಾದ ರೋಯೆವ್​ ರುಚೆ ಮೃಗಾಲಯದ ಪ್ರಾಣಿಗಳು ಗೆಸ್​ ಮಾಡಿದ್ದು, ಈ ಒಂದು ವಿನೂತನ ಪ್ರಯೋಗದಲ್ಲಿ ಪ್ರಾಣಿಗಳಾದ ಖಾನ್​, ಬೌನ್​ ಮತ್ತು ಬರ್ಟೆಕ್​ ಭಾಗವಹಿಸಿ, ಕಲ್ಲಂಗಡಿಯ ಮೂಲಕ ಯಾರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಈ ಪ್ರಯೋಗಕ್ಕೆ ಒಂದೇ ಗಾತ್ರದ ಮತ್ತು ಬಣ್ಣದ 6 ಕಲ್ಲಂಗಡಿಗಳನ್ನು ಬಳಸಲಾಗಿದೆ. ಅದರ ಮೇಲೆ ಡೊನಾಲ್ಡ್ ಟ್ರಂಪ್​ ಮತ್ತು ಜೋ ಬಿಡೆನ್ ಚಿತ್ರಗಳನ್ನು ಬಿಡಿಸಲಾಗಿತ್ತು.

    ಇದನ್ನೂ ಓದಿ: ಭೀಮಾತೀರದ ಮಹಾದೇವನ ಕೊಲ್ಲಲು ಬಂದದ್ದು 20 ಜನರ ಗ್ಯಾಂಗ್​! ಬೆಚ್ಚಿಬೀಳಿಸುತ್ತೆ ಗುಂಡಿನ ದಾಳಿ

    ಮೊದಲು ಟ್ರಂಪ್​ ಮತ್ತು ಜೋ ಬಿಡೆನ್ ಚಿತ್ರವಿರುವ ಎರಡು ಕಲ್ಲಂಗಡಿಯನ್ನು ಬರ್ಟೆಕ್​ ಹುಲಿಯ ಪಂಜರದ ಮುಂದಿನ ಟೇಬಲ್​ನಲ್ಲಿ ಇಡಲಾಯಿತು. ಅದರ ಮುಂದೆ ಬಂದ ಬರ್ಟೆಕ್​ ಹುಲಿ ಎರಡು ಕಲ್ಲಂಗಡಿಯನ್ನು ಉರುಳಿಸಿ, ಕೊನೆಯಲ್ಲಿ ಬಿಡೆನ್​ ಚಿತ್ರವಿದ್ದ ಹಣ್ಣನ್ನು ತಿಂದಿತು.

    ಇದಾದ ಬಳಿಕ ಮತ್ತೆರೆಡು ಹಣ್ಣನ್ನು ಖಾನ್​ (ಬಿಳಿ ಬಣ್ಣದ ಬೆಂಗಾಲ್​ ಟೈಗರ್​) ಮುಂದೆ ಇಡಲಾಯಿತು. ಅದು ಕೂಡ ಬಿಡೆನ್​ ಚಿತ್ರವಿದ್ದ ಕಲ್ಲಂಗಡಿಯನ್ನು ಒದ್ದು, ಕೊನೆಗೆ ಘರ್ಜಿಸುತ್ತಾ ಹಣ್ಣಿನ ಮಧ್ಯಭಾಗದಲ್ಲಿ ರಂಧ್ರ ಮಾಡಿತು. ಇದಾದ ಬಳಿಕ ಬೌನ್​ (ಕರಡಿ) ಮುಂದೆ ಮತ್ತೆರೆಡು ಹಣ್ಣನ್ನು ಇಡಲಾಯಿತು. ಅದು ಕೂಡ ಬಿಡೆನ್​ ಅವರನ್ನೇ ಆಯ್ಕೆ ಮಾಡಿ, ಆ ಹಣ್ಣನ್ನು ತಿಂದಿತು. ಹೀಗಾಗಿ ಮೂರು ಪ್ರಾಣಿಗಳು ಬಿಡೆನ್​ ಚಿತ್ರವಿದ್ದ ಹಣ್ಣನ್ನೇ ಆಯ್ಕೆ ಮಾಡಿದ್ದರಿಂದ ಚುನಾವಣೆಯಲ್ಲಿ ಬಿಡೆನ್​ ಅವರು ಗೆಲವು ಸಾಧಿಸಲಿದ್ದಾರೆ ಎಂದು ಊಹಿಸಲಾಗಿದೆ. ಆದರೆ, ಯಾರು ಗೆಲ್ಲಲ್ಲಿದ್ದಾರೆ ಎಂಬುದು ಚುನಾವಣೆಯ ಫಲಿತಾಂಶ ದಿನದಂದೇ ತಿಳಿಯಲಿದೆ.

    ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್ ಮೊದಲ ಸೋಮವಾರದ ನಂತರ ಬರುವ ಮಂಗಳವಾರ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ನವೆಂಬರ್ 3ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದ್ದು, ಈ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಮತ ಎಣಿಕೆ ಆರಂಭವಾಗುತ್ತದೆ. ಎಣಿಕೆ ಕಾರ್ಯ ಪೂರ್ಣವಾದ ರಾಜ್ಯಗಳು ಫಲಿತಾಂಶ ಪ್ರಕಟಿಸುತ್ತವೆ. (ಏಜೆನ್ಸೀಸ್​)

    ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೀಗಿರುತ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts