More

    ಕುಟುಂಬ ರಾಜಕಾರಣಕ್ಕೆ ಮತದಾರ ರೋಸಿಹೋಗಿದ್ದಾರೆ; ಕಾಂಗ್ರೆಸ್​ ವಿರುದ್ಧ ಅನಿಲ್​ ಗುಡುಗು.

    ವಿಜಯವಾಣಿ ಸುದ್ದಿಜಾಲ ಗದಗ,

    ಗದಗನಲ್ಲಿ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣ ಕೊನೆಗಾಣಿಸಬೇಕೆಂದು ಬಿಜೆಪಿ ಪಕ್ಷವು ಸಂಘಟನೆ, ಸೇವೆಯನ್ನು ಪರಿಗಣಿಸಿ ಗದಗ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್​ ನೀಡಿದ್ದು, ಭಾರತೀಯ ಜನತಾ ಪಕ್ಷದ ಅಭ್ಯಥಿರ್ಯಾಗಿ ನಾಳೆ(ಏ.18) ಮಂಗಳವಾರ ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯಥಿರ್ ಅನಿಲ್​ ಮೆಣಸಿನಕಾಯಿ ತಿಳಿಸಿದರು.
    ರವಿವಾರ ನಗರದ ಪ್ರತಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ಬಳಿಕ ಅಂದು ಬೆಳಿಗ್ಗೆ 11 ಗಂಟೆಗೆ ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಹತ್ತಿಕಾಳ ಕೂಟ, ಟಾಂಗಾಕೂಟ, ಮಹಾತ್ಮಾ ಗಾಂಧಿ ಸರ್ಕಲ್​, ಭೂಮರಡ್ಡಿ ಸರ್ಕಲ್​ ಮಾರ್ಗವಾಗಿ ಮಹೇಂದ್ರಕರ ಸರ್ಕಲ್​ ವರೆಗೆ ಬೃಹತ್​ ಮೆರವಣಿಗೆ ನಡೆಯಲಿದೆ. ಕ್ಷೇತ್ರದ ಜನತೆ “ಒಂದು ರೊಟ್ಟಿ- ಒಂದು ನಾಣ್ಯ’ ಎಂಬ ವಿನೂತನ ಅಭಿಯಾನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜನರು ಸಂಕಲ್ಪ ಮಾಡಿಕೊಟ್ಟ ನಾಣ್ಯಗಳನ್ನೇ ನಾಮಪತ್ರ ವೇಳೆ ಠೇವಣಿ ಮಾಡಲಾಗುವುದು ಎಂದರು.
    ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಮಾತನಾಡಿ, ಜಯದ ಆತ್ಮವಿಶ್ವಾಸದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದೇವೆ. ನಾವು ಬಿಜೆಪಿ ಸರ್ಕಾರಗಳಲ್ಲಾದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ಅವರು ಗ್ಯಾರಂಟಿ ಕಾರ್ಡ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಇದು ಎರಡು ಪಕ್ಷಗಳ ಮಧ್ಯೆವಿರುವ ವ್ಯತ್ಯಾಸ. ಬಿಜೆಪಿ ಬಡವರ, ರೈತರ, ಮಹಿಳೆಯರ ಪರ ಪಕ್ಷ. ಪ್ರತಿಯೊಂದು ಮನೆಗಳಿಗೂ ಸರ್ಕಾರದ ಯೋಜನೆಗಳು ತಲುಪಿವೆ. ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳು ಬಿಜೆಪಿಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್​ ವಿರುದ್ಧ ಆರೋಪ:
    ಎಂದಿನಂತೆ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ ಅನಿಲ್​ ಮೆಣಸಿನಕಾಯಿ ಐವತೆದು ವರ್ಷಗಳಲ್ಲಿ ಕಾಂಗ್ರೆಸ್ಸಿಗರ ದುರಾಡಳಿತ, ಮುಖಂಡರ ಸವಾಧಿರ್ಕಾರಿ ಧೋರಣೆ, ಗುಲಾಮಗಿರಿ ಸಂಸಕೃತಿಯಿಂದಾಗಿ ಕ್ಷೇತ್ರದ ಜನರು ರೋಸಿ ಹೋಗಿದ್ದಾರೆ. 5 ದಶಕಗಳ ದುರಾಡಳಿತ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ. ಈ ಬಾರಿ ಜನರು ಪರಿವರ್ತನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
    ಈ ಸಂದರ್ಭದಲ್ಲಿ ಸಿದ್ದಣ್ಣ ಪಲ್ಲೇದ, ಕಾಂತಿಲಾಲ್​ ಬನ್ಸಾಲಿ, ಶಿವಣ್ಣ ಮುಳಗುಂದ, ಎಂ.ಎಂ.ಹಿರೇಮಠ, ಅಶೋಕ ಕರೂರ, ರಾಘವೇಂದ್ರ ಯಳವತ್ತಿ, ವಸಂತ ಪಡಗದ ಸೇರಿದಂತೆ ಹಲವರಿದ್ದರು.

    ಕೋಟ್​-:
    ಸೇವಕನಾಗಿ ಕ್ಷೇತ್ರದ ಜನರ ನೋವು- ನಲಿವುಗಳಿಗೆ ಸ್ಪಂದಿಸುವ ಆಶಾಭಾವ ನನ್ನದು. ಕುಡಿಯುವ ನೀರು, ಯುಜಿಡಿ, ವಸತಿ, ಸ್ಥಳಿಯ ಮಟ್ಟದಲ್ಲೇ ಉದ್ಯೊಗ ಕಲ್ಪಿಸುವುದು, ಎಲ್ಲ ವರ್ಗದ ಜನರಿಗೂ ಉತ್ತಮ ಶಿಕ್ಷಣ ಸೌಲಭ್ಯ ಒದಗಿಸುವುದು ನನ್ನ ಗುರಿಯಾಗಿದೆ. ಹೀಗಾಗಿ ಈ ಬಾರಿ ಜನಾಶೀರ್ವಾದದಿಂದ ದೊಡ್ಡ ಅಂತರದಿಂದ ಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸವಿದೆ.

    -ಅನಿಲ್​ ಮೆಣಸಿನಕಾಯಿ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts