More

    ಹೊರಟಿದ್ದು ಭರಮಸಾಗರಕ್ಕೆ, ತಲುಪಿದ್ದು ದಾವಣಗೆರೆಗೆ

    ಭರಮಸಾಗರ: ಅಂಗವಿಕಲನನ್ನು ನಿಗದಿತ ಭರಮಸಾಗರ ಬಸ್ ನಿಲ್ದಾಣಕ್ಕೆ ಕರೆದೊಯ್ಯುವ ಬದಲು ದಾವಣಗೆರೆಗೆ ಕರೆತಂದು ಇಳಿಸಿದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.

    ಚಿತ್ರದುರ್ಗದಿಂದ ಭರಮಸಾಗರಕ್ಕೆ ತೆರಳಲು ನಿಲ್ದಾಣದ ನಿರ್ವಾಹಕರ ಸೂಚನೆಯಂತೆ ಬೆಳಗ್ಗೆ ೪ ರ ಸುಮಾರಿಗೆ ಇಬ್ಬರು ಪ್ರಯಾಣಿಕರೊಂದಿಗೆ ಅಂಗವಿಕಲ ವ್ಯಕ್ತಿಯೊಬ್ಬ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದ ಕೆಎ ೧೭, ಎಫ್-೧೯೬೧ ಬಸ್ ಹತ್ತಿದ್ದರು. ಬಸ್ ಭರಮಸಾಗರದೊಳಗೆ ತೆರಳದೆ, ನಿರ್ವಾಹಕರು ಇಬ್ಬರನ್ನು ಬೈಪಾಸ್‌ನಲ್ಲಿ ಇಳಿಸಿದರು. ಅಂಗವಿಕಲ ವ್ಯಕ್ತಿಯ ಪಾಸ್‌ಗೆ ಅನುಮತಿಸದೆ, ೭೦ ರೂ. ಟಿಕೆಟ್ ನೀಡಿ ದಾವಣಗೆರೆಗೆ ಕರೆದೊಯ್ದಿದ್ದಾರೆ.

    ಹೆಚ್ಚುವರಿಯಾಗಿ ೩೫ ರೂ. ಪಡೆದ ಮತ್ತು ನಿಗದಿತ ನಿಲ್ದಾಣಕ್ಕೆ ತೆರಳದ ಬಗ್ಗೆ ಸಂಸ್ಥೆಯ ಸಹಾಯವಾಣಿ ಮತ್ತು ದಾವಣಗೆರೆ ಡಿಪೋ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ದೂರನ್ನು ಸಹ ನೀಡಲಾಗಿದೆ. ಇಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಂಗವಿಕಲ ಶೇಖರ್ ಆಗ್ರಹಿಸಿದ್ದಾರೆ.

    ಎಲ್ಲ ವಾಹನಗಳೂ ಕಡ್ಡಾಯವಾಗಿ ಗ್ರಾಮದೊಳಗೆ ನಿಲ್ದಾಣದ ಮೂಲಕವೇ ಸಂಚರಿಸಲು ಕಟ್ಟಾಜ್ಞೆ ಮಾಡಬೇಕು. ಬೈಪಾಸ್‌ನಲ್ಲೇ ನಿಲ್ಲಿಸುವುದಕ್ಕೆ ಕಡಿವಾಣ ಹಾಕಬೇಕು. ನಿಗಮದ ಆದೇಶ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts