More

    ಅಂಗನವಾಡಿ ನಿರ್ಮಾಣಕ್ಕೆ ರೂ. 1.40 ಕೋಟಿ ಅನುದಾನ

    ಚಿಕ್ಕಮಗಳೂರು: ಬಹುತೇಕ ಬಡವರ ಮಕ್ಕಳೇ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಾರೆ. ಅವರ ಕಲಿಕೆಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ನಗರದ ಐದು ಅಂಗನವಾಡಿಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ 1.40 ಕೋಟಿ ರೂ. ಅನುದಾನ ನೀಡಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಜ್ಯೋತಿನಗರದಲ್ಲಿ ಭಾನುವಾರ ಅಂಗನವಾಡಿ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನದಡಿ 1.40 ಕೋಟಿ ರೂ. ವೆಚ್ಚದಲ್ಲಿ ಜ್ಯೋತಿನಗರ, ಕಲ್ಯಾಣ ನಗರ, ಟಿಪ್ಪು ನಗರ ಮತ್ತು ಶಾಂತಿ ನಗರದಲ್ಲಿ ನೂತನ ಅಂಗನವಾಡಿ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಜತೆಗೆ ಹಾಲು, ಮೊಟ್ಟೆ, ಊಟವನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಧರ್ಮದ ಬಡವರು, ರೈತರು, ಹಿಂದುಳಿದವರ ಪರವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದಿನಬಳಕೆ ವಸ್ತುಗಳು, ಸಿಲಿಂಡರ್, ದಿನಸಿ ಸಾಮಗ್ರಿ ಬೆಲೆ ಏರಿಕೆಯಿಂದ ಮನೆ ನಿರ್ವಹಣೆ ಮಾಡಲು ಮಹಿಳೆಯರಿಗೆ ಕಷ್ಟವಾಗಬಾರದೆಂಬ ಉದ್ದೇಶದಿಂದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ರೂಪಿಸಲಾಗಿದೆ. ಇಡೀ ವಿಶ್ವದಲ್ಲಿಯೇ ಹೆಣ್ಣುಮಕ್ಕಳಿಗಾಗಿ ಒಂದು ವರ್ಷಕ್ಕೆ 30,600 ಕೋಟಿ ರೂ.ನ 5 ಬೃಹತ್ ಯೋಜನೆಗಳನ್ನು ತಂದುಕೊಟ್ಟ ಮೊದಲಿಗ ಸಿದ್ದರಾಮಯ್ಯ ಎಂದರು.
    ರಾಜಕಾರಣ ಎಂದರೆ ಹರಿಯುವ ನೀರಿನಂತೆ. ಯಾವುದೇ ಪಕ್ಷ ಸತತವಾಗಿ ಶಾಶ್ವತ ಆಳ್ವಿಕೆ ನಡೆಸಿಲ್ಲ. ರಾಜ್ಯ ಮತ್ತು ದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರೈತರಿಗಾಗಿ ಏನು ಮಾಡಿದೆ. ಇಡೀ ರಾಜ್ಯದಲ್ಲಿ ಡ್ಯಾಮ್ ನಿರ್ಮಿಸಿ ರೈತರಿಗಾಗಿ ನೀರಾವರಿ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದರು.
    ನಗರಸಭೆ ಆಯುಕ್ತ ಬಸವರಾಜ್, ಸದಸ್ಯರಾದ ಗುರುಮಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ರೇಖಾ ಹುಲಿಯಪ್ಪ ಗೌಡ, ಮಂಜೇಗೌಡ್ರು, ಮಲ್ಲಿಕಾರ್ಜುನ್, ಪುನೀತ್, ಸೂರ್ಯ, ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts