More

    ನಿರುಪಯೋಗಿಯಾಗಿದೆ ಅಂಗನವಾಡಿ ಹೊಸ ಕಟ್ಟಡ

    ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ವಣಗೊಂಡು 2 ವರ್ಷ ಕಳೆದರೂ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಮಕ್ಕಳು ದೇವಸ್ಥಾನದಲ್ಲಿಯೇ ಕುಳಿತು ಕಲಿಯುವಂತಾಗಿದೆ.

    ಗ್ರಾಮದ ಗ್ರಾಪಂ ಕಾರ್ಯಾಲಯದ ಮುಂದೆಯೇ ಇರುವ ನಿವೇಶನದದಲ್ಲಿ 2016-17ರಲ್ಲಿಯೇ ನರೇಗಾ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ವಣಗೊಂಡು 2 ವರ್ಷ ಕಳೆದಿದೆ. ಅಂಗನವಾಡಿ ಕೇಂದ್ರ ಸಂಖ್ಯೆ 217ರ ಈ ಕೇಂದ್ರದಲ್ಲಿ 25ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ ಮತ್ತು ಮಾತೃಪೂರ್ಣ-ಪುಷ್ಟಿ ಯೋಜನೆಯಡಿ ಗರ್ಭಿಣಿಯರು, ಮಕ್ಕಳಿಗೆ ಅಂಗನವಾಡಿಯಿಂದಲೇ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

    ಲಕ್ಷಾಂತರ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳ ಸಮೇತ ನಿರ್ವಣಗೊಂಡ ಹೊಸ ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಸಣ್ಣಪುಟ್ಟ ಕಾರಣಗಳನ್ನು ಹೇಳುತ್ತಾ ಹೊಸ ಕಟ್ಟಡ ಬಳಸಿಕೊಳ್ಳದ್ದರಿಂದ ಮಕ್ಕಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂಗನವಾಡಿ ಮಕ್ಕಳಿಗೆ ಕೊಡುವ ಆಟೋಪಕರಣ, ಪೀಠೋಪಕರಣಗಳು ಸ್ಥಳದ ಕೊರತೆಯಿಂದ ಬಳಕೆಯಾಗುತ್ತಿಲ್ಲ. ಹೊಸ ಕಟ್ಟಡ ನಿರ್ವಣಗೊಂಡಿದ್ದರೂ ಗ್ರಾಪಂ ಕಾರ್ಯಾಲಯದ ಮುಂದೆಯೇ ಇರುವ ದೇವಸ್ಥಾನದಲ್ಲಿ ಅಂಗನವಾಡಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸ್ತುತಿಲ್ಲ.

    ತಾಲೂಕಿನಲ್ಲಿ ಒಟ್ಟು 231 ಅಂಗನವಾಡಿ ಕೇಂದ್ರಗಳಲ್ಲಿ 184 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 47 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ, ದೇವಸ್ಥಾನ, ಸಭಾ ಭವನ, ಹಳೆಯ ಶಾಲಾ ಕಟ್ಟಡಗಳಲ್ಲಿ ನಡೆಯುತ್ತಿವೆ. ಆದರೆ, ಸರ್ಕಾರ ಲಕ್ಷಾಂತರ ರೂ. ಅನುದಾನ ಖರ್ಚು ಮಾಡಿ ಹೊಸ ಕಟ್ಟಡ ನಿರ್ವಣಗೊಳಿಸಿದ್ದರೂ ಮಕ್ಕಳಿಗೆ ಅಲ್ಲಿ ಕಲಿಯುವ ಭಾಗ್ಯ ಕಲ್ಪಿಸದಿರುವುದು ದುರ್ದೈವದ ಸಂಗತಿಯಾಗಿದೆ.

    ಗೋವನಾಳ ಗ್ರಾಮದಲ್ಲಿ ನಿರ್ವಿುಸಿರುವ ಅಂಗನವಾಡಿ ಕಟ್ಟಡಕ್ಕೆ ಪಡೆದ ನಿವೇಶನ ನೋಂದಣಿ ವಿಷಯದಲ್ಲಿ ಒಂದಷ್ಟು ವಿಳಂಬವಾಗಿತ್ತು. ಎಲ್ಲ ಸಮಸ್ಯೆ ಬಗೆಹರಿಸಿ ಕಟ್ಟಡ ನಿರ್ವಣಗೊಂಡ ಬಳಿಕ ಗ್ರಾಪಂನಿಂದ ಕಟ್ಟಡ ಹಸ್ತಾಂತರ ಪತ್ರವನ್ನು ನೀಡಲಾಗಿದೆ. ಆದರೆ, ಇಲಾಖೆಯವರು ಪತ್ರ ಮುಟ್ಟಿಲ್ಲವೆಂಬ ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆ ಪರಿಶೀಲಿಸಿ ಹೊಸ ಕಟ್ಟಡದಲ್ಲಿ ಅಂಗನವಾಡಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು.
    | ನಾಗರಾಜ ದೊಡ್ಡಮನಿ, ಗೋವನಾಳ ಗ್ರಾ.ಪಂ. ಮಾಜಿ ಅಧ್ಯಕ್ಷ

    ಗೋವನಾಳ ಅಂಗನವಾಡಿ ಕೇಂದ್ರದ ಹೊಸಕಟ್ಟಡ ನಿರ್ವಣವಾಗಿದೆ. ಒಂದಿಷ್ಟು ಸಮಸ್ಯೆಯನ್ನು ಗ್ರಾಮದ ಹಿರಿಯರೊಂದಿಗೆ ರ್ಚಚಿಸಿ ಸರಿಪಡಿಸಿ 2 ದಿನದೊಳಗೆ ಹೊಸ ಕಟ್ಟಡಕ್ಕೆ ಅಂಗನವಾಡಿ ಸ್ಥಳಾಂತರಿಸಲಾಗುವುದು. ಅಲ್ಲಿ ಮೂಲಸೌಲಭ್ಯ ಕಲ್ಪಿಸಲಾಗುವುದು.
    | ಮೃತ್ಯುಂಜಯ ಜಿ, ಸಿಡಿಪಿಒ ಲಕ್ಷ್ಮೇಶ್ವರ ತಾಲೂಕು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts