More

    ವಿಂಡೀಸ್‌ಗೆ ವೈಟ್‌ವಾಷ್ ತಪ್ಪಿಸಿದ ರಸೆಲ್: ಟಿ20 ವಿಶ್ವಕಪ್ ಬಳಿಕ ನಿವೃತ್ತಿ ಸುಳಿವು ನೀಡಿದ ಆಸೀಸ್ ಬ್ಯಾಟರ್

    ಪರ್ತ್: ಆಲ್ರೌಂಡರ್ ಆಂಡ್ರೆ ರಸೆಲ್ (71 ರನ್, 29 ಎಸೆತ, 4 ಬೌಂಡರಿ, 7 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ರ್ಶೆಾನ್ ರುದರ್‌ಪೋರ್ಡ್ (67* ರನ್, 40 ಎಸೆತ, 5 ಬೌಂಡರಿ, 5 ಸಿಕ್ಸರ್) ಭರ್ಜರಿ ಅರ್ಧಶತಕದ ಬಲದಿಂದ ವೆಸ್ಟ್ ಇಂಡೀಸ್ 3ನೇ ಹಾಗೂ ಅಂತಿಮ ಟಿ20ಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 37 ರನ್‌ಗಳಿಂದ ಪರಾಭವಗೊಳಿಸಿದೆ. ಇದರೊಂದಿಗೆ ವಿಂಡೀಸ್ ವೈಟ್‌ವಾಷ್‌ನಿಂದ ಪಾರಾಗಿದ್ದು, ಆಸೀಸ್ ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿದೆ.

    ಮಂಗಳವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವಿಂಡೀಸ್, ಆಂಡ್ರೆ ರಸೆಲ್- ರುದರ್‌ಪೋರ್ಡ್ ಜೋಡಿ 6ನೇ ವಿಕೆಟ್‌ಗೆ ನಡೆಸಿದ 139 ರನ್ ಜತೆಯಾಟದಿಂದ 6 ವಿಕೆಟ್‌ಗೆ 220 ರನ್ ಕಲೆಹಾಕಿತು. ಪ್ರತಿಯಾಗಿ ಆರಂಭಿಕ ಡೇವಿಡ್ ವಾರ್ನರ್ (81 ರನ್, 49 ಎಸೆತ, 9 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಹೋರಾಟದ ನಡುವೆಯೂ, ಆಸೀಸ್ 5 ವಿಕೆಟ್‌ಗೆ 183 ರನ್‌ಗಳಿಸಲಷ್ಟೇ ಶಕ್ತವಾಯಿತು.
    ವಿಂಡೀಸ್: 6 ವಿಕೆಟ್‌ಗೆ 220 (ಮೇಯರ್ಸ್‌ 11, ಪೂರನ್ 1, ಚೇಸ್ 37, ಪೊವೆಲ್ 21, ರುದರ್‌ಪೋರ್ಡ್ 67*, ರಸೆಲ್ 71, ಕ್ಸೆವಿಯರ್ 37ಕ್ಕೆ 2). ಆಸೀಸ್: 5 ವಿಕೆಟ್‌ಗೆ 183 (ಮಾರ್ಷ್ 21, ವಾರ್ನರ್ 81, ಹಾರ್ಡಿ 16, ಮ್ಯಾಕ್ಸ್‌ವೆಲ್ 12, ಟಿ ಡೇವಿಡ್ 41*, ರೋಮಾರಿಯೊ 31ಕ್ಕೆ 2, ರೋಸ್ಟನ್ ಚೇಸ್ 19ಕ್ಕೆ 2).

    ಟಿ20 ವಿಶ್ವಕಪ್ ಬಳಿಕ ವಾರ್ನರ್ ನಿವೃತ್ತಿ: ಆಸೀಸ್‌ನ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮುಂಬರುವ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯೇ ವಾರ್ನರ್ ಪಾಲಿಗೆ ತವರಿನಲ್ಲಿ ಅಂತಿಮ ಟಿ20 ಪಂದ್ಯ ಎನಿಸಿದೆ. ಸರಣಿಯಲ್ಲಿ 173 ರನ್ ಕಲೆಹಾಕಿರು ವಾರ್ನರ್,ಜನವರಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಯುವ ಆಟಗಾರರಿಗೆ ಅವಕಾಶ ನೀಡಲು ವಾರ್ನರ್ ನಿರ್ಧರಿಸಿದ್ದು, ಆಸ್ಟ್ರೇಲಿಯಾ ಪರ ಇದುವರೆಗೆ 102 ಟಿ20 ಪಂದ್ಯಗಳನ್ನಾಡಿದ್ದು 3,067 ರನ್ ಪೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts