More

    ಸಿಎಂ ಜಗನ್​ ಸರ್ಕಾರದ ವಿರುದ್ಧ ಗಂಭೀರ ಆರೋಪ: ವೈಎಸ್​ಆರ್​ ಕಾಂಗ್ರೆಸ್​ ಸಂಸದನ ಬಂಧನ!

    ವಿಜಯವಾಡ: ದೇಶದ್ರೋಹ ಪ್ರಕರಣದ ಅಡಿಯಲ್ಲಿ ನರ್ಸಾಪುರಂ ಲೋಕಸಭಾ ಕ್ಷೇತ್ರದ ವೈಎಸ್​ಆರ್​ ಕಾಂಗ್ರೆಸ್​ ಸಂಸದ ಕನುಮುರಿ ರಘುರಾಮ ಕೃಷ್ಣಂ ರಾಜು ಅವರನ್ನು ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಶುಕ್ರವಾರ ಬಂಧಿಸಿದೆ.

    ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ತನ್ನ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರು ನೀಡಿದ್ದ ಜಾಮೀನನ್ನು ರದ್ದು ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯವನ್ನು ಕೇಳಿಕೊಂಡ ಒಂದು ವಾರಗಳ ಬಳಿಕ ಕೃಷ್ಣಂ ರಾಜು ಅವರ ಬಂಧನವಾಗಿದೆ.

    ರಾಜ್ಯ ಸರ್ಕಾರದ ಪ್ರತಿಷ್ಠೆಗೆ ಹಾನಿಕಾರಕ ರೀತಿಯಲ್ಲಿ ವರ್ತಿಸಿದ ಆರೋಪದ ಮೇಲೇ ಕೃಷ್ಣಂ ರಾಜು ಅವರನ್ನು ಹೈದರಾಬಾದ್ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಅಲ್ಲದೆ, ಸಿಎಂ ಜಗನ್ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವನ್ನು ಸಹ ಮಾಡಿದ್ದಾರೆ.

    ಕೃಷ್ಣಂ ರಾಜು ವಿರುದ್ಧ ಐಪಿಸಿ ಸೆಕ್ಷನ್​ 124ಎ (ದೇಶದ್ರೋಹ), 153ಎ (ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (ಸಾರ್ವಜನಿಕ ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಕೆಲವೊಂದು ಸಮುದಾಯ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದರು ಎಂಬ ಆರೋಪವೂ ಸಹ ಇದೆ. ಇದರೊಂದಿಗೆ ಆಡಳಿತಾರೂಢ ಪಕ್ಷದ ಸಂಸದರಾಗಿದ್ದುಕೊಂಡು ಸರ್ಕಾರದ ವಿರುದ್ಧವೇ ಅಸಮಾಧಾನವನ್ನು ಉತ್ತೇಜಿಸುವಂತಹ ಮಾತುಗಳನ್ನಾಡಿದ್ದೇ ಕೃಷ್ಣಂ ರಾಜು ಬಂಧನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

    2012ರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್​ ಮೋಹನ್​ ರೆಡ್ಡಿ ಅವರು ಬೇಲ್​ ನೀಡಿದ್ದರು. ಆದರೆ, ಕಳೆದ ಏಪ್ರಿಲ್​ 27ರಂದು ಜಾಮೀನು ರದ್ದು ಮಾಡುವಂತೆ ಸಿಬಿಐ ನ್ಯಾಯಾಲಯವನ್ನು ಕೃಷ್ಣಂ ರಾಜು ಕೇಳಿಕೊಂಡಿದ್ದರು. ಅಲ್ಲದೆ, ಮುಖ್ಯಮಂತ್ರಿ ಜಾಮೀನು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು.

    ಅನೇಕ ವರ್ಷಗಳ ಹಿಂದೆ ವೈಎಸ್​ಆರ್​ ಕಾಂಗ್ರೆಸ್​ ಪಕ್ಷವನ್ನು ತೊರೆದಿದ್ದ ಕೃಷ್ಣಂ ರಾಜು, 2019ರ ಲೋಕಸಭಾ ಚುನಾವಣಾ ವೇಳೆ ಮತ್ತೆ ಪಕ್ಷ ಸೇರ್ಪಡೆಯಾಗಿದ್ದು, ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಮತ್ತು ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯಲ್ಲಿ ಗುರುತಿಸಿಕೊಂಡಿದ್ದರು. (ಏಜೆನ್ಸೀಸ್​)

    ಗೊಂದಲ ಬೇಡ: ಲಸಿಕೆ ವಿಷಯವನ್ನು ರಾಜಕೀಯದಿಂದ ದೂರ ಇಡಿ..

    ಬೆಂಗಳೂರಿನ ಕರೊನಾ ಸೋಂಕಿತೆಗೆ ಆರ್‌ಸಿಬಿ ಆಟಗಾರ ಚಾಹಲ್ ನೆರವು

    ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಬ್ರಿಟನ್‌ನ ಭಾರತೀಯ ರಾಯಭಾರಿ ಗಾಯತ್ರಿ ಇಸ್ಸಾರ್ ಗೌರವಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts