More

    ರೈಲಿನಲ್ಲಿ ಚಿನ್ನಾಭರಣ ಕದಿಯುತ್ತಿದ್ದವ ಅಂದರ್

    ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕದಿಯುತ್ತಿದ್ದ ಕಳ್ಳನನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ವಿವಿಧ ಕಂಪನಿಗಳ 4 ಮೊಬೈಲ್​ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮಂಟೂರ ರಸ್ತೆ ನಿವಾಸಿ ಸನ್ನಿ ಸನ್ಮಾನ ಹವಿಜಾ (24) ಬಂಧಿತ ಆರೋಪಿ. ಪ್ರಯಾಣಿಕರ ಸೋಗಿನಲ್ಲಿ ರೈಲಿನಲ್ಲಿ ಸಂಚರಿಸುತ್ತಿದ್ದ. ಎಲ್ಲರೂ ಮಲಗಿದ್ದಾಗ ಬ್ಯಾಗ್​ಗಳನ್ನು ಕದಿಯುತ್ತಿದ್ದ. ಈತನ ವಿರುದ್ಧ ಈ ಹಿಂದೆ 7 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈಲ್ವೆ ಎಸ್​ಪಿ ಡಿ.ಆರ್. ಸಿರಿಗೌರಿ, ಡಿವೈಎಸ್​ಪಿ ಪುಷ್ಪಲತಾ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಪಿಎಸ್​ಐ ಎಂ. ಸತ್ಯಪ್ಪ, ಸಿಬ್ಬಂದಿ ನಿಂಗಪ್ಪ ಹಾವನ್ನಗೋಳ, ಬಸವರಾಜ ಯಕ್ಕಣ್ಣವರ, ರಮೇಶ ಲಮಾಣಿ, ಸುಭಾಸ ದಳವಾಯಿ, ಯುಸೂಫ ನದಾಫ, ರವಿ ವಾಲ್ಮೀಕಿ, ಪ್ರವೀಣ ಪಾಟೀಲ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts