More

    112 ದಿನಗಳ ಬಳಿಕ ಮನೆಗೆ ಮರಳಿದ ವಿಶ್ವನಾಥನ್​ ಆನಂದ್​

    ಚೆನ್ನೈ: ಕರೊನಾ ಹಾವಳಿ ಮತ್ತು ಲಾಕ್‌ಡೌನ್‌ನಿಂದಾಗಿ ಜರ್ಮನಿಯಲ್ಲಿ ಸಿಲುಕಿದ್ದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಸರಿಸುಮಾರು ಮೂರು ತಿಂಗಳ ಬಳಿಕ ಮನೆಗೆ ಮರಳಿದ್ದಾರೆ. ಅವರ ಪತ್ನಿ ಅರುಣಾ ನಿಖರವಾಗಿ ಹಾಕಿರುವ ಲೆಕ್ಕಾಚಾರದ ಪ್ರಕಾರ ಆನಂದ್ 112 ದಿನಗಳ ಬಳಿಕ ಮನೆಗೆ ಮರಳಿದ್ದಾರೆ. ಕಳೆದ ವಾರ ಜರ್ಮನಿಯಿಂದ ವಾಪಸ್​ ಆದ ಬಳಿಕ ಬೆಂಗಳೂರಿನಲ್ಲಿ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಆನಂದ್, ಶನಿವಾರ ಚೆನ್ನೈಗೆ ಮರಳಿ ಕುಟುಂಬವನ್ನು ಕೂಡಿಕೊಂಡಿದ್ದಾರೆ.

    ಇದನ್ನೂ ಓದಿ: ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

    ‘ಹೌದು, ನಾನೀಗ ಮನೆಯಲ್ಲಿದ್ದೇನೆ. ನನ್ನ ಕುಟುಂಬವನ್ನು ನೋಡಿ ಖುಷಿಯಾಯಿತು. ಅದರಲ್ಲೂ ವಿಶೇಷವಾಗಿ ನನ್ನ ಮಗನನ್ನು. ಕೊನೆಗೂ ಮನೆಗೆ ಮರಳಿದೆ’ ಎಂದು 50 ವರ್ಷದ ಆನಂದ್ ಹೇಳಿಕೊಂಡಿದ್ದಾರೆ. ತಮಿಳುನಾಡು ಸರ್ಕಾರದ ನಿಯಮದ ಅನ್ವಯ ಅವರು ಇನ್ನು 7 ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಮೇ 30ರಂದು ಅವರು ಬೆಂಗಳೂರಿಗೆ ಆಗಮಿಸಿದ್ದರು. ಕಳೆದ 3 ತಿಂಗಳಿನಿಂದ ಆನಂದ್ ಪತ್ನಿ ಅರುಣಾ ಜತೆಗೆ ವಿಡಿಯೋ ಕಾಲ್ ಮೂಲಕ ನಿಕಟ ಸಂಪರ್ಕದಲ್ಲಿದ್ದರು.

    ಆನಂದ್ ಪತ್ನಿ ಅರುಣಾ ಕೂಡ ಪತಿ ಮನೆಗೆ ಮರಳಿದ್ದರಿಂದ ಸಂತಸಗೊಂಡಿದ್ದು, ‘ಅವರು ಮನೆಗೆ ಬಂದಿದ್ದನ್ನು ನೋಡಿ ಖುಷಿಯಾಯಿತು. 112 ದಿನಗಳ ಬಳಿಕ ಮನೆಗೆ ಬಂದಿದ್ದಾರೆ. ಮಗ ಅಖಿಲ್ ಕೂಡ ತುಂಬಾ ಖುಷಿಯಾಗಿದ್ದಾನೆ. ಆದರೆ ಮನೆಯಲ್ಲೂ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗಿರುವ ಕಾರಣ ಪ್ರತ್ಯೇಕ ಕೋಣೆಯಲ್ಲಿರಲಿದ್ದಾರೆ. ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವೆವು’ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಕ್ರಿಕೆಟಿಗ ಹರ್ಭಜನ್​ ಸಿಂಗ್​ ಚೊಚ್ಚಲ ತಮಿಳು ಚಿತ್ರದ ಫಸ್ಟ್ ಲುಕ್​ ಹೀಗಿದೆ!

    ಕಳೆದ ಫೆಬ್ರವರಿಯಲ್ಲಿ ಬುಂಡೆಸ್‌ಲಿಗಾ ಚೆಸ್ ಲೀಗ್‌ನಲ್ಲಿ ಆಡುವ ಸಲುವಾಗಿ ಆನಂದ್ ಜರ್ಮನಿಗೆ ತೆರಳಿದ್ದರು. ಬಳಿಕ ಕರೊನಾ ಹಾವಳಿ ಶುರುವಾದ ಕಾರಣ ಅಲ್ಲೇ ಸ್ವಯಂ ಐಸೋಲೇಷನ್‌ನಲ್ಲಿದ್ದರು. ಈ ನಡುವೆ ಮಾರ್ಚ್‌ನಲ್ಲಿ ಭಾರತದಲ್ಲೂ ಲಾಕ್‌ಡೌನ್​ ಘೋಷಣೆಯಾದ ಕಾರಣ ಅವರಿಗೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಈ ನಡುವೆ ಅವರು ವಿಶ್ವ ಚೆಸ್ ಕ್ಯಾಂಡಿಡೇಟ್ ಟೂರ್ನಿಯ ವೀಕ್ಷಕವಿವರಣೆಯನ್ನು ಆನ್‌ಲೈನ್ ಮೂಲಕ ನೀಡಿದ್ದರು. ಆದರೆ ಆ ಟೂರ್ನಿಯೂ ಕರೊನಾ ಭೀತಿಯಿಂದಾಗಿ ಮೊಟಕುಗೊಂಡಿತ್ತು.

    ಇದನ್ನೂ ಓದಿ: ಅರ್ಜುನ ಪ್ರಶಸ್ತಿ ರೇಸ್‌ನಲ್ಲಿ ರಾಜ್ಯದ ಮೂವರು ಮಹಿಳೆಯರು

    ಕಳೆದ ತಿಂಗಳು ಆನ್‌ಲೈನ್ ಮೂಲಕ ನಡೆದ ನೇಷನ್ಸ್ ಕಪ್ ಚೆಸ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಇದಲ್ಲದೆ ದೇಣಿಗೆ ಸಂಗ್ರಹಕ್ಕಾಗಿ ಅಭಿಮಾನಿಗಳ ಜತೆಗೆ ಆನ್‌ಲೈನ್ ಚೆಸ್ ಆಟವಾಡಿದ್ದರು. ಲಾಕ್‌ಡೌನ್ ಸಡಿಲಗೊಂಡ ನಡುವೆ ವಿದೇಶದಲ್ಲಿದ್ದ ಭಾರತೀಯರನ್ನು ವಾಪಸ್ ಕರೆಸುವ ವೇಳೆ ಆನಂದ್ ಕೂಡ ತವರಿಗೆ ಮರಳಿದ್ದರು. ಆದರೆ, ಜರ್ಮನಿ ವಿಮಾನಗಳಿಗೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಮಾತ್ರ ಇಳಿಯಲು ಅವಕಾಶ ನೀಡಲಾಗಿದ್ದ ಕಾರಣ ಅವರು ನೇರವಾಗಿ ಚೆನ್ನೈಗೆ ತೆರಳಲು ಸಾಧ್ಯವಾಗಿರಲಿಲ್ಲ.

    ‘ವಿರೂಷ್ಕಾ ಡಿವೋರ್ಸ್’ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ ಯಾಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts