More

    ಉದ್ಯಮಿ ಆನಂದ ಮಹೀಂದ್ರಾ ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಆಚರಣೆಗೂ ಮೊದಲು ಈ ವಿಡಿಯೋ ನೋಡುತ್ತಾರಂತೆ…!

    ಭಾರತ 74ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿದೆ. ಇದೇ ಹೊತ್ತಲ್ಲಿ ಉದ್ಯಮಿ ಆನಂದ ಮಹೀಂದ್ರಾ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಹಾಗೇ ಈ ವಿಡಿಯೋವನ್ನು ನಾನು ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಆಚರಣೆಯ ಮೊದಲೂ ನಾನು ನೋಡುತ್ತೇನೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ಒಬ್ಬ ಪುಟ್ಟ ಬಾಲಕ ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಿರುವ ವಿಡಿಯೋ ಇದು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟೆ ವೈರಲ್​ ಆಗಿದೆ.

    ಪುಟ್ಟ ಬಾಲಕ ರಾಷ್ಟ್ರಗೀತೆಯನ್ನು ಹಾಡುತ್ತಾನೆ. ಕಣ್ಣುಮುಚ್ಚಿಕೊಂಡು ತನ್ಮಯತೆಯಿಂದ ಹಾಡುವ ಇವನಿಗೆ ಅದೆಷ್ಟೋ ಶಬ್ದಗಳು ಉಚ್ಛಾರ ಆಗುವುದಿಲ್ಲ. ಆದರೂ ಅದೇ ಧಾಟಿಯಲ್ಲಿ ನಿಷ್ಠೆಯಿಂದ ಹಾಡುತ್ತಾನೆ. ಇದನ್ನೂ ಓದಿ: ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಮನೆಗೆ ಇಟ್ಟ ಬೆಂಕಿಯಲ್ಲಿ ಸುಟ್ಟಿದ್ದೆಷ್ಟು? ದೋಚಿದ್ದೆಷ್ಟು?

    ವಿಡಿಯೋ ಶೇರ್​ ಮಾಡಿಕೊಂಡಿರುವ ಆನಂದ್​ ಮಹೀಂದ್ರಾ ಅವರು, ನಾನು ಒಮ್ಮೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ಆಗಲೇ ಅದನ್ನು ಸೇವ್​ ಮಾಡಿಟ್ಟುಕೊಂಡಿದ್ದೆ. ಪ್ರತಿವರ್ಷ ಸ್ವಾತಂತ್ರ್ಯೋತ್ಸವದ ಮೊಲು ಇದನ್ನು ನೋಡುತ್ತೇನೆ. ಓರ್ವ ಅದ್ಭುತ ಸಂಗೀತಗಾರನ ಬಾಯಲ್ಲಿ, ರಾಗ-ತಾಳಗಳೊಂದಿಗಿನ ರಾಷ್ಟ್ರಗೀತೆ ಕೇಳುವುದಕ್ಕಿಂತ ಈ ಬಾಲಕನ ಹಾಡಿರುವ ರಾಷ್ಟ್ರಗೀತೆಯಿಂದ ಕೇಳಿದರೆ ನನ್ನಲ್ಲಿ ಜೋಶ್​ ಹುಟ್ಟುತ್ತದೆ ಎಂದಿದ್ದಾರೆ.

    ವಿಡಿಯೋ ನೋಡಿದ ನೆಟ್ಟಿಗರೂ ಸಹ ಮೆಚ್ಚಿಕೊಂಡಿದ್ದಾರೆ. ಬಾಲಕನ ಮುಗ್ಧತೆಗೆ ಮನಸೋತಿದ್ದಾರೆ. (ಏಜೆನ್ಸೀಸ್​)

    ಶಾಸಕನ ಮನೆ, ಪೊಲೀಸ್​ ಠಾಣೆಗೆ ಬೆಂಕಿ ಇಟ್ಟ ಗಲಭೆಕೋರರು ನೇರವಾಗಿ ಹೋಗಿದ್ದು ದರ್ಗಾಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts