More

    ಜಾತ್ಯತೀತೆಯ ಅವಲೋಕನ ಅಗತ್ಯ

    ಚಾಮರಾಜನಗರ: ಜಾತ್ಯತೀತತೆ ಹಾಗೂ ನಮ್ಮ ದೇಶ ಸರ್ವ ಜನಾಂಗದ ಶಾಂತಿ ತೋಟ ಎಂಬುದಾಗಿ ಮಾತನಾಡುವ ನಾವು ನಿಜವಾಗಿಯೂ ಅದರಂತೆ ನಡೆದುಕೊಳ್ಳುತ್ತಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಹಸೀಲ್ದಾರ್ ಮಂಜುಳಾ ಹೇಳಿದರು.


    ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ, ಸವಿತಾ ಮಹರ್ಷಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


    ಸಂವಿಧಾನ ಆಶಯ ಎಲ್ಲರೂ ಒಗ್ಗೂಡಿ ಬಾಳುವುದಾಗಿದೆ. ಅದನ್ನು ನಾವೆಲ್ಲರೂ ತಿಳಿಯಬೇಕು. ಸಂವಿಧಾನ ನೀಡಿರುವ ಹಕ್ಕುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಾತಿ, ಧರ್ಮದ ವಿಚಾರದಲ್ಲಿ ಹೊಡೆದಾಡಬಾರದು. ನಮ್ಮಲ್ಲಿರುವ ಸಂಕುಚಿತ ಭಾವನೆ ಬಿಟ್ಟು ಎಲ್ಲರೂ ಒಂದಾಗಿ ಬಾಳಬೇಕು ಎಂದು ಸಲಹೆ ನೀಡಿದರು.


    ಶ್ರೀ ಛತ್ರಪತಿ ಶಿವಾಜಿ ಅವರ ಸೇನೆಯಲ್ಲಿ ಎಲ್ಲ ಜಾತಿ ವರ್ಗದವರಿಗೂ ಅವಕಾಶ ಕೊಟ್ಟಿದ್ದರು. ಸಂತ ಕವಿ ಸರ್ವಜ್ಞ ಅವರ ತ್ರಿಪದಿ ಸಾಹಿತ್ಯದಲ್ಲಿ ಮಾನವ ಕುಲಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಶ್ರೀ ಸವಿತಾ ಮಹರ್ಷಿ ಅವರು ಕಾಯಕಯೋಗಿಯಾಗಿ ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ಇಂತಹ ಮಹಾಪುರುಷರ ತತ್ವ ಹಾಗೂ ಆದರ್ಶಗಳನ್ನು ಅನುಸರಿಸಬೇಕು ಎಂದು ಹೇಳಿದರು. ಜಿಲ್ಲಾ ಕುಂಬಾರ ನೌಕರರ ಸಂಘ ಅಧ್ಯಕ್ಷ ರಾಮಶೆಟ್ಟಿ ಹಾಗೂ ಬಿ.ಆರ್.ಸಿ. ಮಹದೇವಕುಮಾರ್ ಮಾತನಾಡಿದರು.

    ತಹಸೀಲ್ದಾರ್ ಮಂಜುಳಾ, ನಗರಸಭೆ ಪೌರಾಯುಕ್ತ ರಮೇಶ್, ಸಿಪಿಐ ಶಿವಮಾದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಸಿ. ಮಠದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ತೋಟಗಾರಿಕೆ ಇಲಾಖೆಯ ವಿನುತಾ, ಸಿಡಿಪಿಒ ನಂಜಮಣ್ಣಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts