More

    ಮುಸ್ಲಿಂ ಯುವತಿಯ ಮದುವೆ ಆಮಂತ್ರಣ ಪತ್ರದಲ್ಲಿ ಗಣಪತಿ, ರಾಧಾಕೃಷ್ಣ ಫೋಟೋ

    ಮೇರಠ್ : ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಸೌಹಾರ್ದತೆ ಕಾಪಾಡಬೇಕು ಎನ್ನುವ ದೃಷ್ಟಿಯಲ್ಲಿ ಉತ್ತರ ಪ್ರದೇಶದ ಮೇರಠ್​ ​ ನಗರದ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆ ಆಮಂತ್ರಣ ಪತ್ರದಲ್ಲಿ ಹಿಂದೂ ದೇವರುಗಳ ಫೋಟೋ ಮುದ್ರಣ ಮಾಡಿಸಿದ್ದಾನೆ.

    ಮೇರಠ್​ ಬಳಿ ಇರುವ ಹಸ್ತಿನಾಪುರದ ನಿವಾಸಿ ಮೊಹಮ್ಮದ್​ ಸರಾಫತ್​ ಅವರ ಮಗಳು ಅಸ್ಮಾಗೆ ಮಾರ್ಚ್ 4ರಂದು ಮದುವೆ ನಿಶ್ಚಯವಾಗಿದೆ. ಮಗಳ ಮದುವೆಗೆ ಬಂಧುಗಳ ಜತೆ ಮುಸ್ಲಿಂ ಮತ್ತು ಹಿಂದೂ ಸ್ನೇಹಿತರನ್ನು ಆಮಂತ್ರಿಸುತ್ತಿರುವ ಸರಾಫತ್​ ಸೌಹಾರ್ದತೆಯನ್ನು ಸಾರುವಂತಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದಾನೆ. ಆಮಂತ್ರಣ ಪತ್ರದ ಮುಖಪುಟದಲ್ಲಿ ಗಣಪತಿಯ ಫೋಟೋ ಮತ್ತು ರಾಧಾಕೃಷ್ಣರ ಫೋಟೋವನ್ನು ಮುದ್ರಿಸಲಾಗಿದೆ. ಜತೆಗೆ ಮುಸ್ಲಿಂ ಸಮುದಾಯದ ಚಿಹ್ನೆಯಾಗಿರುವ ಅರ್ಧ ಚಂದ್ರ ಮತ್ತು ನಕ್ಷತ್ರದ ಮುದ್ರಣವನ್ನೂ ಸಹ ಮಾಡಲಾಗಿದೆ.

    ಕೋಮು ದ್ವೇಷ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸೌಹಾರ್ದತೆಯನ್ನು ಪ್ರದರ್ಶಿಸುವುದು ಒಳ್ಳೆಯದು ಎಂದು ನನಗನಿಸಿತು. ನನ್ನ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದು ಸರಫತ್​ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ಈ ವಿಶೇಷ ಆಮಂತ್ರಣವನ್ನು ಹಿಂದಿಯಲ್ಲಿ ಮುದ್ರಣ ಮಾಡಿಸಿರುವ ಸರಫತ್​, ಹಿಂದಿ ಭಾಷೆ ಬಾರದ ತನ್ನ ಬಂಧುಗಳು ಮತ್ತು ಮುಸ್ಲಿಂ ಸ್ನೇಹಿತರಿಗಾಗಿ ಉರ್ದು ಭಾಷೆಯಲ್ಲಿ ಮತ್ತೊಂದು ಆಮಂತ್ರಣ ಪತ್ರಿಕೆ ಮಾಡಿಸಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts