More

    ಮಿರ್ಜಾನ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಪ್ರಕರಣ ದಾಖಲು

    ಕುಮಟಾ:ಭಾರತದ ತ್ರಿವರ್ಣ ಧ್ವಜದ ನಡುವೆ ಇರುವ ಅಶೋಕ ಚಕ್ರವನ್ನು ತೆಗೆದು ಅಲ್ಲಿ ಉರ್ದು ಬರಹ ಹಾಗೂ ಅರ್ಧ ಚಂದ್ರಾಕೃತಿಯ ಚಿತ್ರವನ್ನು ಹಾಕಿ ಮೆರವಣಿಗೆಯೊಂದರಲ್ಲಿ ಪ್ರದರ್ಶಿಸಿರುವ ವಿಚಾರವಾಗಿ ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮಿರ್ಜಾನ್‌ನಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ವಿಡಿಯೋ ವೈರಲ್‌ ಆಗಿದ್ದು, ಪೊಲೀಸರು ರಾಷ್ಟ್ರ ಧ್ವಜಕ್ಕೆ ಅವಮಾನದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
    ಕೇಸರಿ ಸಾಮ್ರಾಟ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಅದರಲ್ಲಿ ಇದು ಕೇರಳವೋ, ಪಶ್ಚಿಮ ಬಂಗಾಳವೋ ಅಥವಾ ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನದಲ್ಲೋ, ನಮ್ಮ ರಾಷ್ಟ್ರ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ,ಬಿಳಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ. ಜಾಗೋ ಭಾರತೀಯ ಜಾಗೋ ಎಂಬ ಸಂದೇಶ ಹಂಚಿಕೊಂಡಿದ್ದರು. ಅದನ್ನಾಧರಿಸಿ ಪೊಲೀಸ್‌ ಸಿಬ್ಬಂದಿ ಪ್ರದೀಪ ಯಶ್ವಂತ ನಾಯಕ ಅವರಿಂದ ದೂರು ಪಡೆದ ಕುಮಟಾ ಪಿಎಸ್ಐ ಸುನೀಲ ಬಂಡಿವಡ್ಡರ್ ತನಿಖೆ ಕೈಗೊಂಡಿದ್ದಾರೆ.

    ಇದನ್ನೂ ಓದಿ: ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರ
    ಸೆ.28 ರಂದು ಈದ್ ಮಿಲಾದ್ ಹಬ್ಬದ ಅಂಗವಾಗಿ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ಜಮಾತ್ ಉಲ್ ಮುಸ್ಲಮೀನ್ ಕಮಿಟಿ ಅವರು ನಡೆಸಿದ ಮೆರವಣಿಗೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಬಿಳಿ, ನೀಲಿ ಕೆಂಪು ಹಳದಿ ಬಾವುಟಗಳನ್ನು ಹಾರಾಡಿಸುತ್ತಿದ್ದು ನಡುವೆ ವಿರೂಪಗೊಂಡ ರಾಷ್ಟ್ರಧ್ವಜ ಹಾರಿಸಿರುವ ವಿಡಿಯೋ ವೈರಲ್‌ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts