More

    ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!

    ನವದೆಹಲಿ: ಕರೊನಾ ಸೋಂಕು ದೇಶಾದ್ಯಂತ ಜನರನ್ನು ಸಂಕಷ್ಟಕ್ಕೆ ಈಡುಮಾಡುತ್ತಿದ್ದು, ಐಸಿಯು-ಬೆಡ್ ಮಾತ್ರವಲ್ಲ ಅರ್ಜೆಂಟ್​ಗೆ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಕೂಡ ಸಿಗದೆ ಕೋವಿಡ್ ಸೋಂಕಿತರು ಪರದಾಡುತ್ತಿದ್ದಾರೆ. ಸೋಂಕಿತರ ಈ ಕಷ್ಟವನ್ನು ನೋಡಿದ ಇಂಜಿನಿಯರ್ ಒಬ್ಬರು ಬೈಕ್​ನಲ್ಲೇ ಆಂಬುಲೆನ್ಸ್​ ಮಾಡಿದ್ದಾರೆ.

    ಸೋಂಕಿತರ ಕಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಮಾಹಿತಿಯನ್ನು ನೋಡಿದ ಈ ಇಂಜಿನಿಯರ್ ಕಡಿಮೆ ಖರ್ಚಿನಲ್ಲಿ ಬೈಕ್​ವೊಂದನ್ನು ಬಳಸಿಕೊಂಡು ಆಂಬುಲೆನ್ಸ್ ರೂಪಿಸಿದ್ದಾರೆ. ಹೀಗೊಂದು ಆಂಬುಲೆನ್ಸ್ ರೂಪಿಸಿದ್ದಲ್ಲದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಅದರ ಮೂಲಕ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಕೆಲಸವನ್ನೂ ಮಾಡುತ್ತಿದ್ದಾರೆ.

    ಒಂದು ಬೈಕ್​ಗೆ ಅಟ್ಯಾಚ್ ಮಾಡಲಾಗಿರುವ ಈ ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಕೂಡ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲ ಇಬ್ಬರು ರೋಗಿಯೊಂದಿಗೆ ಕುಳಿತು ಹೋಗುವಷ್ಟೂ ಸ್ಥಳಾವಕಾಶವೂ ಇದರಲ್ಲಿದೆ. ಒಂದು ಬೈಕ್​, ಕೆಲವು ಗುಜರಿ ವಸ್ತುಗಳನ್ನೇ ಬಳಸಿ ಮಾಡಲಾಗಿರುವ ಈ ಆಂಬುಲೆನ್ಸ್​ಗೆ ಖರ್ಚಾಗಿರುವುದು 20 ರಿಂದ 25 ಸಾವಿರ ರೂಪಾಯಿ ಮಾತ್ರ. ಇತ್ತೀಚೆಗೆ ಆಂಬುಲೆನ್ಸ್ ಚಾಲಕನೊಬ್ಬ 3 ಕಿ.ಮೀ. ದೂರಕ್ಕೆ 10 ಸಾವಿರ ರೂಪಾಯಿ ಕೇಳಿದ್ದು ಮನಕಲುಕಿತು. ಜತೆಗೆ ಹಲವೆಡೆ ಆಂಬುಲೆನ್ಸ್ ಸಿಗದೆ ಪರದಾಡುತ್ತಿರುವುದು ಕೂಡ ತಿಳಿದು ಇದನ್ನು ವಿನ್ಯಾಸ ಮಾಡಿದ್ದೇನೆ. ಸದ್ಯಕ್ಕೆ ಇಂಥ ಒಂದು ಆಂಬುಲೆನ್ಸ್ ಮಾಡಿದ್ದಾಗಿ ಹೇಳಿದ್ದಾರೆ ಮಧ್ಯಪ್ರದೇಶದ ಧಾರ್ ಎಂಬಲ್ಲಿನ ಈ ಯುವ ಇಂಜಿನಿಯರ್.

    ಕರೊನಾ ಸೋಂಕಿತರ ಕಷ್ಟ ನೋಡಿ ಬೈಕನ್ನೇ ಆಂಬುಲೆನ್ಸ್ ಮಾಡಿದ; ಸಂಕಷ್ಟಕ್ಕೆ ಮರುಗಿದ ಇಂಜಿನಿಯರ್​ಗೆ ಖರ್ಚಾಗಿದ್ದು ಗರಿಷ್ಠ 25 ಸಾವಿರ ರೂ.​!

    ರಾಜ್ಯದಲ್ಲಿ ಕಂಪ್ಲೀಟ್​ ಲಾಕ್​ಡೌನ್​ ಜಾರಿ ಆಗುತ್ತಾ? ಸಚಿವ ಡಾ.ಸುಧಾಕರ್​ ಹೇಳಿದ್ದೇನು?

    ಪ್ರತಿದಿನ 1 ಲಕ್ಷ ರೋಗಿಗಳಿಗೆ ಉಚಿತವಾಗಿ ಪ್ರಾಣವಾಯು ಒದಗಿಸುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts