More

    ಕೇಶ್ವಾಪುರದಲ್ಲಿ ಆತಂಕದ ವಾತಾವರಣ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ನಗರದಲ್ಲಿ ಗುರುವಾರ ಮತ್ತಿಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿರುವುದರಿಂದ ಆತಂಕದ ವಾತಾವರಣ ನಿರ್ವಣಗೊಂಡಿದೆ.

    ಕೇಶ್ವಾಪುರದ ಆಜಾದ್ ಕಾಲನಿಯ ಬಾಲಕಿಯೊಬ್ಬಳಿಗೆ ಸೋಂಕು ಇರುವುದು ದೃಢಪಟ್ಟಿರುವುದನ್ನು ಕೇಳಿ ಇಡೀ ಕೇಶ್ವಾಪುರ ಮತ್ತು ಸುತ್ತಮುತ್ತಲಿನ ಬಡಾವಣೆಗಳ ಜನ ಹೌಹಾರಿದ್ದಾರೆ.

    ಸವೋದಯ ವೃತ್ತದಿಂದ ರಮೇಶ ಭವನ ಮಧ್ಯದ ಮುತ್ತೂಟ್ ಫೈನಾನ್ಸ್ ಕಚೇರಿ ಹಿಂಭಾಗದ ಆಜಾದ್ ಕಾಲನಿಯಲ್ಲಿ ಇರುವ ಸೋಂಕಿತ ಬಾಲಕಿಯ ಮನೆಯ ಸುತ್ತ ಗುರುವಾರ ಬೆಳಗ್ಗೆ ರಾಸಾಯನಿಕ ದ್ರಾವಣ ಸಿಂಪಡಿಸಲಾಗಿದೆ.

    ಆಜಾದ್ ಕಾಲನಿ ಸೇರುವ ಎಲ್ಲ ಪ್ರಮುಖ ಹಾಗೂ ಒಳ ರಸ್ತೆಗಳನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ. ಸವೋದಯ ವೃತ್ತದಿಂದ ರಮೇಶ ಭವನದ ರಸ್ತೆ ಹಾಗೂ ಇತರ ಬಡಾವಣೆಗಳಲ್ಲಿ ಔಷಧ ಅಂಗಡಿಗಳು ಮಾತ್ರ ತೆರೆದಿದ್ದು ಕಂಡುಬಂದಿತು. ಲಾಕ್​ಡೌನ್ ಘೊಷಣೆಯಾದಾಗಿನಿಂದ ಕೇಶ್ವಾಪುರ ಮತ್ತು ಸುತ್ತಮುತ್ತಲಿನ ಅನೇಕರು ಕರೊನಾ ಭಯದಿಂದ ಮನೆಯಿಂದ ಹೊರಗೆ ಬರುತ್ತಿಲ್ಲ. ಸರ್ಕಾರದ ಆದೇಶವನ್ನು ಅತ್ಯಂತ ಭಕ್ತಿಯಿಂದ ಪಾಲಿಸುವವರಿದ್ದಾರೆ. ಇಂಥವರೆಲ್ಲ ಈಗ ತಮ್ಮ ಬಡಾವಣೆ ಸಮೀಪದಲ್ಲೇ ಸೋಂಕಿತರು ಕಂಡುಬಂದಿರುವುದರಿಂದ ತೀವ್ರ ಆತಂಕಕ್ಕೀಡಾಗಿದ್ದಾರೆ.

    ಬ್ಯಾರಿಕೇಡ್ ಸರಿಸ್ತಾರೆ…: ಆಜಾದ್ ಕಾಲನಿಯನ್ನು ಸೀಲ್​ಡೌನ್ ಮಾಡಿದ್ದರೂ ಕೆಲವು ಬೈಕ್ ಸವಾರರು ಬ್ಯಾರಿಕೇಡ್ ಸರಿಸಿ ಕಾಲನಿಯೊಳಗೆ ನುಗ್ಗುತ್ತಿದ್ದುದು ಕಂಡುಬಂತು. ಇಡೀ ಕೇಶ್ವಾಪುರ ಹಾಗೂ ಸುತ್ತಲಿನ 3 ಕಿಮೀ ವ್ಯಾಪ್ತಿಯನ್ನು ಕಂಟೈನ್​ವೆುಂಟ್ ಪ್ರದೇಶವೆಂದು ಘೊಷಿಸಿದ್ದರೂ ಕೆಲವರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸಂಚರಿಸುತ್ತಿದ್ದರು. ಸೋಂಕು ದೃಢಪಟ್ಟ ಬಾಲಕಿಯ ಮನೆ ಇರುವ ಕಾಲನಿ ಸುತ್ತಲೂ ಜನರು ಮನಬಂದಂತೆ ತಿರುಗಾಡುತ್ತಿದ್ದರು. ಸವೋದಯ ವೃತ್ತ ಹಾಗೂ ರಮೇಶ ಭವನದ ಎದುರಿನ ರಸ್ತೆ ಬಂದ್ ಮಾಡಿರುವಲ್ಲಿ ಮಾತ್ರ ಪೊಲೀಸರು ಕಂಡುಬಂದರು. ಒಳ ರಸ್ತೆಗಳಲ್ಲಿ ಪೊಲೀಸರು ಕಾಣದ ಕಾರಣ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ತಡೆಯುವವರು ಯಾರೂ ಇಲ್ಲದಂತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts