More

    ವಿದ್ಯುತ್‌ಗೆ ಪರ್ಯಾಯ ವ್ಯವಸ್ಥೆ ಅವಶ್ಯ

    ಭರಮಸಾಗರ: ಪ್ರತಿಯೊಂದು ಕೆಲಸ, ಕಾರ್ಯಗಳಿಗೆ ಕಂಪ್ಯೂಟರ್ ಎಷ್ಟು ಅಗತ್ಯವಾಗಿದೆಯೋ ಹಾಗೇ ವಿದ್ಯುತ್ ಕೂಡ ಮುಖ್ಯವಾಗಿದೆ. ಪವರ್ ಕೈ ಕೊಟ್ಟರೆ ಪರ್ಯಾಯ ವ್ಯವಸ್ಥೆ ಕಲ್ಪಿಸಕೊಳ್ಳಬೇಕಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

    ಚಿಕ್ಕಬೆನ್ನೂರು ಗ್ರಾಮದಲ್ಲಿ ಶನಿವಾರ ಸೋಲಾರ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿ, ಎಲ್ಲ ಗ್ರಾಮಗಳಲ್ಲಿಯೂ ಈ ರೀತಿಯಾದರೆ ಸರ್ಕಾರದ ಸೌಲಭ್ಯಗಳನ್ನು ಬಡವರಿಗೆ ತಲುಪಿಸಲು ಸುಲಭವಾಗಲಿದೆ. ಉದ್ಯೋಗ ಖಾತ್ರಿ, 10ನೇ ಹಣಕಾಸು ಯೋಜನೆ ಸೇರಿ ವಿವಿಧ ಸೌಲಭ್ಯಗಳು ಜನರಿಗೆ ತಲುಪುತ್ತವೆ ಎಂದರು.

    ಅಧಿಕಾರ, ಹಣ ಮುಖ್ಯವಲ್ಲ. ಇದ್ದಂತ ಸಂದರ್ಭದಲ್ಲಿ ಹತ್ತಾರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು. ಸರ್ಕಾರದಿಂದ ಅನುದಾನ ತಂದು ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

    ಗ್ರಾಪಂ ಅಧ್ಯಕ್ಷೆ ಜಿ.ಆರ್.ಶಾಂತಾ ಪ್ರಶಾಂತ್, ಸದಸ್ಯರಾದ ಸರಸ್ವತಿ ಶ್ರೀನಿವಾಸ್, ಎಚ್.ಎಸ್.ನಾಗವೇಣಿ, ವಿಜಯ ಕುಮಾರ್, ಸಿದ್ದೇಶ್, ವೆಂಕಟೇಶ, ಪ್ರಕಾಶ್, ಅಂಜನಪ್ಪ, ಮೂರ್ತಿ, ಕುಮಾರ್, ವೀರಭದ್ರಪ್ಪ, ಕುಬೇರಪ್ಪ, ಶೇಖರ್, ಮೌನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts