More

    ಯುವಕರು ಜ್ಞಾನದ ಹಿಂದೆ ಹೋಗಲಿ

    ಕಂಪ್ಲಿ: ಯುವಜನತೆ ಅಕ್ಷರದ ಹಿಂದೆ ಹೋಗುತ್ತಿದ್ದಾರೆ ವಿನಃ ಜ್ಞಾನದ ಹಿಂದೆ ಅಲ್ಲ ಎಂದು ಹೊಸಪೇಟೆ ವಿಜಯನಗರ ಕಾಲೇಜಿನ ಅತಿಥಿ ಉಪನ್ಯಾಸಕ ಅಭಿನಂದನ್ ಜೋಷಿ ಹೇಳಿದರು.

    ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀಗೊಗ್ಗ ಚನ್ನಬಸಯ್ಯನವರ 25ನೇ ವಾರ್ಷಿಕ ಪುಣ್ಯಸ್ಮರಣೆ, 223ನೇ ಶಿವಾನುಭವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಅಕ್ಷರ ಅಂಕಗಳಿಸಿಕೊಡಬಹುದೆ ಹೊರತು ಜ್ಞಾನವನ್ನಲ್ಲ. ಯುವಜನತೆ ಜ್ಞಾನ ಸಂಪಾದಿಸುವಲ್ಲಿ ಆಸಕ್ತಿ ವಹಿಸಬೇಕಿದೆ. ತಂತ್ರಜ್ಞಾನ ದೇಶದ ಅಭಿವೃದ್ಧಿಗಿಂತ ಜನರ ಬದುಕಿನ ಮೇಲೆ ದುಷ್ಪಾರಿಣಾಮ ಬೀರುತ್ತಿದೆ. ಮೊಬೈಲ್, ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳಿಂದ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದೆ. ಯುವ ಸಮೂಹ ಸದೃಢ ಜೀವನಕ್ಕಾಗಿ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

    ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ, ಗೊಗ್ಗ ಬಸಯ್ಯನವರ ಸಮಯ ಪ್ರಜ್ಞೆ, ದೂರದೃಷ್ಠಿ, ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ, ಧಾರ್ಮಿಕ ಮನೋಭಾವನೆಗಳು ಅನುಕರಣೀಯ ಎಂದರು.

    ಹೊಸಪೇಟೆ ವಿಜಯನಗರ ಕಾಲೇಜಿನ ಉಪನ್ಯಾಸಕ ಡಾ.ಮೃತ್ಯುಂಜಯ ರುಮಾಲೆ, ಶಿವಾನಂದಾಶ್ರಮದ ಟ್ರಸ್ಟಿಗಳಾದ ಗೊಗ್ಗ ಚನ್ನಬಸವರಾಜ, ಗೊಗ್ಗ ಗುರುಸಿದ್ಧಯ್ಯ, ಪಾಠಶಾಲೆ ಪ್ರಾಚಾರ್ಯ ಘನಮಠದಯ್ಯ ಹಿರೇಮಠ, ಪ್ರಮುಖರಾದ ಅಯೋಧ್ಯೆಯ ಎಚ್.ಎಂ. ಶರಣಬಸವರಾಜ, ಎಚ್.ಎಂ. ಸಿದ್ಧಲಿಂಗಸ್ವಾಮಿ, ಗೊಗ್ಗ ಕಾರ್ತೀಕ್, ಶಾಂತಾ, ಅಕ್ಕನಾಗಮ್ಮ, ಶಾರದಾ, ಎಸ್.ಡಿ.ಬಸವರಾಜ್, ಜಿ.ಪ್ರಕಾಶ್, ಕೆ.ಎಂ.ಚಂದ್ರಶೇಖರ್, ಎಚ್.ಎಂ.ಜಗದೀಶ್, ಯೋಗಾಚಾರ್, ಸಜ್ಜನರ ವೀರಭದ್ರಪ್ಪ, ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯೆಯರು ಹಾಗೂ ಪಾಠಶಾಲೆ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts