More

    ಮಸ್ಕ್​​ ಭಯ್ಯಾ…ಧನ್ಯವಾದ..ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಮತ್ತೆ ಬಂದಿದೆ: ಅಮಿತಾಭ್​ ಬಚ್ಚನ್​​

    ಮುಂಬೈ: ಟ್ವಿಟರ್ ಬ್ಲೂ ಚಂದಾದಾರಿಕೆ ಇಲ್ಲದೆ ಪ್ರೊಫೈಲ್‌ಗಳಿಂದ ಬ್ಲೂ ಟಿಕ್ ತೆಗೆದು ಹಾಕಿದೆ. ಈ ಕುರಿತಾಗಿ ಅನೇಕ ಸೆಲೆಬ್ರೆಟಿಗಳು ಸೋಶಿಯಲ್​​ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ನಟ ಅಮಿತಾಭ್​ ಬಚ್ಚನ್​​ ಅವರ ಟ್ವೀಟ್​​ ವೈರಲ್​​ ಆಗುತ್ತಿದ್ದಂತೆ ಈಗ ಅವರ ಖಾತೆಗೆ ಬ್ಲೂ ಟಿಕ್ ಮರಳಿ ನೀಡಲಾಗಿದೆ.

    ಅಮಿತಾಭ್​ ಬಚ್ಚನ್ ಟ್ವಿಟರ್ ತಮ್ಮ ಬ್ಲೂ ಟಿಕ್ ಅನ್ನು ತೆಗೆದ ನಂತರ ಮಾಡಿದ ಟ್ವೀಟ್ ವೈರಲ್ ಆಗಿದೆ. “ಹೇ ಟ್ವಿಟ್ಟರ್! ನೀವು ಕೇಳುತ್ತೀರಾ? ನಾನು ಚಂದಾದಾರಿಕೆ ಸೇವೆಗಾಗಿ ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಅನ್ನು ಹಿಂತಿರುಗಿಸಿ, ಇದರಿಂದ ಜನರಿಗೆ ನಾನೇ ಅಮಿತಾಭ್​ ಬಚ್ಚನ್ ಎಂದು ತಿಳಿಯುತ್ತದೆ. ನಾನು ಕೈ ಜೋಡಿಸಿ ನಿಮ್ಮ ಬಳಿ ವಿನಂತಿಸುತ್ತಿದ್ದೇನೆ ಎಂದು ಟ್ವೀಟ್​​ ಮಾಡಿದ್ದಾರೆ. ನಂತರ ಅಮಿತಾಭ್ ಬಚ್ಚನ್ ಅವರ ಟ್ವಿಟರ್ ಖಾತೆಗೆ ಬ್ಲೂ ಟಿಕ್ ಮರುಸ್ಥಾಪಿಸಲಾಗಿದೆ.

    ಇದನ್ನೂ ಓದಿ:  ಟ್ರಕ್‌ಗೆ ಬಸ್ ಡಿಕ್ಕಿ ; 7 ಜನ ಮೃತ್ಯು, 40 ಮಂದಿಗೆ ಗಂಭೀರ ಗಾಯ!
    ಹೊಸ ಟ್ವೀಟ್‌ನಲ್ಲಿ, ನಟ ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ “ಹೇ ಮಸ್ಕ್ ಭಯ್ಯಾ! ತುಂಬಾ ಧನ್ಯವಾದಗಳು..ನನ್ನ ಹೆಸರಿನ ಮುಂದೆ ‘ನೀಲ್ ಕಮಲ್’ ಮತ್ತೆ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

    ಟ್ವಿಟರ್​ನ ಮಾಲೀಕ ಎಲಾನ್​ ಮಸ್ಕ್​ ಜಾರಿಗೆ ತಂದಿರುವ ನೂತನ ನಿಯಮ ಎಂದು ಹೇಳಲಾಗಿದೆ.ಏಪ್ರಿಲ್ 1 ರಂದು ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತು, ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ. ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ. ಮೊಬೈಲ್​ ಬಳಕೆದಾರರಿಗೆ 650 ರೂ ಹಾಗೂ ವೆಬ್​ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.

    ನಾಟಕದ ಮಾತಿಗೆ ಜನ ಮರುಳಾಗುವುದಿಲ್ಲ;ಶಾಸಕ ಎಂ. ಸತೀಶ್ ರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts