More

    ಸಮಿತಿ ವರದಿ ಬಳಿಕ ಹಳೆಯ ಪಿಂಚಣಿ ಯೋಜನೆ ಬಗ್ಗೆ ಚರ್ಚೆ: ಅಮಿತ್ ಶಾ

    ನವದೆಹಲಿ: ಈ ಉದ್ದೇಶಕ್ಕಾಗಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವ ಬಗ್ಗೆ ಸರ್ಕಾರ ಉದ್ದೇಶಪೂರ್ವಕವಾಗಿ ಚರ್ಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ಇದನ್ನೂ ಓದಿ: ‘ಕೇಸ್ ಕೋರ್ಟಿನಲ್ಲಿದೆ, ಈ ವಿಷಯ ಸ್ವತಃ ವಕೀಲರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ’?: ಸಂಪುಟ ನಿರ್ಧಾರಕ್ಕೆ ಎಚ್​​​​ಡಿಕೆ ಕಿಡಿ

    2022 ರಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ಛತ್ತೀಸ್‌ಗಢ ಮತ್ತು ರಾಜಸ್ಥಾನಗಳು ಡಿಫೈನ್ಡ್ ಪೆನ್ಶನ್ ಬೆನಿಫಿಟ್ ಸ್ಕೀಮ್ ಅಥವಾ ಓಪಿಎಸ್​ (DPBS/OPS) ಮರುಸ್ಥಾಪನೆಯನ್ನು ಘೋಷಿಸಿದವು. ಮರುಸ್ಥಾಪನೆಗಾಗಿ ಕಾರ್ಮಿಕ ಸಂಘಟನೆಗಳು ಮತ್ತು ಹಲವಾರು ನೌಕರರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿವೆ.

    ಇಂದು ಜೈಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒಪಿಎಸ್ ಮರುಸ್ಥಾಪನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅಮಿತ್​ ಶಾ, “ನಾವು ಒಪಿಎಸ್ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ಕೂಡಲೇ ಅದರ ಬಗ್ಗೆ ಚರ್ಚಿಸುತ್ತೇವೆ” ಎಂದು ಹೇಳಿದರು.

    ಇದನ್ನೂ ಓದಿ: ನಿರ್ಭಯಾ ನಿಧಿಯಡಿ ನಿರ್ಮಾಣವಾಯ್ತು “ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್”

    ಅಮಿತ್​ ಶಾ ಹೇಳಿಕೆಗೆ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ಹೇಳಿದ್ದಿಷ್ಟು: ಅಮಿತ್​ ಶಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಕಾಂಗ್ರೆಸ್ ಒಪಿಎಸ್‌ಗೆ ಖಾತರಿ ನೀಡಿದರೆ, ಬಿಜೆಪಿ ಸಮಿತಿಯನ್ನು ನೀಡುತ್ತದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸ, ಖಾತರಿ ಮತ್ತು ಸಮಿತಿ ನಡುವಿನ ವ್ಯತ್ಯಾಸ. ಅಮಿತ್​ ಅವರೇ, ನಮಗೆ ಬದ್ಧತೆ ಬೇಕು, ಸಮಿತಿಯಲ್ಲ. ಈಗ ಒಪಿಎಸ್ ಜಾರಿಯಾದ ಮೇಲೆ ಕಾನೂನು ರೂಪಿಸಿ ಖಾಯಂ ಮಾಡುತ್ತೇವೆ ಎಂಬ ಗ್ಯಾರಂಟಿ ನೀಡುತ್ತಿದ್ದೇವೆ. ಇದು ಸಾರ್ವಜನಿಕ ನಿರ್ಧಾರ” ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.

    ನಿರ್ಭಯಾ ನಿಧಿಯಡಿ ನಿರ್ಮಾಣವಾಯ್ತು “ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts