More

    ಕೇರಳದಲ್ಲಿ ಮತ್ತೆ ಆರು ಜನರಲ್ಲಿ ಕೊರೊನಾ ಪತ್ತೆ: 7ನೇ ತರಗತಿಯವರೆಗಿನ ಮಕ್ಕಳಿಗೂ ರಜೆ, ಸಾರ್ವಜನಿಕ ಸಭೆಗಳು ರದ್ದು

    ತಿರುವನಂತಪುರಂ: ಕೊರೊನಾ ವೈರಸ್​ನ ದಾಳಿಗೆ ಇಡೀ ದೇಶವೇ ಭಯಭೀತವಾಗಿದೆ. ಕೇರಳದಲ್ಲಿ ಇಂದು ಆರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿನ ಸರ್ಕಾರ ಪರಿಸ್ಥಿತಿಯ ನಿಯಂತ್ರಣಕ್ಕೆ ಹಲವು ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದೆ. ಮಾರ್ಚ್​ ಕೊನೆಯವರೆಗೂ 7ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕ ಸಭೆಗಳನ್ನು ರದ್ದು ಮಾಡಲಾಗಿದೆ.

    ಇಂದು ರಾಜ್ಯದಲ್ಲಿ ಆರು ಜನರಲ್ಲಿ ಕೊರೊನಾ ವೈರಸ್​ ಇರುವುದು ಧೃಡವಾಗಿದ್ದು, ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿರುವ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್,​ 7ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅದರ ಜತೆ ಟ್ಯೂಷನ್​ಗಳು, ಬೇರೆ ಬೇರೆ ತರಗತಿಗಳಿಗೂ ಸಹ ಮಾರ್ಚ್​ ಕೊನೆಯವರೆಗೆ ತರಗತಿ ತೆಗೆದುಕೊಳ್ಳದಿರುವಂತೆ ತಿಳಿಸಲಾಗಿದೆ. 8,9,10 ಮತ್ತು ಪಿಯು ವಿದ್ಯಾರ್ಥಿಗಳಿಗೆ ನಿಗದಿಯಾಗಿರುವ ದಿನಾಂಕದಂದೇ ಪರೀಕ್ಷೆಗಳು ನಡೆಯಲಿವೆ. ನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಸಭೆ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

    ಮದುವೆಗಳಿಗೆ ನಿರ್ಭಂಧ ಹೇರಿಲ್ಲ ಎಂದು ತಿಳಿಸಿರುವ ಸಿಎಂ ನಿಯಮಿತ ಅತಿಥಿಗಳೊಂದಿಗೆ ಅದ್ದೂರಿತನವಿಲ್ಲದೆ ಮದುವೆ ಕಾರ್ಯಕ್ರಮ ನಡೆಸಿಕೊಳ್ಳಿ ಎಂದು ನಾಗರಿಕರಲ್ಲಿ ಕೇಳಿಕೊಂಡಿದ್ದಾರೆ. ಶಬರಿಮಲೆ ದೇವಸ್ಥಾನವು ಎಂದಿನಂತೆ ತೆರೆದಿರಲಿದ್ದು, ಭಕ್ತಾದಿಗಳು ಈ ಸಮಯದಲ್ಲಿ ಭೇಟಿ ಮಾಡದಿರುವುದು ಒಳಿತು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಟಿಕ್​ಟಾಕ್​ ಮಾಡಿದ್ದಕ್ಕೆ ಜೀವನವೇ ಬದಲಾಯಿತು: ಅಮಾನತು ಆದರೂ ಸ್ಟಾರ್​ ಆದ ಪೊಲೀಸ್​ ಅಧಿಕಾರಿ

    ವಾರಾಣಸಿಯ ದೇವರಿಗೂ ಕೊರೊನಾ ಭಯ: ಮಾಸ್ಕ್​ ತೊಟ್ಟು ದರ್ಶನ ನೀಡುತ್ತಿರುವ ದೇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts