More

    ಐಪಿಎಲ್​ ಹರಾಜಿನಲ್ಲಿ ಯಾಮಾರಿತೇ ಪಂಜಾಬ್​ ಕಿಂಗ್ಸ್​? ತಪ್ಪಾಗಿ ಬೇರೆ ಆಟಗಾರನಿಗೆ ಬಿಡ್​; ಒಂದೇ ಹೆಸರಿನಿಂದ ಗೊಂದಲ!

    ದುಬೈ: ಐಪಿಎಲ್​ ಹರಾಜಿನಲ್ಲಿ ಎಲ್ಲ ತಂಡಗಳು ಸಮರ್ಥ ಆಟಗಾರರನ್ನು ಖರೀದಿಸಿದ ಸಂತೃಪ್ತಿಯಲ್ಲಿದ್ದರೆ, ಪಂಜಾಬ್​ ಕಿಂಗ್ಸ್​ ತಂಡ ಗೊಂದಲಕ್ಕೀಡಾಗಿ ಬೇರೆ ಆಟಗಾರನನ್ನು ಖರೀದಿಸುವ ಮೂಲಕ ಯಾಮಾರಿದೆ ಎಂದು ವರದಿಯಾಗಿದೆ.

    ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್​ ಸಿಂಗ್​ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್​ ಕಿಂಗ್ಸ್​ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ 20 ಲಕ್ಷ ರೂ. ಮೂಲಬೆಲೆಗೆ ಬಿಡ್​ ಸಲ್ಲಿಸಿದರು. ಆದರೆ ಆ ಶಶಾಂಕ್​ ಸಿಂಗ್​ ತಾನು ಕಣ್ಣಿಟ್ಟಿದ್ದ ಆಟಗಾರ ಅಲ್ಲ ಎಂಬುದು ಪಂಜಾಬ್​ ತಂಡಕ್ಕೆ ಬಿಡ್​ ಪ್ರಕ್ರಿಯೆ ಮುಗಿದ ನಂತರ ಗೊತ್ತಾಯಿತು. ಹರಾಜುಗಾರ್ತಿ ಮಲ್ಲಿಕಾ ಸಾಗರ್​ಗೆ ಪಂಜಾಬ್​ ತಂಡ ಈ ಬಗ್ಗೆ ಮಾಹಿತಿ ನೀಡಿದರೂ, ಅವರು ಬಿಡ್​ ವಾಪಸ್​ ಪಡೆಯಲು ಅಥವಾ ಶಶಾಂಕ್​ ಸಿಂಗ್​ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.

    ಪಂಜಾಬ್​ ತಂಡ ಬಿಡ್​ ಸಲ್ಲಿಸಿದ್ದು ಛತ್ತೀಸ್​ಗಢದ 32 ವರ್ಷದ ಆಲ್ರೌಂಡರ್​ ಶಶಾಂಕ್​ ಸಿಂಗ್​ಗೆ ಆಗಿತ್ತು. ಆದರೆ ಅದು ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್​ ಶಶಾಂಕ್​ ಸಿಂಗ್​ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಆದರೆ ಹರಾಜಿನಲ್ಲಿ ಗೊಂದಲ ಮಾಡಿಕೊಂಡಿರುವ ವರದಿಯನ್ನು ತಳ್ಳಿಹಾಕಿರುವ ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿ, ತನಗೆ ಬೇಕಾದ ಆಟಗಾರನನ್ನೇ ಖರೀದಿಸಿರುವುದಾಗಿ ಸ್ಪಷ್ಟನೆ ನೀಡಿದೆ.

    ರಚಿನ್​ ರವೀಂದ್ರ ಖರೀದಿಗೆ ಆಸಕ್ತಿ ತೋರಿಸದ ಆರ್​ಸಿಬಿ; ಕಮ್ಮಿನ್ಸ್​ಗಾಗಿ ಭಾರಿ ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts