More

    ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ 5 ತಿಂಗಳ ಗರ್ಭಿಣಿ!

    ಟೋಕಿಯೊ: ಐದು ತಿಂಗಳ ಗರ್ಭಿಣಿಯಾಗಿರುವ ಅಮೆರಿಕದ ಲೋರಾ ವೆಬ್‌ಸ್ಟರ್ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಸ್ಫೂರ್ತಿದಾಯಕ ಸಾಧನೆ ಮೆರೆದಿದ್ದಾರೆ. ಅಮೆರಿಕದ ಸಿಟ್ಟಿಂಗ್ ವಾಲಿಬಾಲ್ ತಂಡ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ 3-1ರಿಂದ ಗೆಲುವು ದಾಖಲಿಸುವುದರೊಂದಿಗೆ ತಂಡದ ಪ್ರಮುಖ ಸದಸ್ಯೆಯಾಗಿರುವ ಲೋರಾ ವೆಬ್‌ಸ್ಟರ್ ಈ ವಿಶೇಷ ಸಾಧನೆ ಮಾಡಿದರು. ಫೈನಲ್ ಪಂದ್ಯದಲ್ಲಿ ಅವರು ಅಮೆರಿಕಕ್ಕೆ 6 ಅಂಕವನ್ನೂ ಗೆದ್ದುಕೊಟ್ಟರು.

    35 ವರ್ಷದ ಲೋರಾ ವೆಬ್‌ಸ್ಟರ್ 11ನೇ ವಯಸ್ಸಿನಲ್ಲಿದ್ದಾಗ ಎಲುಬು ಕ್ಯಾನ್ಸರ್‌ನಿಂದ ಎಡಗಾಲು ಕಳೆದುಕೊಂಡಿದ್ದರು. ಲೋರಾಗೆ ಪ್ಯಾರಾಲಿಂಪಿಕ್ಸ್ ಪದಕ ಗೆಲುವು ಅಥವಾ ಗರ್ಭಿಣಿಯಾಗಿರುವಾಗಲೇ ಕ್ರೀಡಾಸ್ಪರ್ಧೆಯಲ್ಲಿ ಕಾಣಿಸಿಕೊಂಡಿದ್ದು ಕೂಡ ಇದೇ ಮೊದಲೇನಲ್ಲ. ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು ಈ ಹಿಂದೆಯೂ 4 ಪದಕ ಜಯಿಸಿದ್ದರು. 5 ವರ್ಷಗಳ ಹಿಂದೆ ರಿಯೋದಲ್ಲಿ ಚಿನ್ನ, 2012, 2016ರಲ್ಲಿ ಬೆಳ್ಳಿ ಮತ್ತು 2004ರಲ್ಲಿ ಕಂಚು ಜಯಿಸಿದ್ದರು. ಅಲ್ಲದೆ, ಈಗಾಗಲೆ 3 ಮಕ್ಕಳ ತಾಯಿಯಾಗಿರುವ ಲೋರಾ, 3ನೇ ಬಾರಿಗೆ ಗರ್ಭಿಣಿಯಾಗಿರುವ ನಡುವೆಯೇ ಸಿಟ್ಟಿಂಗ್ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

    ‘ಪಂದ್ಯ ಆಡಲು ಇಳಿದಾಗ ನಾನು ಗರ್ಭಿಣಿ ಎಂಬುದನ್ನೇ ಮರೆತುಬಿಡುತ್ತೇನೆ. ಆದರೂ ಪಂದ್ಯದ ವೇಳೆ ಡೈವ್ ಮಾಡುವ ಸಂದರ್ಭ ಬಂದಾಗ ನಾನು ಸ್ವಲ್ಪ ಎಚ್ಚರ ವಹಿಸುತ್ತೇನೆ. ಆಗ ನಾನು ಹೊಟ್ಟೆಯನ್ನು ಮುಂದೆಕೊಟ್ಟು ಡೈವ್ ಮಾಡುವುದಿಲ್ಲ. ಆರೋಗ್ಯಕರ ಗರ್ಭ ಧರಿಸಿದ್ದರೆ ಈ ರೀತಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ ಅಲ್ಲ’ ಎಂದು ಲೋರಾ ವೆಬ್‌ಸ್ಟರ್ ಈ ಮುನ್ನ ಸೆಮಿೈನಲ್ ಪಂದ್ಯಕ್ಕೆ ಮುನ್ನ ಹೇಳಿಕೊಂಡಿದ್ದರು. ಅವರು 2ನೇ ಬಾರಿಗೆ, ಗರ್ಭಿಣಿಯಾಗಿರುವ ನಡುವೆಯೂ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

    ‘ಕಳೆದ 18 ವರ್ಷಗಳಿಂದ ವಾಲಿಬಾಲ್ ಆಡುತ್ತಿರುವೆ. ನನ್ನ ದೇಹದ ಚಲನೆ ಸಾಮಾನ್ಯವಾಗಿಯೇ ಇದೆ. ಗರ್ಭಿಣಿ ಸ್ಥಿತಿ ಮತ್ತು ಕ್ರೀಡಾಸ್ಪರ್ಧೆಯ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳುತ್ತ ಬಂದಿರುವೆ’ ಎಂದು ಲೋರಾ ತಿಳಿಸಿದ್ದಾರೆ. ಅವರು 10, 6 ವರ್ಷದ ಇಬ್ಬರು ಪುತ್ರರು ಮತ್ತು 8 ವರ್ಷದ ಪುತ್ರಿಯನ್ನೂ ಹೊಂದಿದ್ದಾರೆ.

    ನಿಂತು ಆಡುವ ವಾಲಿಬಾಲ್ ಆಟದ ಮಾದರಿಯ ಬಹುತೇಕ ನಿಯಮಗಳನ್ನೇ ಅಂಗವಿಕಲರು ಆಡುವ ಸಿಟ್ಟಿಂಗ್ ವಾಲಿಬಾಲ್ ಕೂಡ ಹೊಂದಿದೆ. ಇದರಲ್ಲೂ ಕೋರ್ಟ್ ಒಳಗೆ 6 ಆಟಗಾರರಿರುತ್ತಾರೆ. ಆದರೆ ಸ್ಟಾೃಂಡಿಂಗ್ ವಾಲಿಬಾಲ್ ಕೋರ್ಟ್‌ಗಿಂತ ಸ್ವಲ್ಪ ಸಣ್ಣದಾದ ಕೋರ್ಟ್ ಇರುತ್ತದೆ ಮತ್ತು ಮಹಿಳೆಯರ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ನೆಟ್ 1.05 ಮೀಟರ್ ಎತ್ತರದ ವರೆಗಷ್ಟೇ ಇರುತ್ತದೆ.

    ಕೌನ್ ಬನೇಗಾ ಕರೋಡ್‌ಪತಿಯಲ್ಲಿ 25 ಲಕ್ಷ ರೂಪಾಯಿ ಗೆದ್ದ ಗಂಗೂಲಿ-ಸೆಹ್ವಾಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts