More

    ಅಮೆರಿಕ ವಧು-ವರನ ಪ್ರೇಮ ವಿವಾಹಕ್ಕೆ ಶಿವಮೊಗ್ಗದ ನೆಲ ಸಾಕ್ಷಿ !

    ಶಿವಮೊಗ್ಗ: ವರನ ಪಾಲಕರು ಅನಿವಾಸಿ ಭಾರತೀಯರು. ವಧುವಿನ ಪಾಲಕರು ಅನಿವಾಸಿ ಬಾಂಗ್ಲಾ ದೇಶಿಗರು. ವಧು-ವರರರಿಬ್ಬರೂ ಅಮೆರಿಕ ಪ್ರಜೆಗಳು. ಆದರೆ ಅವರಿಬ್ಬರ ನಡುವಿನ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದು ಮಾತ್ರ ಶಿವಮೊಗ್ಗದ ಬಸವಕೇಂದ್ರ.
    ಹೌದು, ದೇಶ ಭಾಷೆ ಗಡಿಗಳ ಮಿತಿಗಳನ್ನು ಮೀರಿ ಮಲೆನಾಡು ಶಿವಮೊಗ್ಗ ವೆಂಕಟೇಶನಗರದ ಬಸವಕೇಂದ್ರದಲ್ಲಿ ಅಮೆರಿಕದ ವಧು ಈಶಾ-ವರ ತುಷಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಸವಕೇಂದ್ರದ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿ ಇಬ್ಬರ ದಾಂಪತ್ಯ ದೀಕ್ಷೆ ಕೊಡಿಸಿದರು.
    ತುಷಾರ್ ಮತ್ತು ಈಶಾ ಅವರ ಪ್ರೀತಿಯನ್ನು ಮನ್ನಿಸಿದ ಇಬ್ಬರ ಪಾಲಕರು ಶಿವಮೊಗ್ಗದಲ್ಲಿ ದಾಂಪತ್ಯ ದೀಕ್ಷೆ ಕೊಡಿಸಿದ್ದಾರೆ. ವಧು ವರರು ಇಷ್ಟಲಿಂಗ ದೀಕ್ಷೆ ಪಡೆದ ಮೇಲೆ ನಡೆದ ಸರಳ ಸಮಾರಂಭದಲ್ಲಿ ಬಸವಕೇಂದ್ರ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಅವರು ಬೋಧಿಸಿದ ದಾಂಪತ್ಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
    ನಂತರ ಮಾಂಗಲ್ಯಧಾರಣೆಯ ಮೂಲಕ ವಿವಾಹ ವಿಧಿ ಪೂರ್ಣಗೊಂಡಿತು. ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ವರನ ತಂದೆ ಯಶವಂತ ಗಡ್ಡಿ, ತಾಯಿ ಆಶಾ, ಬಂಧು ಬಾಂಧವರು ಮತ್ತು ಬಸವಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts