More

    ಭಾರತದ ಕೋವಿಡ್ ಸ್ಥಿತಿ ಹೃದಯ ವಿದ್ರಾವಕ, ಸಹಾಯಕ್ಕೆ ನಾವು ಸಿದ್ಧ: ಕಮಲಾ ಹ್ಯಾರಿಸ್

    ವಾಷಿಂಗ್ಟನ್: ಭಾರತದಲ್ಲಿ ಕರೊನಾ ವೈರಸ್​ ಮಹಾಮಾರಿಯ ದಾಳಿಯ ಕುರಿತಾಗಿ ಅಮೆರಿಕ ಕೂಡ ಬೇಸರ ವ್ಯಕ್ತಪಡಿಸಿದೆ. ನಮ್ಮ ಕೈಲಾದ ಸಹಾಯವನ್ನು ನಾವು ಮಾಡುತ್ತೇವೆ ಎಂದು ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಹೇಳಿದ್ದಾರೆ.

    ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಡಯಾಸ್ಪೊರಾ ಔಟ್ ರೀಚ್ ಈವೆಂಟ್​ನಲ್ಲಿ ಮಾತನಾಡಿದ ಕಮಲಾ ಹ್ಯಾರಿಸ್, “ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ನನ್ನ ಕುಟುಂಬದ ಹಿಂದಿನ ತಲೆಮಾರುಗಳು ಅಲ್ಲಿಂದಲೇ ಬಂದಿವೆ. ನನ್ನ ತಾಯಿ ಭಾರತದಲ್ಲಿ ಹುಟ್ಟಿ ಬೆಳೆದವರು. ಇಂದಿಗೂ ನನ್ನ ಕುಟುಂಬದ ಅನೇಕ ಸದಸ್ಯರು ಅಲ್ಲಿಯೇ ವಾಸಿಸುತ್ತಿದ್ದಾರೆ. ಅಲ್ಲಿನ ಕ್ಷೇಮವು ಅಮೆರಿಕಕ್ಕೆ ಅತ್ಯಂತ ಮುಖ್ಯವಾದ ವಿಷಯ. ಭಾರತದಲ್ಲಿ ಕೋವಿಡ್ ಸೋಂಕಿತರ ಮತ್ತು ಸಾವುಗಳ ಸಂಖ್ಯೆಯ ಹೆಚ್ಚಳವು ಅತ್ಯಂತ ದಾರುಣವಾದದ್ದು. ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಮನದಾಳದ ಸಂತಾಪಗಳು. ಭಾರತದ ಪರಿಸ್ಥಿತಿಯ ಭೀಕರ ಸ್ವರೂಪ ಸ್ಪಷ್ಟವಾದ ತಕ್ಷಣ ನಮ್ಮ ಆಡಳಿತವು ಕ್ಷಿಪ್ರ ಕ್ರಮಗಳನ್ನು ತೆಗೆದುಕೊಂಡಿದೆ.” ಎಂದು ಮನದಾಳದ ಮಾತನ್ನು ಆಡಿದ್ದಾರೆ.

    “ಏಪ್ರಿಲ್ 26ರಂದು ನಮ್ಮ ಅಧ್ಯಕ್ಷರಾದ ಜೋ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅವರ ಸಹಾಯಕ್ಕೆ ನಿಲ್ಲುವುದಾಗಿ ಹೇಳಿದ್ದರು. ಅದರಂತೆ ಏಪ್ರಿಲ್ 30ರ ಹೊತ್ತಿಗೆ, ಅಮೆರಿಕದ ಸೇನೆ ಸದಸ್ಯರು ಮತ್ತು ನಾಗರಿಕರು ಆಗಲೇ ಭಾರತಕ್ಕೆ ಪರಿಹಾರದ ಸಾಮಗ್ರಿಗಳ ವಿತರಣೆ ಕಾರ್ಯದಲ್ಲಿ ನಿರತರಾಗಿದ್ದರು. ಈಗಾಗಲೇ ನಾವು ಮರುಪೂರಣ ಮಾಡಬಹುದಾದ ಆಮ್ಲಜನಕ ಸಿಲಿಂಡರ್‌ಗಳನ್ನು ಭಾರತಕ್ಕೆ ತಲುಪಿಸಿದ್ದೇವೆ. ಅಂತೆಯೇ ಆಮ್ಲಜನಕ ಸಾಂದ್ರಕಗಳನ್ನು ಕೂಡ ಕಳುಹಿಸಿಕೊಟ್ಟಿದ್ದೇವೆ. ಇನ್ನೂ ಹೆಚ್ಚಿನ ಸಹಾಯ ಮಾಡಲಿದ್ದೇವೆ. ಇದರ ಜತೆಗೆ N95 ಮಾಸ್ಕ್​ಗಳನ್ನೂ ರವಾನೆ ಮಾಡಿದ್ದೇವೆ. ಇನ್ನಷ್ಟು ರವಾನೆಗೆ ಸಿದ್ಧವಾಗಿವೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ರೆಮ್‌ಡೆಸಿವಿರ್​ಗಳನ್ನು ತಲುಪಿಸಿದ್ದೇವೆ” ಎಂದು ತಿಳಿಸಿದ್ದಾರೆ.

    ಹಾಗೆಯೇ ಕೋವಿಡ್ ಲಸಿಕೆಗಳ ಪೇಟೆಂಟ್‌ಗಳನ್ನು ತೆಗೆದುಹಾಕಲು ನಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಇದರಿಂದ ಭಾರತ ಮತ್ತು ಇತರ ರಾಷ್ಟ್ರಗಳು ತಮ್ಮ ಜನರಿಗೆ ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಲಸಿಕೆ ನೀಡಲು ಸಹಾಯಕವಾಗುತ್ತದೆ. ಭಾರತ ಮತ್ತು ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿವೆ ಎಂದು ಕಮಲಾ ತಮ್ಮ ಮಾತುಗಳನ್ನು ಆಡಿದ್ದಾರೆ.

    ‘ನಮ್ಮವರನ್ನು ಕಳೆದುಕೊಂಡ ನೋವು ನಮಗಿದೆ, ಶೂಟಿಂಗ್ ಮಾಡಲ್ಲ’

    ಎಕ್ಸ್​ ಬಾಯ್​ಫ್ರೆಂಡ್​ಗಾಗಿ ವಿಷ ಹಾಕಿದ ಚಿಕನ್​ ಪಾರ್ಸಲ್​ ಮಾಡಿದ ಯುವತಿ! ಡೆಲಿವರಿ ಬಾಯ್​ ಮಗನ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts