ಮುಂಬೈ: ಅಮೆರಿಕಾ ಮತ್ತು ಇರಾನ್ ನಡುವೆ ಸಂಘರ್ಷ ಎದುರಾಗಿರುವ ಹಿನ್ನೆಲೆಯಲ್ಲಿ 6 ವರ್ಷಗಳ ಅವಧಿಯಲ್ಲೇ ಚಿನ್ನ ಅಂತ್ಯಂತ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.
ಇರಾನ್ನ ರೆವಲ್ಯೂಷನರಿ ಗಾರ್ಡ್ ಕೋರ್ನ ಮುಖ್ಯಸ್ಥ ಸುಲೇಮಾನಿ ಅವರನ್ನು ಅಮೆರಿಕ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿದೆ. ಈ ಹತ್ಯೆ ನಂತರ ಇರಾಕ್ ಹಾಗೂ ಅಮೆರಿಕಾ ನಡುವೆ ಉದ್ವಿಗ್ನ ಸ್ಥಿತಿ ಎದುರಾಗಿ ಚಿನ್ನ ಹಾಗೂ ತೈಲ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಚಿನ್ನದ ಜೊತೆಗೆ ಬೆಳ್ಳಿ ಮತ್ತು ಪ್ಲಾಟಿನಂ ಬೆಲೆ ಏರಿಕೆಯಾಗಿದೆ. ಚಿನ್ನದ ಗಟ್ಟಿ ದರ 2020ರಲ್ಲಿ ಅಧಿಕವಾಗಲಿದೆ. ಕಳೆದ ವರ್ಷ ಅಧಿಕ ವಾರ್ಷಿಕ ಲಾಭ ಗಳಿಸಿದ ಚಿನ್ನ ಯುದ್ಧದ ಭೀತಿಯಿಂದ ವಹಿವಾಟಿನಲ್ಲಿ ಏರುಪೇರು ಸಂಭವಿಸುವ ಅಪಾಯ ಎದುರಾಗಿದೆ.
ಚಿನ್ನದ ಗಟ್ಟಿ ಔನ್ಸ್ಗೆ ಶೇ. 2.3 ಏರಿಕೆಯಾಗಿದೆ. 2013ರ ಏಪ್ರಿಲ್ನಲ್ಲಿ ಔನ್ಸ್ ಚಿನ್ನ 1,588.13 ಡಾಲರ್‌ಗೆ ತಲುಪಿತ್ತು. ನಂತರ ಈಗ ತಲುಪಿರುವ ದರ ಅಧಿಕವಾಗಿದೆ. ಸಿಂಗಾಪುರದಲ್ಲಿ ಬೆಳಗ್ಗೆ 8:50 ರ ವೇಳೆಗೆ ಚಿನಿವಾರ ಪೇಟೆಯಲ್ಲಿ ಔನ್ಸ್ ಚಿನ್ನಕ್ಕೆ 1,569.90 ಡಾಲರ್ನಿಂದ ವಹಿವಾಟು ಆರಂಭವಾಯಿತು. ಶೇ. 2.5 ಹೆಚ್ಚಳಗೊಂಡು ವಹಿವಾಟು 1,590.90 ಡಾಲರ್‌ಗೆ ತಲುಪಿದೆ. ಪಲ್ಲಾಡಿಯಮ್ ಕೂಡ ಶೇ. 1.2ರಷ್ಟು ಏರಿಕೆ ಕಂಡಿದೆ. ಔನ್ಸ್ ಪಲ್ಲಾಡಿಯಂ 2,013.90 ಡಾಲರ್ ಇದೆ. ಇದರ ಜೊತೆಗೆ ಬೆಳ್ಳಿ ಬೆಳ್ಳಿ ಮತ್ತು ಪ್ಲಾಟಿನಂ ಕೂಡ ಏರಿಕೆಯಾಗಿದೆ.
ಚಿನ್ನದ ಗಣಿಗಾರರು ಹೆಚ್ಚಿನ ವಹಿವಾಟು ನಡೆಸಿದರು. ಆಸ್ಟ್ರೇಲಿಯಾದ ಅತಿದೊಡ್ಡ ಚಿನ್ನ ಉತ್ಪಾದಕ ಸಂಸ್ಥೆ ನ್ಯೂಕ್ರೆಸ್ಟ್ ಮೈನಿಂಗ್ ಲಿಮಿಟೆಡ್ ಸಿಡ್ನಿಯ ವಹಿವಾಟಿನಲ್ಲಿ ಶೇ. 3.1 ಏರಿಕೆಯಾಗಿದೆ. ನಾರ್ದರ್ನ್ ಸ್ಟಾರ್ ರಿಸೋರ್ಸಸ್ ಲಿಮಿಟೆಡ್ ವಹಿವಾಟಿನಲ್ಲಿ ಶೇ. 1.7 ಹಾಗೂ ಎವಲ್ಯೂಷನ್ ಮೈನಿಂಗ್ ಲಿಮಿಟೆಡ್ ವಹಿವಾಟಿನಲ್ಲಿ ಶೇ. 4.1 ಹೆಚ್ಚಾಗಿದೆ. (ಏಜೆನ್ಸೀಸ್)