More

    ಜನಾಂಗೀಯ ದ್ವೇಷದ ನಡುವೆ ಭಗ್ನವಾಯ್ತು ಗಾಂಧಿ ಪ್ರತಿಮೆ

    ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಹಲ್ಲೆ ಮತ್ತು ವರ್ಣಬೇಧ ನೀತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ಇಳಿದಿರುವ ನಡುವೆಯೇ ಕೆಲವು ಪ್ರತಿಭಟನಾಕಾರರು ಇಲ್ಲಿನ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ.

    ಅಮೆರಿಕ ರಾಜಧಾನಿಯಾಗಿರುವ ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಗಾಂಧಿ ಪ್ರತಿಮೆ ಇದೆ. ಅಲ್ಲಿ ಕೂಡ ಪ್ರತಿಭಟನಾಕಾರರು ಹಿಂಸಾತ್ಮಕ ಕೃತ್ಯಕ್ಕೆ ಇಳಿದಿದ್ದು, ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.

    ಇದನ್ನೂ ಓದಿ: ಯುಎಸ್​​ನಲ್ಲಿ ಜನಾಂಗೀಯ ದ್ವೇಷದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರಿಗೆ ಅಧ್ಯಕ್ಷ ಟ್ರಂಪ್​ ಪುತ್ರಿಯ ಬೆಂಬಲ

    ಕಪ್ಪುವರ್ಣೀಯನಾದ ಜಾರ್ಜ್​ ಫ್ಲಾಯ್ಡ್​​ನಲ್ಲಿ ಅಮೆರಿಕದ ಮೂವರು ಪೊಲೀಸರು ಉಸಿರುಗಟ್ಟಿಸಿ ಕೊಂದಿದ್ದರು. ಮೇ 25ರಂದು ಈ ಘಟನೆ ನಡೆದಿತ್ತು. ಕಳ್ಳತನದ ಆರೋಪ ಹೊರಿಸಿ ಜಾರ್ಜ್​ ಫ್ಲಾಯ್ಡ್​ಗೆ ಪೊಲೀಸರು ಹಿಂಸೆ ನೀಡಿದ್ದರು. ಆತನ ಕತ್ತಿನ ಮೇಲೆ ಮೊಣಕಾಲೂರಿದ್ದರು. ಇದರಿಂದ ಆತನಿಗೆ ಉಸಿರಾಡಲಾಗದೆ ಮೃತಪಟ್ಟಿದ್ದ.

    ಹಿಂದೆ ಕೂಡ ಇದೇ ರೀತಿ ಕಪ್ಪು ವರ್ಣೀಯರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ಇದೀಗ ಅಮೆರಿಕದಲ್ಲಿ ಕಪ್ಪುವರ್ಣೀಯರ ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿದೆ.

    ಕೊಲಂಬಿಯಾದ ಫೆಡರಲ್ ಲ್ಯಾಂಡ್​ನಲ್ಲಿ 1998ರಲ್ಲಿ ಗಾಂಧಿ ಗೌರವಾರ್ಥ ಈ ಪ್ರತಿಮೆಯನ್ನು ಅಮೆರಿಕ ಸರ್ಕಾರ ಲೋಕಾರ್ಪಣೆ ಮಾಡಿತ್ತು. ಈ ಪ್ರತಿಮೆಯನ್ನು ಪ್ರತಿಭಟನಾಕಾರರು ಭಗ್ನಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯುಎಸ್ ಸ್ಟೇಟ್ ಪಾರ್ಕ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರತಿಮೆಯನ್ನು ಸದ್ಯ ಮುಚ್ಚಿಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts