More

    ಕರೊನಾ ಸೋಂಕು ನಿಯಂತ್ರಣಕ್ಕಾಗಿ ಭಾರತಕ್ಕೆ 2.9 ಮಿಲಿಯನ್​ ಅಮೆರಿಕನ್​ ಡಾಲರ್​ ನೆರವು ಘೋಷಿಸಿದ ಅಮೆರಿಕಾ

    ವಾಷಿಂಗ್​ಟನ್​: ಅಮೆರಿಕಾ ಕರೊನಾ ಸೋಂಕು ನಿಯಂತ್ರಣಕ್ಕಾಗಿ ರಾಷ್ಟ್ರಕ್ಕೆ 2.9 ಮಿಲಿಯನ್​ ಅಮೆರಿಕನ್​ ಡಾಲರ್​ ನೆರವು ಘೋಷಿಸಿದೆ.

    ಆರೋಗ್ಯ ನೆರವು ಒಡಂಬಡಿಕೆ ಭಾಗವಾಗಿ ಭಾರತಕ್ಕೆ ಪ್ಯಾಕೇಜ್​ ನೀಡಲಾಗುತ್ತಿದೆ. ಕರೊನಾ ಸೋಂಕು ತಡೆಯುವ ಹೋರಾಟಕ್ಕಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಅಮೆರಿಕ ಏಜೆನ್ಸಿ ಮೂಲಕ 2. 9 ಬಿಲಿಯನ್ ಅಮೆರಿಕನ್​ ಡಾಲರ್ ಮೊತ್ತದ ನೆರವನ್ನು ನೀಡುವುದಾಗಿ ಕಳೆದ ಮಾ.28ರಂದು ಅಮೆರಿಕಾ ತಿಳಿಸಿತ್ತು. ಒಪ್ಪಂದದಂತೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಎಂದು ಅಮೆರಿಕಾ ಹೇಳಿದೆ.

    ಇಡೀ ವಿಶ್ವಕ್ಕೆ ಕರೊನಾ ಸೋಂಕು ಹರಡಿದೆ. ಭಾರತ ಸೋಂಕು ನಿಯಂತ್ರಣಕ್ಕೆ ಅನುಸರಿಸಿರುವ ಕ್ರಮ ಅನುಕರಣೀಯವಾದುದು. ಕರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಅಮೆರಿಕಾ, ಭಾರತದೊಂದಿಗೆ ಕೈಜೋಡಿಸಲಿದೆ.

    ಅಮೆರಿಕಾದಲ್ಲೂ ಕರೊನಾ ವೈರಸ್​ ಹಾವಳಿ ತೀವ್ರವಾಗಿದ್ದರೂ ಜಾಗತಿಕ ಒಡಂಬಡಿಕೆ ಹಿನ್ನೆಲೆಯಲ್ಲಿ ಭಾರತಕ್ಕೆ ಮಾನವೀಯ ನೆರವು ನೀಡಲಾಗುತ್ತಿದೆ. (ಏಜೆನ್ಸೀಸ್​)

    ಸಂಬಳ ಕಡಿತ ಮಾಡಿದ್ದಾರೆ, ಶಾಲಾ ಶುಲ್ಕ ಪಾವತಿಗೆ ವಿನಾಯ್ತಿ ನೀಡಿ ಶಿಕ್ಷಣ ಸಂಸ್ಥೆಗಳಿಗೆ ಪಾಲಕರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts