More

    ಕೆಂಪು ಸಮುದ್ರದಲ್ಲಿ ಹೌತಿ ಡ್ರೋನ್‌, ಕ್ಷಿಪಣಿಗಳನ್ನು ಹೊಡೆದುರುಳಿಸಿದ ಅಮೆರಿಕಾ

    ವಾಷಿಂಗ್ಟನ್​: ಅಮೆರಿಕವು ಹೌತಿಗೆ ಸೇರಿದ 12 ಡ್ರೋನ್‌ಗಳು ಮತ್ತು ಐದು ಕ್ಷಿಪಣಿಗಳನ್ನು ಕೆಂಪು ಸಮುದ್ರದಲ್ಲಿ ಹೊಡೆದುರುಳಿಸಿತು. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಡ್ರೋನ್‌ಗಳನ್ನು ಉಡಾಯಿಸಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ.

    ಇದನ್ನೂ ಓದಿ: ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?
    ಕೆಂಪು ಸಮುದ್ರ ಪ್ರದೇಶದಲ್ಲಿ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅಮೆರಿಕಾ ಸೆಂಟ್ರಲ್ ಕಮಾಂಡ್ ಹೇಳಿದೆ. ಸೆಂಟ್ರಲ್ ಕಮಾಂಡ್ ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

    ದಕ್ಷಿಣ ಕೆಂಪು ಸಮುದ್ರದಲ್ಲಿ ಹೌತಿ ದಾಳಿಕೋರರು ಮಂಗಳವಾರ ಡಿ.26ರಂದು ಬೆಳಗ್ಗೆ 6.30ಕ್ಕೆ ಅಮೆರಿಕಾ ಪಡೆಗಳ ಮೇಲೆ (ಯೆಮೆನ್ ಸ್ಥಳೀಯ ಕಾಲಮಾನದ ಪ್ರಕಾರ) ಗುಂಡಿನ ಚಕಮಕಿ ನಡೆಸಿದ್ದರು. ಇದು ಹತ್ತು ಗಂಟೆಯವರೆಗೂ ಮುಂದುವರಿದಿತ್ತು.

    ದಕ್ಷಿಣ ಕೆಂಪು ಸಮುದ್ರದಲ್ಲಿ ಹಡಗು ಸಾಗಣೆಗೆ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಎಲ್ ಮಂಡೆಬ್ ಜಲಸಂಧಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇರಾನ್ ಬೆಂಬಲಿತ ಹೌತಿಗಳು ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅಮೆರಿಕಾ ನೌಕಾಪಡೆ ತಿಳಿಸಿದೆ.

    ಜನವರಿ 22 ರಂದು ರಾಮಮಂದಿರ ಉದ್ಘಾಟನೆ: ಮಮತಾ ಬ್ಯಾನರ್ಜಿ ಮತ್ತು ಪಕ್ಷದ ನಾಯಕರು ಬರುವುದು ಡೌಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts