More

    ಪ್ರವಚನ ಆಲಿಸಿದರೆ ಜೀವನ ಸಾರ್ಥಕ

    ಕಾಳಗಿ: ಶರಣ, ಸತ್ಪುರುಷರ ವಾಣಿ ಕೇಳಿದರೆ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಸೂಗುರ ರುದ್ರಮುನೀಶ್ವರ ಹಿರೇಮಠದ ಶ್ರೀ ಡಾ.ಚನ್ನರುದ್ರಮುನಿ ಶಿವಾಚಾರ್ಯರು ನುಡಿದರು.

    ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ೯ ದಿನಗಳ ಕಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅಂಬಿಗರ ಚೌಡಯ್ಯ ಪುರಾಣ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶರಣರು ಸಾವಿರಾರು ವರ್ಷ ಬಾಳಿ ಬೆಳಗಿದವರಾಗಿದ್ದು, ಅಂತವರು ಇನ್ನೂ ಗದ್ದುಗೆಯಲ್ಲಿ ವಾಸವಾಗಿದ್ದಾರೆ. ಆ ಕಾರಣದಿಂದಲೇ ಅವರನ್ನು ನೆನೆದು ಅನೇಕ ಭಕ್ತರು ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ ಎಂದು ಹೇಳಿದರು.

    ಪುರಾಣ, ಪ್ರವಚನಗಳಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ. ಅವರಲ್ಲಿ ಸಂಸ್ಕೃತಿ ಎದ್ದು ಕಾಣುತ್ತದೆ. ಮಹಾತ್ಮರ ಸಾಧು, ಸಂತರ, ಶರಣರ, ಶಿವಯೋಗಿಗಳ ಚರಿತ್ರೆಯಲ್ಲಿ ನಮ್ಮ ಧರ್ಮದ ಸಾಂಸ್ಕೃತಿಕ ಸಿರಿ ಅಡಗಿದೆ. ಎಲ್ಲವನ್ನು ಆಸ್ವಾದಿಸಬೇಕು. ಶರಣರ ತತ್ವ, ಸಿದ್ಧಾಂತ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾನವ ಧರ್ಮ ಎತ್ತಿ ಹಿಡಿಯಬೇಕು ಎಂದು ಹೇಳಿದರು.

    ಕೋಲಿ ಸಮಾಜದ ಯುವ ಮುಖಂಡ ರಾಜಕುಮಾರ ರಾಜಾಪುರ, ಸಂತೋಷ ಪತಂಗೆ, ಶಿವಕುಮಾರ ಶಾಸ್ತ್ರೀ, ಹಿರಿಯ ಮುಖಂಡ ಶಿವಶರಣಪ್ಪ ಗುತ್ತೇದಾರ್ ಮಾತನಾಡಿದರು.

    ಕಾಳಗಿ ಹಿರೇಮಠದ ಶ್ರೀ ನೀಲಕಂಠ ಮರಿದೇವರು, ಗುರುನಂಜಯ್ಯ ಸ್ವಾಮಿ ಹಿರೇಮಠ, ರತ್ನಮ್ಮ ಗುತ್ತೇದಾರ್, ನೀಲಕಂಠರಾವ ಮಡಿವಾಳ, ಸಿದ್ದಣ್ಣ ಜಮಾದಾರ, ಸಂತೋಷ ನರನಾಳ, ರವಿದಾಸ ಪತಂಗೆ, ಹನುಮಂತಪ್ಪ ಕಾಂತಿ, ಗುಂಡಪ್ಪ ಕರೆಮನೊರ, ಶಿವರಾಯ ಕೋಯಿ, ಜಗನ್ನಾಥ ಚಂದನಕೇರಿ, ದೇವಿಂದ್ರಪ್ಪ ಚಿಮ್ಮನಚೋಡ, ಶಿವಶರಣಪ್ಪ ಕಮಲಾಪುರ, ವಿಶ್ವನಾಥ ವನಮಾಲಿ, ಪರಮೇಶ್ವರ ಮಡಿವಾಳ, ರಾಘವೇಂದ್ರ ಗುತ್ತೇದಾರ್, ಶಾಮರಾವ ಕಡಬೂರ, ಬಾಬು ನಾಟೀಕಾರ, ಕಾಳಪ್ಪ ತಳವಾರ, ಪ್ರಕಾಶ ಶೆಗಾಂವಕಾರ, ಭೀಮರಾಯ ಮಲಘಾಣ, ನಾಗಣ್ಣ ಕಡಬೂರ, ಕಾಳಪ್ಪ ರಾಜಾಪೂರ, ಶಾಂತಾಬಾಯಿ ಕೋಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts