More

    ಅಂಬೇವಾಡಿ ರೈಲು ನಿಲ್ದಾಣದ ಹೆಸರು ಬದಲು

    ಕಾರವಾರ: ದಾಂಡೇಲಿ ನಗರದಲ್ಲೇ ಇರುವ ಅಂಬೇವಾಡಿ ನಿಲ್ದಾಣಕ್ಕೆ “ದಾಂಡೇಲಿ” ಎಂದು ಹೆಸರು ಬದಲಿಸಲಾಗಿದೆ.
    ಈ ಸಂಬಂಧ ನೈರುತ್ಯ ರೈಲ್ವೆಯ ಪ್ರಿನ್ಸಿಪಲ್ ಚೀಫ್ ಕಮರ್ಷಿಯಲ್ ಮ್ಯಾನೇಜರ್ ಅರವಿಂದ ಹೆರ್ಲೆ ಮಂಗಳವಾರ ಆದೇಶ ಹೊರಡಿಸಿದ್ದಾರೆ.
    ದಾಂಡೇಲಿ ಉದ್ಯಮ, ಪ್ರವಾಸೋದ್ಯಮ ನಗರವಾಗಿ, ವನ್ಯಜೀವಿಗಳ ತಾಣವಾಗಿ ಪ್ರಸಿದ್ಧವಾಗಿದೆ. ದೇಶದ ವಿವಿಧ ಪ್ರದೇಶಗಳ ಜನರು ದಾಂಡೇಲಿಗೆ ಭೇಟಿ ನೀಡುತ್ತಿದ್ದರು. ಆದರೆ, ದಾಂಡೇಲಿಯಲ್ಲೇ ಇರುವ ನಿಲ್ದಾಣದ ಹೆಸರು ಭಿನ್ನವಾಗಿತ್ತು. ಅದನ್ನು ಬದಲಿಸುವಂತೆ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೆ.

    ಕರ್ನಾಟಕ ಸರ್ಕಾರ ನವೆಂಬರ್ ತಿಂಗಳಲ್ಲಿ ನಿರ್ಣಯ ಕೈಗೊಂಡು ರೈಲ್ವೆ ಇಲಾಖೆಗೆ ರವಾನಿಸಿತ್ತು. ಅಂಬೇವಾಡಿ ನಿಲ್ದಾಣದ ಹೆಸರನ್ನು ದಾಂಡೇಲಿ ಎಂದು ಮರು ನಾಮಕರಣ ಮಾಡಲಾಗಿದೆ. ದಾಂಡೇಲಿ ಜನರ ಬಹು ದಿನಗಳ ಬೇಡಿಕೆ ಸಾಕಾರಗೊಂಡಿದೆ. ಅತಿ ಶೀಘ್ರ ಪ್ರಯಾಣಿಕರ ರೈಲು ಸಂಚರಿಸುವ ಆಶಾ ಭಾವನೆ ಹೊಂದಿದ್ದೇನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

    ರೈಲು ಮಾತ್ರ ಬರ್ತಿಲ್ಲ

    ಅಂಬೇವಾಡಿ ರೈಲು ನಿಲ್ದಾಣಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ದಾಂಡೇಲಿಯ ಮರದ ದಿಮ್ಮಿಗಳನ್ನು ಇಂಗ್ಲೆಂಡ್‌ ಗೆ ಕೊಂಡೊಯ್ಯುವ ಸಲುವಾಗಿ ಬ್ರಿಟಿಷರು 1919 ರ ಹೊತ್ತಿಗೆ ಇಲ್ಲಿ ಮೀಟರ್ ಗೇಜ್ ರೈಲ್ವೆ ಮಾರ್ಗ ನಿರ್ಮಾಣ ಮಾಡಿದ್ದರು. ಮಾರ್ಗವು ಗೋವಾದ ವಾಸ್ಕೋ ಬಂದರನ್ನು ಸಂಪರ್ಕಿಸುತ್ತಿತ್ತು. ನಂತರ ಹಲ ವರ್ಷ ಮಾರ್ಗವು ಬಂದಾಗಿತ್ತು. ಮಾರ್ಗವನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸಿದ ನಂತರ 2019 ರಲ್ಲಿ ಅಳ್ನಾವರ-ಅಂಬೇವಾಡಿ ಪ್ರಯಾಣಿಕರ ರೈಲು ಪ್ರಾರಂಭಿಸಲಾಗಿತ್ತು.‌ ಕೋವಿಡ್ ನಿಂದ ಬಂದಾದ ಪ್ರಯಾಣಿಕರ ರೈಲು ಮತ್ತೆ ಪ್ರಾರಂಭವಾಗಿಯೇ ಇಲ್ಲ. ಈಗ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ. ಗೂಡ್ಸ್ ರೈಲು ಬರುತ್ತದಾದರೂ ಪ್ರಯಾಣಿಕರ ರೈಲು ಬರ್ತಿಲ್ಲ.

    ಇದನ್ನೂ ಓದಿ: ಸಮರ್ಪಕವಾಗಿ ಜಾರಿಯಾಗಲಿ ಮಾನವ ಹಕ್ಕು ಕಾನೂನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts