More

    ಅಂಬೇಡ್ಕರ್ ಹೋರಾಟ ಸಾಧನೆಗಳನ್ನು ಮಕ್ಕಳಿಗೆ ತಿಳಿಸಿ: ನಿವೃತ್ತ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಸಲಹೆ

    ಮಂಡ್ಯ: ಬಾಲ್ಯದಿಂದಲೂ ಹಲವು ಬಗೆಯ ತೊಂದರೆಗಳನ್ನು ಎದುರಿಸಿದ್ದ ಡಾ.ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸಿದರು. ಉತ್ತಮ ಶಿಕ್ಷಣ ಪಡೆದ ಬಾಬಾ ಸಾಹೇಬರು ವಿಶ್ವದ ವಿವಿಧ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ನಮ್ಮ ಭಾರತ ದೇಶಕ್ಕೆ ಸರಿ ಹೊಂದುವ ಎಲ್ಲ ಧರ್ಮ, ವರ್ಗದವರಿಗೂ ಸಮಾನತೆ ಸಾರುವ ಸಂವಿಧಾನವನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಹೇಳಿದರು.
    ಇಲ್ಲಿನ ಗಾಂಧಿನಗರದ ಅಂಬೇಡ್ಕರ್ ಭವನದಲ್ಲಿ ಡಾ.ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 133ನೇ ಜಯಂತಿಯಲ್ಲಿ ಮಾತನಾಡಿದರು. ಸಂವಿಧಾನದ ಮೂಲಕ ಮನುಷ್ಯರು ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸುವಂತಹ ಕಾನೂನುಗಳನ್ನು ನೀಡಿದ್ದಾರೆ. ಇದರ ಅಡಿಯಲ್ಲಿಯೇ ಜೀವನ ಕ್ರಮ ಸಾಗುತ್ತಿದೆ. ದೇಶದಲ್ಲಿ ಸಮ ಸಮಾಜ ನಿರ್ಮಾಣದ ಸಂಸ್ಕೃತಿ ಶಿಲ್ಪಿ ಎಂದರೂ ತಪ್ಪಾಗಲಾರದು, ನಮ್ಮ ದೇಶದಲ್ಲಿ ಸಮಾನತೆಯನ್ನು ತಂದ ಸಂವಿಧಾನದ ಪಿತಾಮಹರಾಗಿದ್ದಾರೆ ಎಂದು ಬಣ್ಣಿಸಿದರು.
    ಕಿರುತೆರೆ ನಿರ್ದೇಶಕ ಡಾ.ಜನಾರ್ದನ್ ಕೊಂಡ್ಲಿ, ಎಸ್.ಗುರುಮೂರ್ತಿ, ಸಂಘದ ಅಧ್ಯಕ್ಷ ಲೋಕೇಶ್ವರ್, ಪ್ರಧಾನ ಕಾರ್ಯದರ್ಶಿ ಎಂ.ಎಲ್.ತುಳಸೀಧರ್, ಖಜಾಂಚಿ ತಮ್ಮಣ್ಣರಾಜು, ನಿರ್ದೇಶಕರಾದ ಬಿ.ಎಂ.ಜಗದೀಶ್, ಉಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts