More

    ಅಂಬೇಡ್ಕರ್ ವಾಣಿಜ್ಯೋದ್ಯಮ ಮಹಾಸಭಾ ಆರಂಭ

    ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಬಲೀಕರಣಕ್ಕಾಗಿ ಅಂಬೇಡ್ಕರ್ ವಾಣಿಜ್ಯೋದ್ಯಮ ಮಹಾಸಭಾ (ಡಿಎಸಿಸಿ) ಉದಯವಾಗಿದೆ.

    ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯ ದರ್ಶಿ ಕೆ. ರತ್ನಪ್ರಭಾ ಚಾಲನೆ ನೀಡಿ, ಎಸ್ಸಿ – ಎಸ್ಟಿ ಸಮುದಾಯಗಳ ಶಿಕ್ಷಣ, ಉದ್ಯಮಶೀಲತೆ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಮಹಾಸಭಾವನ್ನು ಆರಂಭಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವ ಹಾಗೂ ಒಡಂಬಡಿಕೆಯೊಂದಿಗೆ ಹಲವು ಯೋಜನೆಗಳನ್ನು ಜಾರಿ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

    ಡಿಎಸಿಸಿ ಮಹಾ ನಿರ್ದೇಶಕ ಇಂದರ್ ಇಕ್ಬಾಲ್ ಸಿಂಗ್ ಮಾತನಾಡಿ, ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಸಮುದಾಯದ ಶಾಸಕರು ಹಾಗೂ ಸಂಸದರು ಸೇರಿ ಸರ್ಕಾರದ ಭಾಗವಾಗಿರುವ ಎಲ್ಲರನ್ನೂ ಸಂಸ್ಥೆ ಒಳಗೊಂಡಿದೆ. 10 ಕ್ಲಸ್ಟರ್​ಗಳನ್ನು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಶೇ.70 ಅನುದಾನದಲ್ಲಿ ಉದ್ಯಮಶೀಲತೆ ಹಾಗೂ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಪಡಿಸಲಾಗುವುದು. 100 ಯೂನಿಟ್​ಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ಡಿಎಸಿಸಿ ಮೂಲಕ ಸಿದ್ಧಪಡಿಸುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಎಸ್ಸಿ ಮತ್ತು ಎಸ್ಟಿ ಉದ್ದಿಮೆಗಳ ಆರಂಭಕ್ಕೆ ಈಕ್ವಿಟಿ ಫಂಡ್ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ.

    | ಇಂದರ್ ಇಕ್ಬಾಲ್ ಸಿಂಗ್, ಡಿಎಸಿಸಿ ಮಹಾ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts