More

    ಹಿಂದು ವಿರಾಟ್ ಮಹಾಸಭೆ ಗಣಪತಿಗೆ ಅದ್ಧೂರಿ ಬೀಳ್ಕೋಡುಗೆ

    ರಾಣೆಬೆನ್ನೂರ: ನಗರದ ಅಶೋಕ ಸರ್ಕಲ್ ಬಳಿ ಹಿಂದು ವಿರಾಟ್ ಮಹಾಸಭಾ ವತಿಯಿಂದ 2ನೇ ಬಾರಿಗೆ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನೆ ನಿಮಿತ್ತ ಸೋಮವಾರ ನಗರದಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ಜರುಗಿತು.
    ಅಶೋಕ ವೃತ್ತದಿಂದ ಹೊರಟ ಶೋಭಾಯಾತ್ರೆಯು ಪೋಸ್ಟ್ ಸರ್ಕಲ್, ಸಂಗಮ್ ಸರ್ಕಲ್, ರಂಗನಾಥ ನಗರ, ಸುಣಗಾರ ಓಣಿ, ಕೋಟ್ರೇಶ್ವರ ನಗರ, ಕುಂಬಾರ ಓಣಿ, ದೊಡ್ಡಪೇಟೆ, ಚಕ್ಕಿ ಮಿಕ್ಕಿ ಸರ್ಕಲ್, ಎಂ.ಜಿ. ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್, ಬಸ್ ನಿಲ್ದಾಣ, ವಿನಾಯಕ ನಗರ, ರಾಜರಾಜೇಶ್ವರಿ ನಗರ, ಹಳೆ ಪಿ.ಬಿ.ರಸ್ತೆಯ ಮೂಲಕ ಎನ್.ವಿ. ಹೋಟೆಲ್‌ವೆರಗೆ ಸಾಗಿಬಂದಿತು. ಅಲ್ಲಿಂದ ಮೂರ್ತಿಯನ್ನು ಹರಿಹರಕ್ಕೆ ತೆಗೆದುಕೊಂಡು ಹೋಗಿ ತುಂಗಾಭದ್ರ ನದಿಯಲ್ಲಿ ವಿಸರ್ಜಿಸಲಾಯಿತು.
    ಶೋಭಾಯಾತ್ರೆ ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ವಿವಿಧ ಸರ್ಕಲ್‌ಗಳಲ್ಲಿ ದಾನಿಗಳು ಮತ್ತು ವಿವಿಧ ಸಮಾಜಗಳ ವತಿಯಿಂದ ಸಾರ್ವಜನಿಕರಿಗೆ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಬಗ್ಗೆಯ ಗೊಂಬೆಗಳು, ಸಮಾಳ, ಹಲಗೆ ಹಾಗೂ ಡಿಜೆ ಸಂಗೀತ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು. ಯುವಕ, ಯವತಿಯರು ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಜನಮನ ಸೂರೆಗೊಂಡರು.
    ವಿರಾಟ್ ಹಿಂದು ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಪಾಂಡುರಂಗ ಗಂಗಾವತಿ, ಪರಮೇಶ ಗೂಳಣ್ಣನವರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಎಪಿಎಂಸಿ ಮಾಜಿ ಸದಸ್ಯ ಬಸವರಾಜ ಹುಲ್ಲತ್ತಿ, ಮಲ್ಲಿಕಾರ್ಜುನ ಮಸಿಯಪ್ಪನವರ, ಮಂಜುನಾಥ ಕಾಟಿ, ಪ್ರಕಾಶ ಹೊರಕೇರಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts