More

    ಏಜೆಂಟರ್ ಹಾವಳಿ ತಪ್ಪಿಸಲು ಆಗ್ರಹ

    ವಿಜಯಪುರ: ನಗರದ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗುತ್ತಿದೆ. ಕೂಡಲೇ ಅದನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
    ಪರಿಷತ್ ಮುಖಂಡ ಅಕ್ಷಯಕುಮಾರ ಮಾತನಾಡಿ, ಅಂಬೇಡ್ಕರ್ ನಿಗಮಕ್ಕೆ ಎರಡ್ಮೂರು ವರ್ಷಗಳಿಂದ ಸತತವಾಗಿ ಅರ್ಜಿ ಸಲ್ಲಿಸಿದರೂ ಬಡವರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಫಲಾನುಭವಿಗಳ ಪಟ್ಟಿಯಲ್ಲಿ ಕ್ಷೇತ್ರವಾರು ಶಾಸಕರು ತಮಗೆ ಬೇಕಾದ ಆಪ್ತರನ್ನು ಮಾತ್ರ ಆಯ್ಕೆ ಮಾಡುತ್ತಿರುವ ಕಾರಣ ನೈಜ ಕಡುಬಡವರಿಗೆ ಆರ್ಥಿಕ ಸಹಾಯ ದೊರಕುತ್ತಿಲ್ಲ ಎಂದು ಆರೋಪಿಸಿದರು.
    ನಿಗಮ ಮೂಲಕ ಏನಾದರೂ ಕೆಲಸ ಮಾಡಿಕೊಳ್ಳಬೇಕಾದರೆ ಏಜೆಂಟರ್ ಮೂಲಕವೇ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಸಾಲದ ಸಹಾಯಧನ ಪಡೆಯಲು ಕನಿಷ್ಠ ಹತ್ತರಿಂದ ಐವತ್ತು ಸಾವಿರ ರೂ.ವರೆಗೆ ಏಜೆಂಟರಿಗೆ ಲಂಚ ನೀಡುವ ಪರಿಸ್ಥಿತಿ ಇದೆ. ನಿಗಮದ ಭ್ರಷ್ಟ ಅಧಿಕಾರಿಗಳು ಒಬ್ಬರಿಗೆ ಎರಡು-ಮೂರು ಸಲ ಯೋಜನೆ ಲಾಭ ನೀಡುವ ಮೂಲಕ ಕಡುಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಕ್ಷಯಕುಮಾರ ದೂರಿದರು.
    ನಿಯಮ ಉಲ್ಲಂಘಿಸಿ ಆಯ್ಕೆ ಆದ ಫಲಾನುಭವಿಗಳ ಪಟ್ಟಿ ಹಿಂದೆ ಅವ್ಯವಹಾರ ನಡೆದಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಸತ್ಯಾಂಶ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನಾಕಾರರಾದ ದೇವು ದೊಡ್ಡಮನಿ, ರಾಕೇಶ ಕುಮಟಗಿ, ರವಿ ಪೂಜಾರಿ ಸೇರಿದಂತೆ ಪರಿಷತ್‌ನ ಹಲವು ಕಾರ್ಯಕರ್ತರು ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

    ಏಜೆಂಟರ್ ಹಾವಳಿ ತಪ್ಪಿಸಲು ಆಗ್ರಹ
    ಏಜೆಂಟರ್ ಹಾವಳಿ ತಪ್ಪಿಸಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts