More

    ಅಂಬೇಡ್ಕರ್ ಕಾಲನಿಯಲ್ಲಿ 8 ಅನಧಿಕೃತ ಮನೆಗಳ ತೆರವು

    ಶಿವಮೊಗ್ಗ: ಮಲ್ಲಿಗೇನಹಳ್ಳಿ ಸಮೀಪದ ಅಂಬೇಡ್ಕರ್ ಕಾಲನಿಯಲ್ಲಿ ಕರ್ನಾಟಕ ನೀರಾವರಿ ನಿಗಮದ ಜಾಗ ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಎಂಟು ಮನೆಗಳನ್ನು ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ತೆರವುಗೊಳಿಸಿದರು. ತೆರೆವು ಕಾರ್ಯಾಚರಣೆ ವಿರೋಧಿಸಿ ಕೆಲವರು ಸೀಮೆಎಣ್ಣೆ ಸುರಿದುಕೊಂಡರಲ್ಲದೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರು.
    ಹೈಕೋರ್ಟ್ ಆದೇಶದ ಮೇರೆಗೆ ನಿಗಮದ ಅಧಿಕಾರಿಗಳು ನೂರಾರು ಪೊಲೀಸರ ಭದ್ರತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 129 ಮನೆಗಳ ತೆರವಿಗೆ ಮುಂದಾದ್ದರು. ಆದರೆ ಸ್ಥಳೀಯರು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೆಸಿಬಿಗಳಿಗೆ ಅಡ್ಡ ಮಲಗಿ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸ್ಥಳೀಯರೊಂದಿಗೆ ಅಧಿಕಾರಿಗಳು ಮತ್ತು ಪೊಲೀಸರು ಮಾತಿನ ಚಕಮಕಿಯನ್ನೂ ನಡೆಸಿದರು. ಅಂತಿಮವಾಗಿ ವಾಸವಿಲ್ಲದ ಎಂಟು ಮನೆಗಳನ್ನು ತೆರವುಗೊಳಿಸಿದರು.
    ಸ್ಥಳೀಯರಿಗೆ ಮೂರು ನೋಟಿಸ್ ನೀಡಿದ್ದು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ. ದಯವಿಟ್ಟು ಸಹಕಾರ ನೀಡುವಂತೆ ಅಧಿಕಾರಿಗಳು ಪ್ರಾರಂಭದಲ್ಲಿ ಮನವೊಲಿಸುವ ಪ್ರಯತ್ನ ಮಾಡಿದರು. ಪೊಲೀಸರು ಕೂಡ ಸ್ಥಳೀಯರೊಂದಿಗೆ ಚರ್ಚಿಸಿ ವಾಸ್ತವಾಂಶ ಮನವರಿಕೆ ಮಾಡಿಕೊಡಲು ಮುಂದಾದರು. ಆದರೆ ಅದ್ಯಾವುದಕ್ಕೂ ಸ್ಥಳೀಯರು ಸೊಪ್ಪು ಹಾಕಲಿಲ್ಲ. ಹಾಗಾಗಿ ಅಧಿಕಾರಿಗಳ ಅನಿವಾರ್ಯವಾಗಿ ತೆರವು ಕಾರ್ಯಾಚರಣೆ ನಡೆಸಿದರು.
    ಆರು ತಿಂಗಳು ಕಾಲಾವಕಾಶಕ್ಕೆ ಮನವಿ:
    ಸರ್ಕಾರದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ಈಗಾಗಲೇ ವಸತಿ ಸಚಿವ ವಿ.ಸೋಮಣ್ಣ ಅವರನ್ನೂ ಭೇಟಿ ಮಾಡಿ ಬಂದಿದ್ದೇವೆ. ಮನೆಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಡುವುದಾಗಿ ಅವರೂ ಭರವಸೆ ನೀಡಿದ್ದಾರೆ. ಕಾನೂನಿನ ಪ್ರಕಾರವೇ ಪ್ರಾಥಮಿಕ ನೋಟಿಫಿಕೇಷನ್ ಮುಗಿದಿದ್ದು ಶೀಘ್ರವೇ ಅಂತಿಮ ಡಿನೋಟಿಫಿಕೇಷನ್ ಪ್ರಕ್ರಿಯೆ ನಡೆಯಲಿದೆ. ಹಾಗಾಗಿ 6 ತಿಂಗಳು ಕಾಲಾವಕಾಶ ನೀಡಬೇಕು. ಅಷ್ಟರೊಳಗೆ ಡಿನೋಟಿಫಿಕೇಷನ್ ಆಗದಿದ್ದರೆ ನಾವೇ ಮನೆಗಳನ್ನು ತೆರೆವು ಮಾಡುತ್ತೇವೆಂದು ಪ್ರತಿಭಟನಾಕಾರರು ಅಧಿಕಾರಿಗಳ ಮನವಿ ಮಾಡಿದರು. ಆದರೆ ಈಗಾಗಲೇ ಕಾಲಾವಕಾಶ ಮೀರಿದ್ದು ಕಾನೂನು ಪ್ರಕಾರ ತೆರವಿಗೆ ಅವಕಾಶ ನೀಡುವಂತೆ ಅಧಿಕಾರಿಗಳು ಹೇಳಿದರು.
    ಸೀಮೆಎಣ್ಣೆ ಸುರಿದುಕೊಂಡ್ರು…:
    ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು, ವಾಸವಿಲ್ಲದ ಮನೆಗಳನ್ನು ತೆರವುಗೊಳಿಸಲು ಮುಂದಾದರು. ಜೆಸಿಬಿಗಳ ಮುಂದೆ ನಿಂತು ಮಹಿಳೆಯರು ಮತ್ತು ಮಕ್ಕಳು ಅಡ್ಡಿಪಡಿಸಿದರು. ಈ ನಡುವೆ ಕೆಲವರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೀಮೆಎಣ್ಣೆ ಹಿಡಿದುಕೊಂಡು ಬಂದು ಮೈಮೇಲೆ ಸುರಿದು ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರು ಅದನ್ನು ತಡೆದು ಬಂಧಿಸಿ ಠಾಣೆಗೆ ಕರೆದೊಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts