More

    ವಿಜೃಂಭಣೆಯಿಂದ ನಡೆದ ಅಂಬಾಭವಾನಿ ಜಯಂತ್ಯುತ್ಸವ

    ತಾಳಿಕೋಟೆ : ಪಟ್ಟಣದ ರಜಪೂತ ಸಮಾಜ ಬಾಂಧವರ ಕುಲದೇವತೆ ಅಂಬಾಭವಾನಿ ದೇವಿಯ ಜಯಂತ್ಯುತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ರಜಪೂತ ಗಲ್ಲಿಯ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮವನ್ನು ಅರ್ಚಕ ಭೀಮಾಶಂಕರ ನಡೆಸಿಕೊಟ್ಟರು. ನಂತರ ಜರುಗಿದ ಪಲ್ಲಕಿ ಉತ್ಸವ ಹಾಗೂ ಸುಮಂಗಲೆಯರಿಂದ ಜರುಗಿದ ಕುಂಭಮೇಳ ಪಟ್ಟಣದ ಭಾವಸಾರ ಸಮಾಜದ ಮಂದಿರದವರೆಗೆ ಜರುಗಿತು. ಮರಳಿ ರಜಪೂತ ಗಲ್ಲಿಯ ದೇವಸ್ಥಾನಕ್ಕೆ ಮೆರಣಿಗೆ ತಲುಪಿತು. ಅನ್ನ ಪ್ರಸಾದ ಸೇವೆ ಜರುಗಿತು.

    ಉತ್ಸವದ ನೇತೃತ್ವವನ್ನು ಹರೀಶಸಿಂಗ್​ ಮೂಲಿಮನಿ, ಗೋವಿಂದಸಿಂಗ್​ ಮೂಲಿಮನಿ, ವಿಠ್ಠಲಸಿಂಗ್​ ಹಜೇರಿ (ಬೇಕಿನಾಳ), ರತನಸಿಂಗ್​ ಕೊಕಟನೂರ, ವಿಜಯಸಿಂಗ್​ ಹಜೇರಿ, ಸುರೇಶ ಹಜೇರಿ, ಪ್ರಕಾಶ ಹಜೇರಿ, ಗೋವಿಂದಸಿಂಗ್​ ಗೌಡಗೇರಿ, ಭರತಸಿಂಗ್​ ಹಜೇರಿ, ರುರಾಮಸಿಂಗ್​ ಹಜೇರಿ, ಉಮರಸಿಂಗ್​ ಹಜೇರಿ, ಗಂಗಾರಾಮ ಕೊಕಟನೂರ, ಅಲೋಕ ಗೌಡಗೇರಿ, ಸುನೀತ ವಿಜಾಪುರ, ರಾಹುಲ್​ ಮೂಲಿಮನಿ, ಕಿಶನ್​ಸಿಂಗ್​ ಹಜೇರಿ, ಸೋಹನ ಹಜೇರಿ, ರಮೇಶ ಗೌಡಗೇರಿ, ಶುಭಂ ವಿಜಾಪೂರ, ಅಮಿತಸಿಂಗ್​ ಮನಗೂಳಿ, ದಶರಥಸಿಂಗ್​ ಗೌಡಗೇರಿ, ಗೋವಿಂದಸಿಂಗ್​ ಹಜೇರಿ, ರಮೇಶ ನರಗುಂದ, ಬಾಬು ಹಜೇರಿ, ಪ್ರಹ್ಲಾದ ಹಜೇರಿ, ಜೈಸಿಂಗ್​ ಮೂಲಿಮನಿ ಇತರರಿದ್ದರು.

    ಹೋಮ& ಹವನ ಕಾರ್ಯಕ್ರಮ ಹಾಗೂ ದೇವಿಯ ಮಹಾಪ್ರಸಾದ ವ್ಯವಸ್ಥೆಯನ್ನು ರುರಾಮಸಿಂಗ್​ ಹಜೇರಿ ಕೈಗೊಂಡು ದೇವಿಗೆ ಭಕ್ತಿ ಸಮಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts