More

    ಅಮೆಜಾನ್ ಪ್ರೈಮ್‌ನಲ್ಲಿ ಇನ್ನು ಕ್ರಿಕೆಟ್ ನೇರಪ್ರಸಾರವನ್ನೂ ನೋಡಬಹುದು!

    ನವದೆಹಲಿ: ಭಾರತದಲ್ಲಿನ ಪ್ರಮುಖ ವಿಡಿಯೋ ಸ್ಟ್ರೀಮಿಂಗ್ ಸರ್ವಿಸ್ ಸಂಸ್ಥೆಯಾಗಿರುವ ‘ಅಮೆಜಾನ್ ಪ್ರೈಮ್ ವಿಡಿಯೋ’ ಇದೀಗ ಕ್ರಿಕೆಟ್ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕುಗಳನ್ನೂ ಪಡೆದುಕೊಂಡಿದೆ. 2025-26ರವರೆಗೆ ಭಾರತದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ.

    ಪ್ರಮುಖ ಕ್ರಿಕೆಟ್ ಮಂಡಳಿಯೊಂದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದ ಹಕ್ಕು ಪಡೆದುಕೊಂಡ ದೇಶದ ಮೊದಲ ಸ್ಟ್ರೀಮಿಂಗ್ ಸರ್ವಿಸ್ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ.

    2021ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯುವ ಎಲ್ಲ ಪುರುಷರ ಮತ್ತು ಮಹಿಳೆಯರ ಏಕದಿನ, ಟಿ20 ಮತ್ತು ಟೆಸ್ಟ್ ಪಂದ್ಯಗಳನ್ನು ಭಾರತದಲ್ಲಿ ನೇರಪ್ರಸಾರ ಮಾಡುವ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. 2022ರಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಸರಣಿಯ ಪಂದ್ಯಗಳನ್ನೂ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ. 2025-26ಕ್ಕೆ ಮುನ್ನ ಭಾರತ ತಂಡ ಮತ್ತೊಮ್ಮೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಆ ಸರಣಿಯ ಪಂದ್ಯಗಳನ್ನೂ ಅಮೆಜಾನ್ ಪ್ರೈಮ್ ವಿಡಿಯೋ ನೇರಪ್ರಸಾರ ಮಾಡಲಿದೆ.

    ವಿಶ್ವ ಏಕದಿನ ರ‌್ಯಾಂಕಿಂಗ್‌ನಲ್ಲಿ 3 ಮತ್ತು ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಆಡುವ ಎಲ್ಲ ಪಂದ್ಯಗಳನ್ನೂ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇನ್ನು ನೋಡಬಹುದಾಗಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಮೊದಲ ಬಾರಿ ಮಹಿಳೆಗೆ ಮಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts