More

    ಮತ್ತೊಮ್ಮೆ ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​ ನಿಮಗಾಗಿ: ಈ ಬಾರಿ ಇರಲಿದೆ ಅತ್ಯಾಕರ್ಷಕ ಆಫರ್​ಗಳು!

    ನವದೆಹಲಿ: ಕಳೆದ ಬಾರಿ ಅಮೆಜಾನ್ ಗ್ರೇಟ್​ ಇಂಡಿಯನ್​ ಸೇಲ್​ನಿಂದ ವಂಚಿತರಾಗಿದ್ದೀರಾ​… ಚಿಂತಿಸಬೇಡಿ ಈ ಬಾರಿ ನಿಮಗಾಗಿ ಮತ್ತೊಮ್ಮೆ ಗ್ರೇಟ್​ ಇಂಡಿಯನ್​ ಸೇಲ್​ ಅನ್ನು ಅಮೆಜಾನ್​ ಹೊತ್ತು ತರಲಿದ್ದು, ಸ್ಮಾರ್ಟ್​ಫೋನ್ಸ್​, ಲ್ಯಾಪ್​ಟಾಪ್ಸ್​ ಮತ್ತು ಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಉತ್ತಮ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದೆ.

    ಹೌದು, ಜನವರಿ 19 ರಿಂದ ಜನವರಿ 22ರವರೆಗೆ ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​ ಇರಲಿದೆ. ವಿಶೇಷವಾಗಿ ಅಮೆಜಾನ್​ ಪ್ರೈಮ್​ ಬಳಕೆದಾರರಿಗೆ ಮುಂಚಿತವಾಗಿಯೇ ಅವಕಾಶ ಮಾಡಿಕೊಡಲಾಗಿದ್ದು, ಜನವರಿ 18ರ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ.

    ವಿವಿಧ ಸ್ಮಾರ್ಟ್​ಫೋನ್​ಗಳ ಮೇಲೆ ಶೇ 40ರವರೆಗೂ, ಎಲೆಕ್ಟ್ರಾನಿಕ್ಸ್​ ಮತ್ತು ಟಿವಿ ಮೇಲೆ ಶೇ 60ರವರೆಗಿನ ರಿಯಾಯಿತಿ ದರದಲ್ಲಿ ಅಮೆಜಾನ್​ ಮಾರಾಟ ಮಾಡಲಿದೆ. ಇದರೊಂದಿಗೆ ವಿವಿಧ ಬ್ರ್ಯಾಂಡ್​ಗಳ ಮೇಲೆ ಒಳ್ಳೆಯ ಆಫರ್​ಗಳನ್ನು ಒದಗಿಸಲಾಗುತ್ತಿದೆ. ಒನ್​ಪ್ಲಸ್​ ಸ್ಯಾಮ್​ಸಂಗ್​, ಕ್ಸಿಯೋಮಿ, ಆ್ಯಪಲ್​, ವಿವೋ, ಒಪ್ಪೋ, ನೋಕಿಯಾ, ಹಾನರ್​ ಮತ್ತು ಹುವಾಯಿ ಬ್ರ್ಯಾಂಡ್​ಗಳು ಗ್ರಾಹಕರಿಗಾಗಿ ಉತ್ತಮ ಆಫರ್​ ನೀಡಲಿವೆ.

    ಸ್ಮಾರ್ಟ್​ಫೋನ್​ಗಳಾದ ಕ್ಸಿಯೋಮಿ ರೆಡ್​ಮಿ ನೋಟ್​ 8 ಪ್ರೊ, ದಿ ಒನ್​ಪ್ಲಸ್​ 7ಟಿ, ದಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಂ30 ಮತ್ತು ವಿವೋ ಯು20 ಗ್ರೇಟ್​ ಇಂಡಿಯನ್​ ಸೇಲ್​ ಭಾಗವಾಗಿರಲಿದೆ.

    ಮೊಬೈಲ್​ ಬಿಡಿಭಾಗಗಳೂ ಕೂಡ ರಿಯಾಯಿತಿ ದರದಲ್ಲಿ ದೊರೆಯಲಿದ್ದು, 69 ರೂ.ನಿಂದ ಶುರುವಾಗಲಿದೆ. ಇದಲ್ಲದೆ, ಹೆಡ್​ಫೋನ್ಸ್​, ಲ್ಯಾಪ್​ಟಾಪ್​ ಮತ್ತು ಟ್ಯಾಬ್ಲೆಟ್​ ಬಿಡಿಭಾಗಗಳು ಮತ್ತು ಪೆನ್​ಡ್ರೈವ್ಸ್​ ಹಾಗೂ ಮೊಮೊರಿ ಕಾರ್ಡ್​ ಕೇವಲ 299, 99 ಮತ್ತು 199 ರೂ.ನಿಂದ ಆರಂಭವಾಗಲಿದೆ.

    ಎಸ್​ಬಿಐ ಕ್ರೆಡಿಟ್​ ಕಾರ್ಡ್ಸ್​ ಮತ್ತು ಇಎಂಐಗೆ ತಕ್ಷಣ 10 ರಷ್ಟು ರಿಯಾಯಿತಿ ದೊರೆಯಲಿದೆ. ಬಜಾಜ್​ ಫಿನ್ಸರ್ವ್​ ಇಎಂಐ ಕಾರ್ಡ್​ ಮೂಲಕ ನೋ ಕಾಸ್ಟ್​ ಇಎಂಐ ಪಡೆಯಬಹುದಾಗಿದೆ. ಐಸಿಐಸಿಐ ಬ್ಯಾಂಕ್​ನ ಡೆಬಿಟ್​ ಮತ್ತು ಕ್ರೆಡಿಟ್​ ಎರಡು ಕಾರ್ಡ್​ಗಳಲ್ಲಿಯೂ ಇಎಂಐ ಸೌಲಭ್ಯ ಪಡೆಯಬಹುದಾಗಿದೆ.

    ಹೊಸದಾಗಿ ಆರ್ಡರ್​ ಮಾಡಿದ ಗ್ರಾಹಕರಿಗೆ ಉಚಿತ ಡೆಲಿವರಿ ಸೇರಿದಂತೆ ವಿಮಾನ, ಬಸ್​ ಹಾಗೂ ಸಿನಿಮಾ ಟಿಕೆಟ್​ ಬುಕ್ಕಿಂಗ್​ಗೆ 2 ಸಾವಿರ ರೂ.ವರೆಗೂ ಕ್ಯಾಶ್​ಬ್ಯಾಕ್​ ಪಡೆಯಬಹುದಾಗಿದೆ. ಇದಷ್ಟೇ ಅಲ್ಲದೆ, ಫ್ಯಾಷನ್​, ದಿನನಿತ್ಯ ಬಳಕೆ ವಸ್ತು, ಸೌಂದರ್ಯ, ಕಿರಾಣಿ ಸೇರಿದಂತೆ ಹಲವು ವಸ್ತುಗಳಿಗೆ ಭಾರಿ ರಿಯಾಯಿತಿಯನ್ನು ಈ ಬಾರಿಯ ಗ್ರೇಟ್​ ಇಂಡಿಯನ್​ ಸೇಲ್​ನಲ್ಲಿ ನೀಡಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts