More

    ದೇಗುಲಗಳಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

    ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮಗಳ ದೇವಸ್ಥಾನದಲ್ಲಿ ಸೋಮವಾರ ದೀಪಾವಳಿ ಹಬ್ಬದ ಅಮಾವಾಸ್ಯೆ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

    ದುಗ್ಗನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ 66ನೇ ವರ್ಷದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಹರಕೆ ಹೊತ್ತ ಭಕ್ತರ ಬಾಯಿ ಬೀಗ ಮೆರವಣಿಗೆ ಹಾಗೂ ಹಾಲರವಿ ಉತ್ಸವ ನಡೆಯಿತು. ನ.14 ರಂದು ಹುಲಿವಾಹನೋತ್ಸವ, ರಾಸುಗಳ ಪಂಜಿನ ಮೆರವಣಿಗೆ, ಅನ್ನಸಂತರ್ಪಣೆ ಮತ್ತು ನ.15 ರಂದು ಮುದ್ದೇಗೌಡನದೊಡ್ಡಿ ಗ್ರಾಮಸ್ಥರಿಂದ ರಥೋತ್ಸವ, ಸಂಜೆ ದುಗ್ಗನಹಳ್ಳಿ, ಹಂಚಿಪುರ, ಮುದ್ದೇಗೌಡನದೊಡ್ಡಿ ಗ್ರಾಮಸ್ಥರು ಜತೆಗೂಡಿ ಮಹದೇಶ್ವರಸ್ವಾಮಿ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಸುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.

    ಸರಗೂರು ಸಮೀಪದ ಮಹದೇಶ್ವರಸ್ವಾಮಿ ದೇವಸ್ಥಾನ, ತೆಂಕಹಳ್ಳಿ ಶನೈಶ್ಚರ, ಬೆಳಕವಾಡಿ ಕಾಶಿ ವಿಶ್ವನಾಥ, ಪೂರಿಗಾಲಿ ಪಾತಾಳೇಶ್ವರ, ಮಿಕ್ಕೆರೆ ವೀರಭದ್ರೇಶ್ವರ, ಹಿಟ್ಟನಹಳ್ಳಿ ದುರ್ಗಾಪರಮೇಶ್ವರಿ, ಮಳವಳ್ಳಿ ಪಟ್ಟಣದ ಮಹದೇಶ್ವರ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿದವು.
    ಬಿ.ಜಿ.ಪುರ ಧರೆಗೆದೊಡ್ಡವರ ಮಂಟೇಸ್ವಾಮಿ ಮಠದಲ್ಲಿ ಆಕಾಶ ತಟ್ಟೆ ಕಟ್ಟುವ ಮೂಲಕ ಪೂಜೆ ಸಲ್ಲಿಸಲಾಯಿತು. ರಾಗಿಬೊಮ್ಮನಹಳ್ಳಿ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts