More

    ಅಮರನಾಥ ಯಾತ್ರೆ ತೆರಳಿದರಿಗೆ ಸಂಕಷ್ಟ

    ವಿಜಯವಾಣಿ ಸುದ್ದಿಜಾಲ ಗದಗ
    ಅಮರನಾಥ ದರ್ಶನ ಮುಗಿಸಿ ಮರಳುವಾಗ ಶುಕ್ರವಾರ ತಡರಾತ್ರಿ ರಸ್ತೆ ಮಧ್ಯೆ ಗುಡ್ಡ ಕುಸಿತದಿಂದ ಗದಗ ನಗರದ 26 ಜನರು ಪತ್ರಗಂಜ ಎಂಬುವ ಸ್ಥಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ. ವಿನೋದ ಪಟೇಲ್​, ನೀತಾ ಪಟೇಲ್​, ಚಂದುಲಾಲ್​, ಭಾವನಾ, ತೇಜಾ, ಶಾರಧಾ, ಬೂಮಿಕಾ, ರಿತೇಶ್​, ಪ್ರವಿಣ, ಟೀನಾ, ರಾಜೇಶ್​, ವೈಶಾಲಿ, ಪಾಲಕ್​, ಯಶ್​, ಪ್ರವಿಣ್​ ಸಿ, ಪಿಂಕಿ ಪಿ, ವಿನಯ, ಜಾನವಿ, ಭವೇಶ್​, ತೃಪ್ತಿ, ದೀವಿಕಾ ಮತ್ತು ಮಾಳವಿಕಾ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಗಳು.
    ರಸ್ತೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್​ ಮೂಲಕ ಯಾತ್ರಿಗಳು ಮನವಿ ಮಾಡಿದ್ದರು. ಈ ವಿಷಯ ಗದಗ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆ ಗಮನಕ್ಕೆ ಬಂದಿದೆ. ಇವರನ್ನು ಮರಳಿ ಕರೆ ತರಲು ಗದಗ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಬಿ.ಎಸ್​. ನಾಮಗೌಡ ಅವರಿಂದ ಹಾಗೂ ಜಿಲ್ಲಾಡಳಿತದಿಂದ ಈಗಾಗಲೇ ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ವಿಶೇಷ ಪ್ರತಿನಿಧಿಗಳು ಹಾಗೂ ಮಿಲಿಟರಿ ಪಡೆ ಸುರಕ್ಷಿತವಾಗಿ ಯಾತ್ರಿಗಳು ಊರಿಗೆ ತೆರಳಲು ಸಹಾಯ ಮಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಜಿಲ್ಲಾ ಪೊಲೀಸ್​ ಇಲಾಖೆ ನಿರಂತರ ಸಂಪರ್ಕದಲ್ಲಿದೆ ಎಂದು ಎಸ್ಪಿ ಬಿ.ಎಸ್​. ನೇಮಗೌಡ ತಿಳಿಸಿದ್ದಾರೆ.

    ಬಾಕ್ಸ್​:
    ಜು.4 ರಂದು ಗದಗ ದಿಂದ ಯುಥ್ಸ್​ ಅಸೋಸಿಯೇಷನ್​ ವತಿಯಿಂದ 6 ಜನರ ಮತ್ತೊಂದು ತಂಡವಾಗಿ ಅಮರನಾಥ ಯಾತ್ರೆಗೆ ತೆರಳಿದ್ದು ಅವರು ಸುರತರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಸೋಶಿಯೇಷನಿನ್​ ಪ್ರಧಾನ ಕಾರ್ಯದಶಿರ್ ರಾಜು ಮುಧೋಳ, ಸಹ ಕಾರ್ಯದಶಿರ್ ಆನಂದ ಗುಡಿಮನಿ, ಸದಸ್ಯರಾದ ತಿಮ್ಮಣ್ಣ ಕೋನರೆಡ್ಡಿ, ಅಜೀತ ವಾರಕರ್​, ಆನಂದ ಸೆಟರೆಡ್ಡಿ, ಮಹಾಲಿಂಗಯ್ಯ ಹಿರೇಮಠ ಅವರು ಸುರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೋಟ್​:
    ಮಳೆ ನಿರಂತರವಾಗಿ ಸುರಿಯುತ್ತಿದೆ. ಏಕಾಏಕಿ ಗುಡ್ಡ ಕುಸಿತ ಪರಿಣಾಮ ಬೇಸ್​ ಕ್ಯಾಂಪ್​ ನಲ್ಲಿ ಇದ್ದೇವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಊಟದ ಸಮಸ್ಯೆ ಎದುರಾಯಿತು. ಇನ್ನೂಳಿದಂತೆ ಇತರೆ ಸಮಸ್ಯೆಗಳಿಲ್ಲ.
    – ವಿಶಾಲ ಮುಂದಡಾ. ಸಂಕಷ್ಟಕ್ಕೆ ಸಿಲುಕಿಕೊಂಡವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts