More

    ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ; ಮಾಜಿ ಅಧಿಕಾರಿಗಳ 243 ಕೋಟಿ ರೂ. ಆಸ್ತಿ ಇಡಿ ವಶಕ್ಕೆ!

    ಬೆಂಗಳೂರು: ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಅಧಿಕಾರಿಗಳಿಗೆ ಸೇರಿದ 243.93 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.

    ಬ್ಯಾಂಕ್‌ನ ಮಾಜಿ ಪ್ರಧಾನ ವ್ಯವಸ್ಥಾಪಕ ಮಹಮ್ಮದ್ ಅಸಾದುಲ್ಲಾ, ಎನ್.ಆರ್. ರಸ್ತೆ ಶಾಖೆಯ ಮಾಜಿ ವ್ಯವಸ್ಥಾಪಕ ಎ.ಶಫಿವುಲ್ಲಾ ಮತ್ತು ಸಂಬಂಧಿಕರಿಗೆ ಸೇರಿದ 243.93 ಕೋಟಿ ರೂ. ಮೌಲ್ಯದ ಆಸ್ತಿಯಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

    ಕೋಟ್ಯಂತರ ರೂ. ಹಣ ದುರುಪಯೋಗ ಆರೋಪದ ಮೇಲೆ ಅಮಾನತ್ ಬ್ಯಾಂಕ್ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧಿಕಾರಿಗಳ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ 2006ರಲ್ಲಿ ಎಫ್​ಐಆರ್ ದಾಖಲಾಗಿತ್ತು. ಹೆಚ್ಚಿನ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಮನಿ ಲಾಂಡರಿಂಗ್ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ.

    ಆರೋಪಿತರು ತಮ್ಮ ಸಂಬಂಧಿಕರ ಮತ್ತು ಸಂಸ್ಥೆಗಳ ಹೆಸರಿನಲ್ಲಿ 50 ಬ್ಯಾಂಕ್ ಖಾತೆ ತೆರೆದು 68.43 ಕೋಟಿ ರೂ. ಡ್ರಾ ಮಾಡಿಕೊಂಡಿದ್ದರು. 1997 ರಿಂದ 2002ರ ವರೆಗೆ 50 ನಕಲಿ ಖಾತೆ ತೆರೆದಿದ್ದರು. ಜತೆಗೆ 165 ಗೃಹ ಸಾಲ ಖಾತೆ ಹಾಗೂ 8 ರಿಯಲ್ ಎಸ್ಟೇಟ್ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕ್ ಹಣವನ್ನು ಬೇರೆಡೆ ವರ್ಗಾವಣೆ ಮಾಡಿಕೊಂಡಿದ್ದರು. ಈ ಪೈಕಿ 40 ಸಾಲದ ಖಾತೆ ಸ್ಥಗಿತವಾಗಿವೆ. ಉಳಿದ ಖಾತೆಗಳಿಂದ 79.30 ಕೋಟಿ ರೂ. ಬರಬೇಕಿದೆ. ಬ್ಯಾಂಕ್‌ಗೆ ಸೇರಿದ ಹಣವನ್ನು ದುರುಪಯೋಗ ಪಡಿಸಿಕೊಂಡು ಭೂಮಿ ಮೇಲೆ ಹೂಡಿಕೆ ಮಾಡಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

    ಆರೋಪಿತರಿಗೆ ಸೇರಿದ ಬೇಗೂರು ಹೋಬಳಿ ಬನ್ನೇರುಘಟ್ಟ ರಸ್ತೆಯ ಎನ್.ಎಸ್.ಪಾಳ್ಯದಲ್ಲಿನ ಮೊಹಮ್ಮದ್ ಅಸಾದುಲ್ಲಾ, ಎ.ಶಫೀವುಲ್ಲಾ ಮತ್ತು ಸಂಬಂಧಿಕರ ಹೆಸರಿನಲ್ಲಿ ಇರುವ ಒಟ್ಟು 8 ಎಕರೆ ಆಸ್ತಿ (243.93 ಕೋಟಿ ಮೌಲ್ಯ) ಜಪ್ತಿ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

    ಪಿಎಂ ಭೇಟಿಯಾದ ಸಂಸದ ಮುನಿಸ್ವಾಮಿ; ಕೆಜಿಎಫ್, ಕ್ಲಾಕ್ ಟವರ್ ವಿಷಯ ಪ್ರಸ್ತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts